ಮಡಿಕೇರಿ, ಜ. ೧೬: ಜಿಲ್ಲೆಯ ವಿವಿಧೆಡೆ ಮಕರ ಸಂಕ್ರಾAತಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಸಂಕ್ರಾAತಿ ಪ್ರಯುಕ್ತ ಜಿಲ್ಲೆಯ ಹಲವೆÀಡೆ ಇರುವ ಅಯ್ಯಪ್ಪ ದೇವಾಲಯಗಳಲ್ಲಿ ವಿಶೇಷ ಪೂಜೆ ಪ್ರಾರ್ಥನೆ ಅನ್ನದಾನ ನೆರವೇರಿತು. ಮಡಿಕೇರಿ ಮುತ್ತಪ್ಪ ದೇವಾಲಯ ಆವರಣದಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ೩೪ನೆ ವರ್ಷದ ಮಕರ ಸಂಕ್ರಾAತಿ ಆಚರಣೆ ಪ್ರಯುಕ್ತ ವಿವಿಧ ಪೂಜಾ ಕೈಂಕರ್ಯಗಳು ೨ ದಿನಗಳ ಕಾಲ ನಡೆದವು. ತಾ.೧೪ ರಂದು ಬೆಳಿಗ್ಗೆ ಗಣಪತಿ ಹೋಮ, ಪಂಚಾಮೃತ ಅಭಿಷೇಕ, ತುಪ್ಪಾಭಿಷೇಕ ಇತ್ಯಾದಿ ಸೇವೆಗಳು ನಡೆದವು. ತಾ.೧೫ ರಂದು ಉಷಾ ಪೂಜೆ, ಶ್ರೀ ಮುತ್ತಪ್ಪ ಹಾಗೂ ಶ್ರೀ ಸುಬ್ರಹ್ಮಣ್ಯ ದೇವರ ಪೂಜೆಗಳು ನಡೆದವು. ದೇವರಿಗೆ ಪಂಚಾಮೃತಾಭಿಷೇಕ, ತುಪ್ಪಾಭಿಷೇಕ, ಕ್ಷೀರಾಭಿಷೇಕ, ಭಸ್ಮಾಭಿಷೇಕ, ಎಳನೀರಾಭಿಷೇಕ, ಪುಷ್ಪಾರ್ಚನೆ ನಡೆಯಿತು.
ದೇವಾಲಯ ಆವರಣದಲ್ಲಿ ನಡೆದ ಕುಟ್ಟಿಚಾತನ್ ದೇವರ ವೆಳ್ಳಾಟಂ, ಶ್ರೀ ಮುತ್ತಪ್ಪ ದೇವರ ವೆಳ್ಳಾಟಂ, ಗುಳಿಗ ದೇವರ ವೆಳ್ಳಾಟಂ ನೋಡಲು ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಹಾಜರಿದ್ದರು. ಅಯ್ಯಪ್ಪ ದೇವರ ಅಲಂಕಾರ ಪೂಜೆ, ಅಯ್ಯಪ್ಪ ದೇವರ ಉತ್ಸವ ಮೂರ್ತಿಯ ಕ್ಷೇತ್ರ ಪ್ರದಕ್ಷಿಣೆ ಬಳಿಕ ಮಧ್ಯಾಹ್ನ ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು. ಸಂಜೆ ಭಕ್ತಾದಿಗಳು ಭಜನೆಯಲ್ಲಿ ಪಾಲ್ಗೊಂಡರು. ಅಲಂಕಾರ ಪೂಜೆ, ಪಡಿಪೂಜೆ ಹಾಗೂ ದೀಪಾರಾಧನೆ ಬಳಿಕ ಭಕ್ತಾದಿಗಳಿಗೆ ಪ್ರಸಾದ ವಿತರಣೆ ಜರುಗಿತು.
ಸೋಮವಾರಪೇಟೆ : ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಸಂಕ್ರಾAತಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು.
ನೆರೆಕರೆಯವರು, ನೆಂಟರಿಷ್ಟರಿಗೆ ಎಳ್ಳುಬೆಲ್ಲ ಹಂಚಿ ಹಬ್ಬದ ಶುಭಾಶಯ ಕೋರಲಾಯಿತು. ಮನೆಯಲ್ಲಿ ವಿವಿಧ ಸಿಹಿ ಖಾದ್ಯಗಳನ್ನು ತಯಾರಿಸಿ ಬಂಧುಗಳಿಗೆ ವಿತರಿಸಲಾಯಿತು. ದೇವಾಲಯಗಳಲ್ಲಿ ಸಂಕ್ರಾAತಿಯAದು ವಿಶೇಷ ಪೂಜೆಗಳು, ಪ್ರಾರ್ಥನೆಗಳು ನೆರವೇರಿದವು.
ಪುಷ್ಪಗಿರಿ ಶ್ರೀ ಶಾಂತಮಲ್ಲಿಕಾರ್ಜುನ ದೇವಾಲಯದಲ್ಲಿ ಹಬ್ಬದ ಅಂಗವಾಗಿ ವಿಶೇಷ ಪೂಜೆ ನಡೆಯಿತು. ಪುಷ್ಪಗಿರಿ ಬೆಟ್ಟದ ಮೇಲಿರುವ ಶಾಂತಮಲ್ಲಿಕಾರ್ಜುನ ದೇವಾಲಯಕ್ಕೆ ವಿಶೇಷ ಶ್ರದ್ಧೆಯಿಂದ ತೆರಳಿ ಬೃಹತ್ ದೀಪವನ್ನು ಹಚ್ಚಲಾಯಿತು. ನಂತರ ದೇವರನ್ನು ಶಾಂತಳ್ಳಿ ಶ್ರೀಕುಮಾರಲಿಂಗೇಶ್ವರ ದೇವಾಲಯಕ್ಕೆ ತರಲಾಯಿತು. ದೇವಾಲಯದ ಪ್ರಧಾನ ಅರ್ಚಕ ನಂದೀಶ್ ಶಾಸ್ತಿçà ನೇತೃತ್ವದಲ್ಲಿ ಪೂಜೆ ನಡೆಯಿತು. ಇಲ್ಲಿನ ಬಸವೇಶ್ವರ ದೇವಾಲಯದಲ್ಲಿ ಆಯೋಜನೆಗೊಂಡಿದ್ದ ಸಂಕ್ರಾAತಿ ಪೂಜೋತ್ಸವದಲ್ಲಿ ವಿವಿಧ ಧಾರ್ಮಿಕ ಕೈಂಕರ್ಯಗಳು ನಡೆದವು. ಸ್ಥಳೀಯ ವಿರಕ್ತಮಠದ ಶ್ರೀ ನಿಶ್ಚಲ ದೇಶೀಕೇಂದ್ರ ಸ್ವಾಮೀಜಿಗಳ ನೇತೃತ್ವದಲ್ಲಿ ಪೂಜಾ ವಿಧಿ ವಿಧಾನಗಳು ಜರುಗಿದವು. ಈ ಸಂದರ್ಭ ದೇವಾಲಯದ ಯಜಮಾನ ಬಿ.ಪಿ. ಶಿವಕುಮಾರ್, ಶೆಟ್ರು ಬಿ.ಆರ್. ಮೃತ್ಯುಂಜಯ ಸೇರಿದಂತೆ ಭಕ್ತಾದಿಗಳು ಉಪಸ್ಥಿತರಿದ್ದರು.
ಸಂಕ್ರಾAತಿ ಮಹೋತ್ಸವ ಹಿನ್ನೆಲೆ ಕೂತಿ ಗ್ರಾಮದ ಚಾವಾಡಿಕಟ್ಟೆಯಲ್ಲಿ ವಿಶೇಷ ಪೂಜೆ ನಡೆಯಿತು. ಗ್ರಾಮದ ಮಹಿಳೆಯರು ಶ್ರದ್ಧಾಭಕ್ತಿಯಿಂದ ಏಣಿಗೆಯನ್ನು ಶಾಂತಳ್ಳಿ ಶ್ರೀಕುಮಾಲಿಂಗೇಶ್ವರ ದೇವಾಲಯಕ್ಕೆ ಕೊಂಡೊಯ್ದರು. ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಹೆಚ್.ಡಿ. ಮೋಹನ್, ಕಾರ್ಯದರ್ಶಿ ವಿನೋದ್ ಕುಮಾರ್ ಸೇರಿದಂತೆ ಪ್ರಮುಖರಾದ ಕಿಶಾನ್, ಕೆ.ಟಿ. ಪರಮೇಶ್, ಬಿ.ಎಂ. ಗಣೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.ಕೂಡಿಗೆ : ಕುಶಾಲನಗರ ತಾಲೂಕು ವ್ಯಾಪ್ತಿಯ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅನೇಕ ಗ್ರಾಮಗಳಲ್ಲಿ ಶ್ರದ್ಧಾಭಕ್ತಿ, ಸಡಗರ ಸಂಭ್ರಮದಿAದ ಗ್ರಾಮಸ್ಥರು ಸಂಕ್ರಾAತಿ ಹಬ್ಬ ಆಚರಣೆ ಮಾಡಿದರು.
