ಕುಶಾಲನಗರ, ಜ. ೧೭: ಕುಶಾಲನಗರ ಕೈಗಾರಿಕೋದ್ಯಮಿಗಳ ಹಾಗೂ ವೃತ್ತಿನಿರತರ ವಿವಿಧೋದ್ದೇಶ ಸಹಕಾರ ಸಂಘದ ೨೦೨೪-೨೯ ರ ಸಾಲಿನ ಆಡಳಿತ ಮಂಡಳಿಯ ಚುನಾವಣೆ ತಾ.೧೮ ರಂದು (ಇಂದು) ನಡೆಯಲಿದೆ.

ಒಟ್ಟು ೧೫ ಮಂದಿ ನಿರ್ದೇಶಕ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಸಹಕಾರ ಕ್ಷೇತ್ರದಲ್ಲಿ ಎರಡು ದಶಕಗಳಿಂದ ಸೇವೆ ಸಲ್ಲಿಸುತ್ತಾ ಬಂದಿರುವ ಸಂಘದ ಅಧ್ಯಕ್ಷರಾದ ಟಿ ಆರ್ ಶರವಣಕುಮಾರ್ ಅವರ ನೇತೃತ್ವದಲ್ಲಿ ೧೫ ಮಂದಿ ಸ್ಪರ್ಧಿಸಿದ್ದು, ಓರ್ವ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿದ ವಿ.ಸಿ. ಅಮೃತ್ ಅವರು ಅವಿರೋಧ ಆಯ್ಕೆಗೊಂಡಿದ್ದಾರೆ.

ಇನ್ನೊAದು ತಂಡದಲ್ಲಿ ಏಳು ಮಂದಿ ಸ್ಪರ್ಧೆಯಲ್ಲಿದ್ದು ಈ ಸಂಬAಧ ಚುನಾವಣೆಗೆ ಅಖಾಡ ಸಿದ್ಧವಾಗಿದೆ.

ಬೆಳಿಗ್ಗೆ ೯ ರಿಂದ ಸಂಜೆ ೪ರ ತನಕ ಕುಶಾಲನಗರ ಎಪಿಸಿಎಂಎಸ್ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಲಿದೆ.