ಮಡಿಕೇರಿ, ಜ. ೧೩: ಕತ್ತಲೆಕಾಡಿನ ಹದಗೆಟ್ಟ ರಸ್ತೆಗೆ ಕೊನೆಗೂ ಡಾಂಬರೀ ಕರಣದ ಭಾಗ್ಯ ದೊರೆತಿದೆ. ಕಳೆದೆರಡು ವರ್ಷಗಳಿಂದ ಕತ್ತಲೆಕಾಡು ಜಂಕ್ಷನ್‌ನಿAದ ಸುಮಾರು ಅರ್ಧ ಕಿಲೋ ಮೀಟರ್ ರಸ್ತೆ ತೀರಾ ಹದಗೆಟ್ಟು ಸಂಚರಿಸಲೇ ಆಗದಷ್ಟು ಗುಂಡಿಮಯವಾಗಿತ್ತು. ಇದೀಗ ರಸ್ತೆ ಕಾಮಗಾರಿಗೆ ಅಗತ್ಯ ಸಾಮಗ್ರಿಗಳನ್ನು ತಂದಿಡಲಾಗಿದೆ. ಇಂದು ರಸ್ತೆ ಡಾಂಬರೀಕರಣ ಆರಂಭಗೊಳ್ಳಲಿದೆ. ಈ ಹಿನ್ನೆಲೆ ತಾ.೧೪ ರಂದು (ಇಂದು) ರಸ್ತೆ ಸಂಚಾರ ದಲ್ಲಿ ವ್ಯತ್ಯಯ ಉಂಟಾಗಲಿದ್ದು, ವಾಹನ ಸವಾರರು ರಸ್ತೆ ನಿರ್ಮಾಣಕ್ಕೆ ಸಹಕರಿಸಬೇಕಾಗಿ ಗುತ್ತಿಗೆದಾರರು ತಿಳಿಸಿದ್ದಾರೆ. ವಾಹನಗಳು ಬದಲಿ ಮಾರ್ಗ ವಾದ ಹಾಕತ್ತೂರು-ಮರಗೋಡು ರಸ್ತೆಯ ಮೂಲಕ ಸಂಚರಿಸಬಹು ದಾಗಿದೆ. ರಸ್ತೆಯ ದುಸ್ಥಿತಿ ಬಗ್ಗೆ ‘ಶಕ್ತಿ’ಯಲ್ಲಿ ವರದಿ ಪ್ರಕಟಗೊಂಡಿತ್ತು. ಇದೀಗ ಕತ್ತಲೆಕಾಡಿನ ಗುಂಡಿಮಯ ರಸ್ತೆಗೆ ಮುಕ್ತಿ ದೊರಕುವಂತಾಗಿದೆ.