ಕೂಡಿಗೆ, ಜ. ೧೭: ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿದ್ಧಲಿಂಗಪುರ ಗ್ರಾಮದ ನಾಪಂಡ ಮುತ್ತಪ್ಪ ಅವರ ಕಾಫಿ ತೋಟದಲ್ಲಿ ಬೆಳೆದು ನಿಂತಿದ್ದ ನೂರಾರು ಗಂಧದ ಮರಗಳನ್ನು ಕಡಿದು ಹಾಕಿರುವ ಘಟನೆ ನಡೆದಿದೆ.

ಸಿದ್ಧಲಿಂಗಪುರದ ಸರ್ವೆ ನಂಬರ್ ೮/೧, ,೯/೧, ಮತ್ತು ೩೧/೩, ೩೧/೫, ಜಾಗದಲ್ಲಿ ೧೫ ಅಡಿಗಳಷ್ಟು ಪ್ರಮಾಣದ ಎತ್ತರ ಬೆಳೆದು ನಿಂತಿದ್ದ ೧೦ ಗಂಧದ ಮರಗಳನ್ನು ಕಳೆದ ೧೫ ದಿನಗಳ ಹಿಂದೆ ಕಳ್ಳರು ಕಡಿದು ಅದರ ಹೂರಳನ್ನು ಕದ್ದೊಯ್ದಿದ್ದಾರೆ.

(ಮೊದಲ ಪುಟದಿಂದ) ಕಳೆದ ಎರಡು ದಿನಗಳ ಹಿಂದೆ ಕಾಫಿ ತೋಟದಲ್ಲಿ ಬೆಳೆದು ನಿಂತಿದ್ದ ೧೧೫ ಕ್ಕೂ ಹೆಚ್ಚು ಗಂಧದ ಮರಗಳನ್ನು ಕಳ್ಳರು ಕಡಿದು ನಾಶಪಡಿಸಿದ್ದಾರೆ. ಕಾಫಿ ತೋಟದಲ್ಲಿ ಕಾಫಿ ಫಸಲನ್ನು ಕುಯ್ಲು ಮಾಡಲು ತೆರಳಿದ ಸಂದರ್ಭದಲ್ಲಿ ಈ ವಿಚಾರ ತೋಟದ ಮಾಲೀಕರ ಗಮನಕ್ಕೆ ಬಂದಿದೆ. ಮಾಲೀಕರಾದ ನಾಪಂಡ ಮುತ್ತಪ್ಪ ಬಾಣವಾರದ ಉಪ ವಲಯ ಅರಣ್ಯ ಅಧಿಕಾರಿಗಗಳಿಗೆ ದೂರು ನೀಡಿದ್ದು, ಅದರನ್ವಯ ಸಂಬAಧಿಸಿದ ಸೋಮವಾರಪೇಟೆ ವಲಯ ಅರಣ್ಯ ಅಧಿಕಾರಿ ಚೇತನ್ ಮತ್ತು ಬಾಣವಾರ ಉಪ ವಲಯ ಅರಣ್ಯ ಅಧಿಕಾರಿ ಎಂ.ಕೆ. ಮನು ಸೇರಿದಂತೆ ಸಿಬ್ಬಂದಿ ವರ್ಗದವರು ಸ್ಧಳ ಪರಿಶೀಲನೆ ನಡೆಸಿ ಅರಣ್ಯ ಇಲಾಖೆಯ ಕಾಯ್ದೆ ಅಡಿಯಲ್ಲಿ ಮೊಕದ್ದಮೆ ದಾಖಲು ಮಾಡಿದ್ದಾರೆ.

ಈ ವಿಷಯಕ್ಕೆ ಸಂಬAಧಿಸಿದAತೆ ಗಂಧದ ಕಳ್ಳ ಹಾವಳಿ ವಿಚಾರವಾಗಿ ಕೊಡಗು ಹಾಸನ ಜಿಲ್ಲೆಯ ತಪಾಸಣೆ ಗೇಟ್‌ನಲ್ಲಿ ಹೆಚ್ಚುವರಿಯಾಗಿ ತಪಾಸಣೆ ಮಾಡಲಾಗುತ್ತಿದೆ. ಅಲ್ಲದೇ ಅರಣ್ಯ ಇಲಾಖೆಯ ವತಿಯಿಂದ ರಾತ್ರಿ ಕಾವಲುಗಾರ ಸಂಖ್ಯೆಯನ್ನು ಹೆಚ್ಚು ಮಾಡಿ ಗಂಧದ ಕಳ್ಳ ಸಾಗಾಣಿಕೆ ಮಾಡುವವರನ್ನು ಹಿಡಿಯಲು ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಸೋಮವಾರಪೇಟೆ ಅರಣ್ಯ ವಲಯ ಅಧಿಕಾರಿ ಚೇತನ್ ತಿಳಿಸಿದ್ದಾರೆ.