ಚೆಯ್ಯಂಡಾಣೆ/ಕಡAಗ, ಜ. ೧೪: ಸಮಾಜದಲ್ಲಿ ಎಲ್ಲರೂ ಪರಸ್ಪರ ಅರ್ಥ ಮಾಡಿಕೊಂಡು ಸೌಹಾರ್ದತೆಯ ಸಮಾಜವನ್ನು ಕಟ್ಟಬೇಕೆಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವೀರಾಜಪೇಟೆ ಕ್ಷೇತ್ರದ ಶಾಸಕರಾದ ಎ.ಎಸ್. ಪೊನ್ನಣ್ಣ ಹೇಳಿದರು.
ಸುನ್ನಿ ಯುವಜನ ಸಂಘ (ಎಸ್.ವೈ.ಎಸ್) ಹಾಗೂ ಸಮಸ್ತ ಕೇರಳ ಸುನ್ನಿ ಸ್ಟೂಡೆಂಟ್ ಫೆಡರೇಷನ್ (ಎಸ್.ಕೆ.ಎಸ್.ಎಸ್.ಎಫ್) ಕಡಂಗ ಶಾಖೆಯ ಸಂಯುಕ್ತ ಆಶ್ರಯದಲ್ಲಿ ಕಡಂಗ ಕೊಕ್ಕಂಡಬಾಣೆ ದರ್ಗಾ ಷರೀಫ್ ಸಭಾಂಗಣದಲ್ಲಿ ಆಯೋಜಿಸಲಾದ ಬಡ ಹೆಣ್ಣುಮಕ್ಕಳ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಇಂತಹ ಕಾರ್ಯಕ್ರಮಗಳಿಂಧ ಬಡ ಮಕ್ಕಳು, ಅನಾಥರು ವಿವಾಹವಾಗಲು ಅನುಕೂಲವಾಗುತ್ತದೆ ಎಂದರು.
ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಮಾತನಾಡಿ, ಸಂಘಟನೆ ಬೇರೆಯವರ ಕಷ್ಟಗಳಿಗೆ ಸ್ಪಂದಿಸುತ್ತಿರುವುದು ಶ್ಲಾಘನೀಯ ಎಂದರು.
ಕೊಡಗು ಜಿಲ್ಲಾ ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಯಾಕೂಬ್, ಅಬ್ದುಲ್ ರಹ್ಮಾನ್, ಎಸ್.ವೈ.ಎಸ್ ಜಿಲ್ಲಾಧ್ಯಕ್ಷ ಬಷೀರ್ ಹಾಜಿ, ಮೈಸಿ ಕತ್ತಣಿರ ಮಾತನಾಡಿದರು.
ಸಂಘಟನೆ ಕಳೆದ ೨ ವರ್ಷದಿಂದ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಂಡು ಬರುತ್ತಿದ್ದು ಈ ವರ್ಷ ೫ ಜೋಡಿಗಳಿಗೆ ಕಂಕಣ ಭಾಗ್ಯ ನೀಡಿದೆ. ಕೊಳಕೇರಿ, ಬಜೆಗೊಲ್ಲಿ, ಚೆರಿಯಪರಂಬು, ಹಾಕತ್ತೂರು, ಎಮ್ಮೆಮಾಡುವಿನ ೫ ಬಡ ಹೆಣ್ಣು ಮಕ್ಕಳನ್ನು ವಿವಾಹಕ್ಕೆ ಆಯ್ಕೆ ಮಾಡಲಾಗಿತ್ತು.
ಕಾರ್ಯಕ್ರಮದಲ್ಲಿ ವಧು ವರರಿಗೆ ಬೇಕಾದ ಮಾಂಗಲ್ಯ ಚಿನ್ನಾಭರಣ, ವಸ್ತç, ಕೈ ಗಡಿಯಾರವನ್ನು ಸಂಘಟನೆ ಉಚಿತವಾಗಿ ನೀಡಿತು.
ಸೈಯ್ಯದ್ ಜೈನುಲ್ ಆಬಿದೀನ್ ಜಿಫ್ರಿತಂಙಳ್ ಬೆಳ್ತಂಗಡಿ ನಿಖಾ ಕಾರ್ಯಕ್ರಮಕ್ಕೆ ನೇತೃತ್ವ ವಹಿಸಿ ಮಾತನಾಡಿ, ನೆರಮನೆಯವರ ಹಸಿವನ್ನು ನೀಗಿಸುವುದು ಮುಖ್ಯ. ಅದನ್ನು ಅರಿಯದೆ ಉಳಿದವರಿಗೆ ಸಹಕರಿಸಿ ಪ್ರಯೋಜನವಿಲ್ಲ ಎಂದರು.