ಹಬ್ಬದ ಅಂಗವಾಗಿ ಗ್ರಾಮಗಳಲ್ಲಿ ಮನೆಯ ಮುಂದೆ ವಿವಿಧ ಬಣ್ಣಗಳÀ ರಂಗೋಲಿ, ಆಯಾ ಗ್ರಾಮದ ದೇವಾಲಯದಲ್ಲಿ ದೇವಾಲಯ ಸಮಿತಿಯ ವತಿಯಿಂದ ವಿಶೇಷ ಪೂಜೆ, ಹೋಮ ಹವನ ಸೇರಿದಂತೆ ಪೂಜಾ ಕೈಂಕರ್ಯಗಳು ನಡೆದವು.
ಕೂಡಿಗೆ, ಹೆಬ್ಬಾಲೆ, ತೊರೆನೂರು, ಶಿರಂಗಾಲ ಗ್ರಾಮದ ಅನೇಕ ಗ್ರಾಮಗಳಲ್ಲಿ ಪುಟಾಣಿ ಮಕ್ಕಳು ಹೊಸ ಬಟ್ಟೆಗಳನ್ನು ಧರಿಸಿದ ಅಕ್ಕ ಪಕ್ಕದ ಮನೆಗಳಿಗೆ ಮತ್ತು ತಮ್ಮ ತಮ್ಮ ಬೀದಿಯ ಮನೆಗಳಿಗೆ ತೆರಳಿ ಮನೆಯಲ್ಲಿ ಸಿದ್ಧಪಡಿಸಿದ ಎಳ್ಳು-ಬೆಲ್ಲದ ಮಿಶ್ರಣದ ಸಿಹಿ ಪಟ್ಟಣವನ್ನು ಹಂಚಿ ಹಬ್ಬದ ಶುಭಾಶಯಗಳನ್ನು ಹಂಚಿಕೊAಡರು. ಗ್ರಾಮೀಣ ಪ್ರದೇಶಗಳಲ್ಲಿ ಅನೇಕ ಮಹಿಳೆಯರು ತಾವುಗಳು ಸಾಕಿದ ಹಸುಗಳಿಗೆ ಪೂಜೆ ಸಲ್ಲಿಸಿದರು.
ಕೂಡಿಗೆ ಶ್ರೀ ಉದ್ಭವ ಸುಬ್ರಹ್ಮಣ್ಯ ಸ್ವಾಮಿ ದೇವಾಲಯ ಆವರಣದಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ದೇವಾಲಯದ ಪ್ರಧಾನ ಅರ್ಚಕ ನವೀನ್ ಭಟ್ ಅವರ ನೇತೃತ್ವದಲ್ಲಿ ನಡೆಯಿತು.
