ಕೂಡಿಗೆ, ಜ. ೧೩: ಇಲ್ಲಿಗೆ ಸಮೀಪದ ಹೆಬ್ಬಾಲೆ ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆ ಅಧ್ಯಕ್ಷೆ ಅರುಣಕುಮಾರಿ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ಸಭೆಯಲ್ಲಿ ಹಾಜರಿದ್ದ ಸದಸ್ಯರು ತಮ್ಮ ವಾರ್ಡ್ಗಳ ಅಭಿವೃದ್ಧಿಗೆ ಪೂರಕವಾದ ವಿಷಯಗಳನ್ನು ಪ್ರಸ್ತಾವನೆ ಮಾಡಿದರು. ಮೂಲಭೂತ ಸೌಕರ್ಯಗಳು, ಶುಚಿತ್ವಕ್ಕೆ ಸಂಬAಧಿಸಿದAತೆ ಚರ್ಚೆಗಳು ನಡೆದವು. ಕಾಡಂಚಿನ ವ್ಯಾಪ್ತಿಯ ಗ್ರಾಮಗಳಿಗೆ ಬಹು ಮುಖ್ಯವಾಗಿ ಬೀದಿದೀಪ ಅಳವಡಿಕೆ, ಕುಡಿಯುವ ನೀರು, ಚರಂಡಿ ಶುಚಿತ್ವ ಸೇರಿದಂತೆ ವಿವಿಧ ಅಭಿವೃದ್ಧಿ ಪೂರಕ ವಿಚಾರಗಳು ಚರ್ಚೆಗೊಂಡವು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಅಧ್ಯಕ್ಷೆ ಅರುಣಕುಮಾರಿ ಮಾತನಾಡಿ, ಸದಸ್ಯರು ಸಭೆಯಲ್ಲಿ ಚರ್ಚೆಸಿದ ವಿಷಯಗಳನ್ನು ಹಂತ ಹಂತವಾಗಿ ಪೂರ್ಣಗೊಳಿಸಲು ಕ್ರಮವನ್ನು ವಹಿಸಲಾಗುವುದು. ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೊಳ್ಳುವ ಮೂಲಕ ಅಭಿವೃದ್ಧಿ ಕೆಲಸಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಅಭಿವೃದ್ಧಿ ಅಧಿಕಾರಿ ಗೂಳಪ್ಪ ಸಭೆಗೆ ಬಂದ ಸಾರ್ವಜನಿಕರ ಅರ್ಜಿಗಳನ್ನು ಸ್ವೀಕರಿಸಿದರು. ಸಭೆಯಲ್ಲಿ ಉಪಾಧ್ಯಕ್ಷೆ ಲತಾ, ಸದಸ್ಯರುಗಳಾದ ಹೆಚ್.ಎಸ್. ಮಂಜುನಾಥ, ಹೆಚ್.ಎನ್. ಶಿವನಂಜಪ್ಪ, ಹೆಚ್.ಜೆ. ನಾರಾಯಣ, ಹೆಚ್.ಪಿ. ತನುಕುಮಾರ್, ಹೆಚ್.ಬಿ. ರತ್ನಮ್ಮ, ಹೆಚ್.ಜೆ. ಪರಮೇಶ, ಹೆಚ್.ಸಿ. ಮಹದೇವ, ಬಿ.ಬಿ. ಪವಿತ್ರ, ಹೆಚ್.ವಿ. ಯಶಸ್ವಿನಿ ಹಾಜರಿದ್ದರು.