ಮಡಿಕೇರಿ, ಜ. ೧೭: ರಾಜಾಸೀಟ್ ಆವರಣ ಸೇರಿದಂತೆ ನಗರದ ಬೀದಿಬದಿಗಳಲ್ಲಿ ವ್ಯಾಪಾರ ನಡೆಸುತ್ತಿರುವವರ ಸ್ಥಳಾಂತರಕ್ಕೆ ಕ್ರಮವಹಿಸಲಾಗಿದ್ದು, ಈ ನಿಟ್ಟಿನಲ್ಲಿ ೩ ಕಡೆಗಳಲ್ಲಿ ಜಾಗ ಗುರುತು ಮಾಡಲಾಗಿದೆ ಎಂದು ನಗರಸಭಾ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ ತಿಳಿಸಿದರು.
ಈ ಕುರಿತು ‘ಶಕ್ತಿ’ಗೆ ಪ್ರತಿಕ್ರಿಯಿಸಿದ ಅವರು, ಬೀದಿಬದಿ ವ್ಯಾಪಾರದಿಂದ ಸಂಚಾರಕ್ಕೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಸ್ಥಳೀಯರಿಂದ ವ್ಯಾಪಕ ದೂರುಗಳು ಕೇಳಿಬರುತ್ತಿವೆ. ರಾಜಾಸೀಟ್ ಆವರಣದಲ್ಲಿ ವ್ಯಾಪಾರ ನಡೆಸುತ್ತಿದ್ದ ವ್ಯಾಪಾರಿಗಳನ್ನು ಸ್ಥಳಾಂತರಗೊಳ್ಳುವAತೆ ಹಲವು ಬಾರಿ ಮನವಿ ಮಾಡಿದರು ಅವರು ಸ್ಥಳಾಂತರಗೊಳ್ಳುತ್ತಿಲ್ಲ. ಕಾಲವಕಾಶ ವನ್ನು ನೀಡಿದರೂ ಯಾವುದೇ ತೀರ್ಮಾನ ವ್ಯಾಪಾರಿಗಳಿಂದ ಬಂದಿಲ್ಲ. ನಾಗರಿಕರ ದೂರು ಇರುವುದರಿಂದ ಸ್ಥಳಾಂತರವೊAದೆ ಪರಿಹಾರೋಪಾಯವಾಗಿದೆ. ನಗರದ ಪ್ರಮುಖ ಬೀದಿಗಳ ಬದಿಯಲ್ಲಿ ವ್ಯಾಪಾರ ನಡೆಸುತ್ತಿರುವ ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಪಾದಚಾರಿಗಳಿಗೂ ಕಿರಿಕಿರಿ ಯಾಗುತ್ತಿದೆ. ಇವೆಲ್ಲವನ್ನು ಪರಿಗಣಿಸಿ ನಗರದ ನಾರ್ತ್ಕೂರ್ಗ್ ಕ್ಲಬ್ ಎದುರು, ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ಸಮೀಪ ಹಾಗೂ ನಗರಸಭೆ ಸಮೀಪದ ಕೆ.ಇ.ಬಿ. ಕಚೇರಿ ರಸ್ತೆಯಲ್ಲಿ ಜಾಗವನ್ನು ಗುರುತು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಸಾರ್ವಜನಿಕರಿಗೆ ತೊಂದರೆ ಯಾಗುವುದನ್ನು ತಪ್ಪಿಸುವುದರೊಂದಿಗೆ ವ್ಯಾಪಾರಿಗಳಿಗೂ ಸಮಸ್ಯೆಯಾಗದಂತೆ ಮುನ್ನಡೆಯುವುದು ನಮ್ಮ ಕರ್ತವ್ಯ ವಾಗಿದೆ. ವ್ಯಾಪಾರಿಗಳು ಆಡಳಿತ ದೊಂದಿಗೆ ಕೈಜೋಡಿಸಬೇಕಾಗಿದೆ. ಗುರುತು ಮಾಡಿರುವ ಜಾಗಗಳಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಮೀಸಲಿರಿಸಿ ನಾಮಫಲಕವನ್ನು ಅಳವಡಿಸಲಾಗಿದೆ. ಅವರಿಗೆ ಬೇಕಾದ ಮೂಲಭೂತ ಸೌಲಭ್ಯವನ್ನು ಮುಂದಿನ ದಿನಗಳಲ್ಲಿ ಒದಗಿಸ ಲಾಗುತ್ತದೆ ಎಂದು ಹೇಳಿದರು.