ಕುಶಾಲನಗರ, ಜ. ೧೭: ಸಂಬAಧಿಕರ ಮನೆಯಲ್ಲಿನ ಸಮಾರಂಭಕ್ಕೆ ತೆರಳಿ ಹಿಂತಿರುಗುತ್ತಿದ್ದ ತಂದೆ ಹಾಗೂ ಪುಟ್ಟ ಮಗಳು ಅವಘಡದಲ್ಲಿ ಇಹಲೋಕ ತ್ಯಜಿಸಿರುವ ಧಾರುಣ ಘಟನೆ ಸಂಭವಿಸಿದೆ. ತಂದೆ ಸ್ಥಳದಲ್ಲೇ ಸಾವನ್ನಪ್ಪಿದರೆ, ಪುಟಾಣಿ ಮಗಳು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ.

ಮಡಿಕೇರಿ ಬಳಿಯ ಕಾಲೂರು ನಿವಾಸಿ, ಪ್ರಸ್ತುತ ಬಸವನಹಳ್ಳಿಯಲ್ಲಿ ನೆಲೆಸಿರುವ ಮಾಜಿ ಯೋಧ ಅಪ್ಪಂಡೇರAಡ ದೇವಯ್ಯ(೪೮) ಹಾಗೂ ಪುತ್ರಿ ನ್ಯಾನ್ಸಿ ದೇವಯ್ಯ(೨.೫ವ) ಸಾವನ್ನಪ್ಪಿದ ದುರ್ದೈವಿಗಳು. ಮಕ್ಕಂದೂರು ಗ್ರಾಮದಲ್ಲಿರುವ ಸಂಬAಧಿಕರ ಮನೆಯಲ್ಲಿ ನಡೆದ ನಾಮಕರಣ ಕಾರ್ಯಕ್ರಮಕ್ಕೆ ತೆರಳಿ ಮನೆಗೆ ವಾಪಸ್ಸಾಗುತ್ತಿದ್ದ ಸಂದರ್ಭ ರಾಷ್ಟಿçÃಯ ಹೆದ್ದಾರಿ ಆನೆಕಾಡು ಬಳಿ ಈ ಅವಘಡ ಸಂಭವಿಸಿದೆ. ಕೊಪ್ಪ ಕಡೆಯಿಂದ ಕಾರ್ಮಿಕರನ್ನು ಕರೆತರುತ್ತಿದ್ದ ಬೊಲೆರೋ ಜೀಪ್ ಹಾಗೂ ದೇವಯ್ಯ ಅವರು ಚಾಲಿಸುತ್ತಿದ್ದ ಮಾರುತಿ ಓಮಿನಿ ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಡಿಕ್ಕಿಯಾದ ರಭಸಕ್ಕೆ ಮಾರುತಿ ಕಾರು ನಜ್ಜುಗುಜ್ಜಾಗಿ ರಸ್ತೆಯಲ್ಲೇ ಪಲ್ಟಿ ಹೊಡೆದರೆ, ಬೊಲೆರೋ ವಾಹನ ಸುಮಾರು ದೂರದವರೆಗೆ ಕಾರನ್ನು ಎಳೆದೊಯ್ದು ಕಾಡಿನೊಳಗೆ ನುಗ್ಗಿದೆ. ಕಾರಿನಿಂದ ರಸ್ತೆಗೆಸೆಯಲ್ಪಟ್ಟ ದೇವಯ್ಯ ಸ್ಥಳದಲ್ಲೇ ಸಾವನ್ನಪ್ಪಿದರೆ, ತಲೆಯ ಹಿಂಭಾಗಕ್ಕೆ ಗಂಭೀರ ಸ್ವರೂಪದ ಗಾಯಗಳಾಗಿ ಜೀವನ್ಮರಣ ಸ್ಥಿತಿಯಲ್ಲಿದ್ದ ಮಗಳನ್ನು ಅದೇ ರಸ್ತೆಯಲ್ಲಿ ಸಾಗುತ್ತಿದ್ದವರು ಆಸ್ಪತ್ರೆಗೆ ಸಾಗಿಸಿದರಾದರೂ ಚಿಕಿತ್ಸೆ ಫಲ ಕಾಣದೆ ಕೊನೆಯುಸಿರೆಳೆದಳು. ಬೊಲೆರೋದಲ್ಲಿದ್ದ ಚಾಲಕ ಕೊಪ್ಪ ಗ್ರಾಮದ ಚೆನಗಲ್‌ಕಾವಲ್ ನಿವಾಸಿ ಅರುಣ ಹಾಗೂ ಇಬ್ಬರು ಕಾರ್ಮಿಕರಿಗೂ ಗಾಯಗಳಾಗಿದ್ದು, ಕುಶಾಲನಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹಿಂದೆಯೇ ಬರುತ್ತಿದ್ದ ಪತ್ನಿ..!