ಪೊನ್ನಂಪೇಟೆ : ಪೊನ್ನಂಪೇಟೆ ತಾಲೂಕಿನ ನಿಟ್ಟೂರು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಸಂಕ್ರಾAತಿ ಹಬ್ಬವನ್ನು ಆಚರಿಸಲಾಯಿತು. ಈ ಸಂದರ್ಭ ನಿಟ್ಟೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಚಕ್ಕೇರ ಸೂರ್ಯ ಅಯ್ಯಪ್ಪ ಮಾತನಾಡಿ, ಈ ದಿನ ಸೂರ್ಯ ತನ್ನ ಪಥವನ್ನು ಬದಲಾಯಿಸುತ್ತಾನೆ. ಇದರ ಮೂಲಕ ಬೆಳಕು ಹೆಚ್ಚಾಗುತ್ತಾ ಹೋಗುತ್ತೆ. ಹಾಗೆ ನಮ್ಮಲ್ಲಿ ಇರುವಂತಹ ಅಂಧಕಾರ, ಅಹಂಕಾರ ಎಲ್ಲವನ್ನು ಮರೆತು ನಮ್ಮ ಬದುಕನ್ನು ಸಮಾಜದೊಂದಿಗೆ ಸಮರ್ಪಿಸಿ ಕೊಳ್ಳಬೇಕೆಂದು ಕರೆ ನೀಡಿದರು. ನಂತರ ವಿಶೇಷ ಪೂಜೆ ಏರ್ಪಡಿಸಲಾಗಿತ್ತು. ನಿಟ್ಪೂರು ಗ್ರಾಮ ಪಂಚಾಯಿತಿ ಸದಸ್ಯರಾದ ಕಾಟಿಮಾಡ ಶರೀನ್ ಮುತ್ತಣ್ಣ, ಪಡಿಞರಂಡ ಕವಿತಾ ಪ್ರಭು, ಕುಂಬಾರಕಟ್ಟೆ ಅಪ್ಪಣ್ಣ, ಅಮ್ಮಯ್ಯ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುರೇಶ್, ಸಿಬ್ಬಂದಿ ವರ್ಗದವರು ಮತ್ತು ಗ್ರಾಮಸ್ಥರು ಹಾಜರಿದ್ದರು.
ಶನಿವಾರಸಂತೆ: ಪಟ್ಟಣದ ಬ್ರೆöÊಟ್ ಅಕಾಡೆಮಿ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆಯಲ್ಲಿ ಹೊಸ ವರ್ಷದ ಮೊದಲ ಹಬ್ಬ ಮಕರ ಸಂಕ್ರಾAತಿ ಹಬ್ಬವನ್ನು ಸಂಭ್ರಮದಿAದ ಆಚರಿಸಲಾಯಿತು. ಶಾಲಾ ಆವರಣದಲ್ಲಿ ಚಿತ್ತಾರದ ರಂಗೋಲಿ ಹಾಕಿ, ಕಬ್ಬಿನ ಜಲ್ಲೆ ಮತ್ತು ಬಾಳೆ ಕಂಬವಿಟ್ಟು, ತಳಿರು ತೋರಣ ಕಟ್ಟಿ, ನೂತನ ವಸ್ತç ಧರಿಸಿದ ವಿದ್ಯಾರ್ಥಿಗಳು ಶಿಕ್ಷಕರ ಜತೆಗೂಡಿ ಎಳ್ಳು-ಬೆಲ್ಲ ಸವಿದರು. ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು ಸಡಗರದಿಂದ ಹಬ್ಬವನ್ನು ಆಚರಿಸಿದರು. ವಿದ್ಯಾಸಂಸ್ಥೆ ಕಾರ್ಯದರ್ಶಿ ಹೇಮಾ ಪರಮೇಶ್ ಮಾತನಾಡಿ, ಮಕರ ಸಂಕ್ರಾAತಿ ಸಮೃದ್ಧಿಯ ಸಂಕೇತದ ಹಬ್ಬ, ರೈತರ ಸುಗ್ಗಿಯ ಹಬ್ಬವಾಗಿದೆ. ಎಳ್ಳು-ಬೆಲ್ಲ ಹಂಚಿ ತಿಂದು ಒಳ್ಳೆಯ ಮಾತನಾಡಿ, ವೈಷಮ್ಯ ಮರೆತು ಬಾಂಧವ್ಯ ಬೆಸೆಯಬೇಕು ಎಂದರು.
ಮುಖ್ಯ ಶಿಕ್ಷಕಿ ಟಿ.ಎನ್.ಚೈತ್ರಾ ಮಾತನಾಡಿ, ಜಾನಪದ ಸಂಸ್ಕೃತಿಯ ಈ ಹಬ್ಬದಲ್ಲಿ ಎಳ್ಳು-ಬೆಲ್ಲ ಸವಿದು ಸ್ನೇಹ ಸಂಬAಧ ಗಟ್ಟಿಯಾಗಿಸಿಕೊಳ್ಳಬಹುದು ಎಂದರು. ದ್ಯಾಸಂಸ್ಥೆ ಅಧ್ಯಕ್ಷ ಪರಮೇಶ್, ಶಿಕ್ಷಕಿಯರು, ಸಿಬ್ಬಂದಿ ವರ್ಗದವರು ಹಾಜರಿದ್ದರು.