ಸೋಮವಾರಪೇಟೆ, ಜ. ೧೩: ಟ್ರಾö್ಯಕ್ಟರ್‌ನಲ್ಲಿ ಹುಲ್ಲು ಸಾಗಿಸುತ್ತಿದ್ದ ಸಂದರ್ಭ ಸೋಮವಾರಪೇಟೆ- ಶಾಂತಳ್ಳಿ ರಾಜ್ಯ ಹೆದ್ದಾರಿಯಲ್ಲಿ ಆಕಸ್ಮಿಕವಾಗಿ ಹುಲ್ಲಿಗೆ ಬೆಂಕಿ ತಾಗಿ ಭಾರೀ ಅನಾಹುತ ತಪ್ಪಿದ ಘಟನೆ ಇಂದು ಸಂಜೆ ನಡೆದಿದೆ.

ಕುಂದಳ್ಳಿ ಗ್ರಾಮದ ಪ್ರವೀಣ್ ಎಂಬವರಿಗೆ ಸೇರಿದ ಟ್ರಾö್ಯಕ್ಟರ್‌ನಲ್ಲಿ ಬಸವನಕಟ್ಟೆಯಿಂದ ಹುಲ್ಲನ್ನು ಲೋಡ್ ಮಾಡಿ ಸಾಗಿಸುತ್ತಿದ್ದ ಸಂದರ್ಭ, ಯಡೂರು ಗ್ರಾಮದ ಮಾರಿಗುಡಿ ದೇವಾಲಯ ಮುಂಭಾಗ ವಿದ್ಯುತ್ ತಂತಿಗೆ ತಗುಲಿ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ. ತಕ್ಷಣ ಸ್ಥಳೀಯರು ಧಾವಿಸಿ ಟ್ರಾö್ಯಕ್ಟರ್‌ನಲ್ಲಿದ್ದ ಹುಲ್ಲನ್ನು ಎಳೆದು ರಸ್ತೆ ಬದಿ ಎಸೆಯುವ ಮೂಲಕ ಮುಂದಾಗಬಹುದಾಗಿದ್ದ ಅಪಾಯವನ್ನು ತಪ್ಪಿಸಿದ್ದಾರೆ. ಆದರೆ ಹುಲ್ಲಿಗೆ ಹತ್ತಿಕೊಂಡಿದ್ದ ಬೆಂಕಿ ಕೆಲಕಾಲ ಹೊತ್ತಿ ಉರಿದಿದ್ದರಿಂದ ಶಾಂತಳ್ಳಿ ಮುಖ್ಯರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ತಡೆಯಾಗಿತ್ತು. ನಂತರ ಸ್ಥಳೀಯರೊಂದಿಗೆ ಅಗ್ನಿಶಾಮಕ ದಳದವರು ತೆರಳಿ ಬೆಂಕಿ ನಂದಿಸಿದ ತರುವಾಯ, ವಾಹನಗಳ ಸಂಚಾರಕ್ಕೆ ರಸ್ತೆ ಮುಕ್ತವಾಯಿತು.