ಮಕ್ಕಂದೂರಿನಲ್ಲಿ ಕಾರ್ಯಕ್ರಮವಿದ್ದ ಕಾರಣ ದೇವಯ್ಯ ಹಾಗೂ ಮಗಳು ನ್ಯಾನ್ಸಿ ಮಾರುತಿ ವ್ಯಾನಿನಲ್ಲಿ ಹೋಗಿದ್ದರು. ಇತ್ತ ಅವರ ಪತ್ನಿ ಸ್ಮಿತಾ ಅತ್ತೂರಿನ ಜ್ಞಾನಗಂಗಾ ಶಾಲೆಯಲ್ಲಿ ಮೂರನೇ ತರಗತಿ ಓದುತ್ತಿರುವ ಮಗ ಬಬನ್ ದೇವಯ್ಯನನ್ನು ಶಾಲೆಗೆ ಕಳುಹಿಸಿ ದ್ವಿಚಕ್ರ ವಾಹನದಲ್ಲಿ ತೆರಳಿದ್ದರು. ಮಧ್ಯಾಹ್ನ ಕಾರ್ಯಕ್ರಮದಿಂದ ವಾಪಸ್ ಬರೋವಾಗ ತಂದೆ, ಮಗಳು ಕಾರಿನಲ್ಲಿದ್ದರೆ ಅವರ ಹಿಂದೆ ದ್ವಿಚಕ್ರ ವಾಹನದಲ್ಲಿ ಸ್ಮಿತಾ ಬರುತ್ತಿದ್ದರು. ಆನೆಕಾಡು ಬಳಿ ಬರುತ್ತಿದ್ದಂತೆ ಎದುರಿಗೆರಗಿದ ಬೊಲೆರೋ ವಾಹನ ಡಿಕ್ಕಿಯಾಗಿದೆ. ಪತ್ನಿ ಸ್ಥಳಕ್ಕೆ ತಲಪುವಷ್ಟರಲ್ಲಿ ಪತಿ ದೇವಯ್ಯ ಅವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಇತ್ತ ಮಗಳನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು.

(ಮೊದಲ ಪುಟದಿಂದ)

ಮಗನಿಗೆ ವಿಷಯ ಗೊತ್ತಿಲ್ಲ..!

ಅವಘಡ ಮಧ್ಯಾಹ್ನ ನಡೆದಿದ್ದರೂ ಆ ಸಂದರ್ಭದಲ್ಲಿ ದೇವಯ್ಯ ಅವರ ಮಗ ಶಾಲೆಯಲ್ಲಿದ್ದ. ಸಂಜೆ ಶಾಲೆಯಿಂದ ವಾಪಸ್ ಬರೋವರೆಗೂ ಮಗನಿಗೆ ತನ್ನ ತಂದೆ ಸಾವನ್ನಪ್ಪಿರುವ ವಿಚಾರ ತಿಳಿದಿಲ್ಲ. ಸಂಜೆ ಶಾಲಾ ವಾಹನದಲ್ಲಿ ಮನೆಯ ಬಳಿ ಬಂದು ಇಳಿಯುವಾಗ ಮನೆಯ ಬಳಿ ಜನರನ್ನು ಕಂಡು ಗಾಬರಿಯಾಗಿದ್ದಾನೆ. ನಂತರ ನೆರೆಕರೆಯವರು ವಿಚಾರ ತಿಳಿಸಿದ್ದಾರೆ.

ಈ ವೇಳೆಯಲ್ಲಿ ಅಪ್ಪನ ದೇಹ ಕುಶಾಲನಗರ ಹಾಗೂ ತಂಗಿಯ ದೇಹ ಮಡಿಕೇರಿ ಆಸ್ಪತ್ರೆಯಲ್ಲಿತ್ತು..! ಆಸ್ಪತ್ರೆಗಳಲ್ಲಿ ಸಂಬAಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಸ್ಥಳಕ್ಕೆ ಭೇಟಿ ನೀಡಿದ ಕುಶಾಲನಗರ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

-ಕುಡೆಕಲ್ ಸಂತೋಷ್, ಚಂದ್ರಮೋಹನ್, ಚಿತ್ರ: ಲಕ್ಷಿö್ಮÃಶ್