ಕೊಡಗು ಜಿಲ್ಲಾ ನಾಇಬ್ ಖಾಝಿ ಹಾಗೂ ಸಮಸ್ತ ಮುಶಾವರ ಸದಸ್ಯರಾದ ಅಬ್ದುಲ್ಲ ಫೈಝಿ ಎಡಪಾಲ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ವಲಿಯುದ್ದೀನ್ ಫೈಝಿ ವಝಕ್ಕಾಡ್ ನೂರೇ ಆಜ್ಮಿರ್ ಅಧ್ಯಾತ್ಮಿಕ ಮಜ್ಲಿಸ್ ನೇತೃತ್ವ ವಹಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಡಂಗ ಮೊಯ್ಯದ್ದೀನ್ ಜುಮಾ ಮಸೀದಿಯ ಅಧ್ಯಕ್ಷ ಅಬ್ದುಲ್ಲ ವಹಿಸಿದ್ದರು. ಧ್ವಜಾರೋಹಣವನ್ನು ಎಸ್.ವೈ.ಎಸ್ ಅಧ್ಯಕ್ಷ ಎಂ.ಎA. ಹ್ಯಾರಿಸ್ ಹಾಗೂ ಎಸ್.ಕೆ. ಎಸ್.ಎಸ್.ಎಫ್ ಅಧ್ಯಕ್ಷ ಇಸಾಕ್ ನೆರವೇರಿಸಿದರು. ೩ನಾಲ್ಕನೇ ಪುಟಕ್ಕೆ
(ಮೊದಲ ಪುಟದಿಂದ)
ಈ ಸಂದರ್ಭ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ಅಧ್ಯಕ್ಷ ಹನೀಫ್, ವೀರಾಜಪೇಟೆ ತಾಲೂಕು ಅಲ್ಪಸಂಖ್ಯಾತ ಘಟಕ ಅಧ್ಯಕ್ಷ ರಫೀಕ್, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೋಡಿರ ವಿನೋದ್ ನಾಣಯ್ಯ, ಗ್ರಾಮ ಪಂಚಾಯಿತಿ ಸದಸ್ಯ ಸುಬೈರ್, ಬದ್ರಿಯಾ ಸುನ್ನಿ ಮಸೀದಿ ಅಧ್ಯಕ್ಷ ಉಸ್ಮಾನ್ ಕೆ.ಇ, ಎಸ್ ಕೆ ಎಸ್ ಎಸ್ ಎಫ್ ಜಿಲ್ಲಾಧ್ಯಕ್ಷ ತಮ್ಲಿಕ್ ದಾರಿಮಿ, ವೀರಾಜಪೇಟೆ ಪುರಸಭಾ ಸದಸ್ಯ ಮೊಹಮ್ಮದ್ ರಾಫಿ, ಮೊಯ್ಯದ್ದೀನ್ ಮಸೀದಿ ಖತೀಬ್ ರಫೀಕ್ ಲತೀಫಿ, ಕಾರ್ಯದರ್ಶಿ ಅಬ್ದುಲ್ ರಹ್ಮಾನ್, ಬದ್ರಿಯಾ ಮಸೀದಿ ಖತೀಬ್ ಇಸ್ಮಾಯಿಲ್ ಲತೀಫಿ, ಎಸ್ ಕೆ ಎಸ್ ಎಸ್ ಎಫ್ ಅಧ್ಯಕ್ಷ ಇಸಾಕ್, ಕಾರ್ಯದರ್ಶಿ ಇಕ್ಬಾಲ್, ಪಾಲಚಂಡ ಅಜಿತ್, ಸುರೇಶ್, ಶಾಫಿ ಎಡಪಾಲ, ಜುನೈದ್, ಯೂಸುಫ್ ಮುಸ್ಲಿಯಾರ್, ಇಬ್ರಾಹಿಂ, ಮೊಯ್ದು ಮುಸ್ಲಿಯಾರ್, ಉಸ್ಮಾನ್ ಫೈಝಿ, ಉಮ್ಮರ್ ಫೈಝಿ, ಅಶ್ರಫ್ ಫೈಝಿ, ಹನೀಫ್ ಫೈಝಿ, ಅಂದು ಕಾವು, ಗ್ರಾ.ಪಂ. ಸದಸ್ಯ ಮಮ್ಮದ್, ಜುನೈದ್ ಸಿ.ಎ. ಹಾಗೂ ಸಂಘಟನೆಯ ಪ್ರಮುಖರು ಕಾರ್ಯಕರ್ತರು ಉಪಸ್ಥಿತರಿದ್ದರು. ಸಿನಾನ್ ಶರಫಿ ನಿರೂಪಿಸಿದರು. ಸುಹೈಬ್ ಫೈಝಿ ಸ್ವಾಗತಿಸಿ ವಂದಿಸಿದರು.
ಅಶ್ರಫ್ / ನೌಫಲ್