ಮಡಿಕೇರಿ, ಜ. ೧೩: ಕೊಡವರಂತಹ ಆದಿಮ ಸಂಜಾತ ಸಮುದಾಯದ ಉಳಿವಿಗಾಗಿ ಸಂವಿಧಾನದಡಿಯಲ್ಲಿ ನ್ಯಾಯಸಮ್ಮತವಾದ ಹಕ್ಕುಗಳನ್ನು ಪ್ರತಿಪಾದಿಸಲು ಅವಕಾಶವಿದ್ದು, ಸ್ವಯಂ ನಿರ್ಣಯದ ಹಕ್ಕಿನ ಮೂಲಕ ಕೊಡವ ಲ್ಯಾಂಡ್ ಹೊಂದುವುದು ಕೊಡವರ ಅಂತರ್ಗತ, ಮೂಲಭೂತ, ಜನ್ಮಸಿದ್ಧ ಹಕ್ಕಾಗಿದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು. ನಾಚಪ್ಪ ಪ್ರತಿಪಾದಿಸಿದ್ದಾರೆ.

ರಾಜ್ಯದಲ್ಲಿ ಇತರರ ಬಗ್ಗೆ ಎಂದಿಗೂ ಕಾಳಜಿ ಇಲ್ಲದ ಕೆಲವು ಜನರು ಊಳಿಗಮಾನ್ಯ ಮನೋಭಾವದಿಂದ ರಾಜ್ಯವನ್ನು ಆಳುತ್ತಿದ್ದಾರೆ. ಅವರು ರಾಜ್ಯದ ಕನಿಷ್ಟ ೬೦ ವಿಧಾನಸಭಾ ಕ್ಷೇತ್ರಗಳಲ್ಲಿ ಬಹುಮತವನ್ನು ಹೊಂದಿದ್ದಾರೆ ಮತ್ತು ತಮ್ಮ ೬೦ ವಿಧಾನಸಭಾ ಕ್ಷೇತ್ರಗಳ ಭಾಗವಾಗಿರುವ ಇತರ ಸೂಕ್ಷ÷್ಮ ಸಮುದಾಯಗಳ ಯೋಗಕ್ಷೇಮದ ಬಗ್ಗೆ ಅವರು ಎಂದಿಗೂ ತಲೆಕೆಡಿಸಿಕೊಂಡಿಲ್ಲ ಎಂದು ಟೀಕಿಸಿದ್ದಾರೆ.

ಕೊಡವರಂತಹ ಆದಿಮ ಸಂಜಾತ ನಗಣ್ಯ ಅತೀಸೂಕ್ಷ÷್ಮ ಸಮುದಾಯಗಳು ತಮ್ಮ ಉಳಿವಿಗಾಗಿ ಸಂವಿಧಾನದಡಿಯಲ್ಲಿ ನ್ಯಾಯ ಸಮ್ಮತವಾದ ಹಕ್ಕುಗಳನ್ನು ಪ್ರತಿಪಾದಿಸಿದರೆ, ಕೆಲವು ಕೋಮುವಾದಿಗಳು ಕೊಡವರ ಹಕ್ಕುಗಳು ಇತರ ಸಮುದಾಯದ ಹಿತಾಸಕ್ತಿಗಳಿಗೆ ಧಕ್ಕೆ ತರುತ್ತವೆ ಎಂದು ಅರ್ಥಹೀನವಾಗಿ ವರ್ತಿಸುತ್ತಿದ್ದಾರೆ. ತಾವು ಬಹುದೊಡ್ಡ ಮಾನವತಾವಾದದ ಹರಿಕಾರರು ಮತ್ತು ಸಾಮಾಜಿಕ ಸಮತಾವಾದದ ವೀರಾಗ್ರೇಸರೆಂದು ಹುಸಿಯಾಗಿ ಬಿಂಬಿಸಿಕೊಳ್ಳುತ್ತಿದ್ದಾರೆ.

ಸುಳ್ಯ-ಬೆಳ್ತAಗಡಿಯಿAದ ಹಾವೇರಿ ತನಕ, ಹಾವೇರಿಯಿಂದ ಚಿತ್ರದುರ್ಗ, ಚಿತ್ರದುರ್ಗದಿಂದ ಕೋಲಾರÀ, ಕೋಲಾರದಿಂದ ಚಾಮರಾಜನಗರ, ಚಾಮರಾಜನಗರದಿಂದ ಪಿರಿಯಾಪಟ್ಟಣದವರೆಗಿನ ದಟ್ಟ ಬಾಹುಳ್ಯ ಪ್ರದೇಶದಲ್ಲಿ ತಮ್ಮ ಜನಸಂಖ್ಯಾ ತೂಕವನ್ನು ಹೊಂದಿರುವ ಬಲಾಢ್ಯರು ಮಾನಸಿಕ ಯುದ್ಧದ ಮೂಲಕ ನಮ್ಮನ್ನು ಬೆದರಿಸಲು ಮತ್ತು ಕೊಡವರಲ್ಲಿ ಭಯದ ಮನೋವಿಕಾರವನ್ನು ಉಂಟು ಮಾಡಲು ಪ್ರಯತ್ನಿಸುತ್ತಿದ್ದಾರೆ. ಈ ಕೃತ್ಯಕ್ಕೆ ರಾಜ್ಯದ ಇತರ ಸಣ್ಣಪುಟ್ಟ ಸಮುದಾಯಗಳನ್ನು ಮಾನವ ಗುರಾಣಿಯಾಗಿ ಬಳಸಿಕೊಳ್ಳುತ್ತಾರೆ. ವಾಸ್ತವವಾಗಿ ಅವರಿಗೆ ಪರಿಶಿಷ್ಟರು ಹಾಗೂ ರಾಜ್ಯದ ಇತರ ಅಳಿವಿನಂಚಿನಲ್ಲಿರುವ ಕೆಳ ಹಂತದ ಸಮುದಾಯಗಳ ಬಗ್ಗೆ ಕಾಳಜಿ ಅಥವಾ ಪ್ರೀತಿ ಲವಲೇಶವೂ ಇಲ್ಲ ಎಂದು ಆರೋಪಿಸಿದ್ದಾರೆ.