ಮಡಿಕೇರಿ, ಜ. ೧೪: ತಾ.೧೫ ರಂದು (ಇಂದು) ಲಕ್ನೋದಲ್ಲಿ ನಡೆಯಲಿರುವ ೭೬ನೇ ಆರ್ಮಿ ಡೇ ಪೆರೇಡ್‌ನ ನೇತೃತ್ವವನ್ನು ಮಡಿ ಕೇರಿಯ ಕುವರಿ ಲೆಫ್ಟಿನೆಂಟ್ ಐಶ್ವರ್ಯ ವಹಿಸಲಿದ್ದಾರೆ. ಕಳೆದ ವರ್ಷ ಸೇನಾಧಿಕಾರಿ ಯಾಗಿ ನೇಮಕಗೊಂಡ ಐಶ್ವರ್ಯ ೧೫ ರಂದು ನಡೆಯಲಿರುವ ಆರ್ಮಿ ಏರ್ ಡಿಫೆನ್ಸ್ ಕಂಟಿನ್ಜೆAಟ್ ಅನ್ನು ಮುನ್ನಡೆಸಲಿದ್ದಾರೆ.

ಮಡಿಕೇರಿಯ ಉದ್ಯಮಿ ಗಣೇಶ್ ಅಯ್ಯಣ್ಣ ಹಾಗೂ ಮೋಂತಿ ಗಣೇಶ್ ದಂಪತಿಯ ಪುತ್ರಿ ಐಶ್ವರ್ಯ ಕಳೆದ ಅಕ್ಟೋಬರ್‌ನಲ್ಲಿ ಚೆನ್ನೆöÊನ ಆಫೀಸರ್ ಟ್ರೆöÊನಿಂಗ್ ಅಕಾಡೆಮಿಯಲ್ಲಿ ಆರ್ಮಿ ಏರ್ ಡಿಫೆನ್ಸ್ ರೆಜಿಮೆಂಟ್‌ನ ಅಧಿಕಾರಿಯಾಗಿ ಆಯ್ಕೆಗೊಂಡಿದ್ದರು.

ನಗರದ ಸಂತ ಜೋಸೇಫರ ವಿದ್ಯಾರ್ಥಿನಿಯಾಗಿ, ಬೆಂಗಳೂರಿನ ಜೈನ್ ಯೂನಿವರ್ಸಿಟಿಯಲ್ಲಿ ಬಿಬಿಎ ಪದವಿ ಪಡೆದ ಈಕೆ ದೇಶಸೇವೆಯ ಆಕಾಂಕ್ಷೆ ಹೊಂದಿದ್ದರು. ೨೦೧೭ರ ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ದೆಹಲಿಯಲ್ಲಿ ಎನ್‌ಸಿಸಿ ಕೆಡೆಟ್ ಆಗಿ ಅಖಿಲ ಭಾರತ ವಿದ್ಯಾರ್ಥಿನಿಯರ ಎನ್‌ಸಿಸಿ ಕಂಟಿನ್ಜೆAಟ್ ಅನ್ನು ಮುನ್ನಡೆಸಿದ್ದರು. ಐಶ್ವರ್ಯ ಉತ್ತಮ ಹಾಕಿ ಕ್ರೀಡಾಪಟು ಕೂಡ ಆಗಿದ್ದಾರೆ.