ಮಡಿಕೇರಿ, ಜ. ೧೪: ಸಾರ್ವಜನಿಕ ರಿಂದ ದೂರು ಬರದಂತೆ ಗಮನ ಹರಿಸುವುದು ಅಧಿಕಾರಿ ಮತ್ತು ಸಿಬ್ಬಂದಿಗಳ ಕರ್ತವ್ಯ ಎಂದು ಲೋಕಾ ಯುಕ್ತ ಡಿವೈಎಸ್ಪಿ ವಿ. ಕೃಷ್ಣಯ್ಯ ಅವರು ಸಲಹೆ ಮಾಡಿದ್ದಾರೆ.
ನಗರದ ತಹಶೀಲ್ದಾರ್ ಅವರ ಕಚೇರಿಯಲ್ಲಿ ಸಾರ್ವಜನಿಕರಿಂದ ದೂರು ಅರ್ಜಿ ಸ್ವೀಕರಿಸಿ ಅವರು ಮಾತನಾಡಿದರು. ಕಾನೂನು ಬದ್ಧವಾಗಿ ಸರ್ಕಾರದ ನಿಯಮಾನು ಸಾರ ಕೆಲಸಗಳನ್ನು ಮಾಡಬೇಕು. ಸಾರ್ವಜನಿಕರ ಕೆಲಸ ಆಗದಿರುವುದಕ್ಕೆ ಹಿಂಬರಹ ನೀಡಬೇಕು. ಸಾರ್ವಜನಿಕ ರಿಂದ ದೂರುಗಳು ಬಂದಾಗ ತಕ್ಷಣವೇ ಸ್ಪಂದಿಸಬೇಕು ಎಂದು ಹೇಳಿದರು. ಸಾರ್ವಜನಿಕರು ಮಾಹಿತಿ ಕೇಳಿದಾಗ ಮಾಹಿತಿ ನೀಡುವುದು ಮೊದಲ ಆದ್ಯತೆ ಆಗಬೇಕು. ಮಾಹಿತಿ ನೀಡದೆ ಸತಾಯಿಸುವುದು ಒಂದು ರೀತಿಯ ಭ್ರಷ್ಟಾಚಾರವಿದ್ದಂತೆ. ಆದ್ದರಿಂದ ಯಾವುದೇ ಪತ್ರಕ್ಕೆ ಕಚೇರಿ ಯಲ್ಲಿ ಲಭ್ಯವಿರುವ ಮಾಹಿತಿಯನ್ನು ಸಮರ್ಪಕವಾಗಿ ಒದಗಿಸಬೇಕು ಎಂದು ನಿರ್ದೇಶನ ನೀಡಿದರು.
ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳು ಪ್ರತಿವರ್ಷ ಆಸ್ತಿದಾಯಕ ಪಟ್ಟಿ ಸಲ್ಲಿಸಬೇಕು. ಕಚೇರಿಯಲ್ಲಿ ಅಧಿಕಾರಿ ಮತ್ತು ಸಿಬ್ಬಂದಿಗಳ ವಿವರದ ನಾಮಫಲಕ ಅಳವಡಿಸಬೇಕು ಎಂದು ಲೋಕಾಯುಕ್ತ ಡಿವೈಎಸ್ಪಿ ಅವರು ನಿರ್ದೇಶನ ನೀಡಿದರು. ಅಧಿಕಾರಿ ಗಳು ಮತ್ತು ಸಿಬ್ಬಂದಿಗಳು ದಾಖಲಾತಿ ಗಳನ್ನು ಕ್ರಮ ಬದ್ಧವಾಗಿ ಇಟ್ಟುಕೊಳ್ಳ ಬೇಕು. ಮಧ್ಯವರ್ತಿಗಳಿಗೆ ಅವಕಾಶ ನೀಡಬಾರದು ಎಂದು ವಿ.ಕೃಷ್ಣಯ್ಯ ಅವರು ಸೂಚಿಸಿದರು.
ಲೋಕಾಯುಕ್ತ ಇನ್ಸ್ಪೆಕ್ಟರ್ ಲೋಕೇಶ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಸರಿಯಾಗಿ ನಿರ್ವಹಣೆ ಮಾಡದ ಕೆಲವು ‘ಹೋಂ ಸ್ಟೇಗಳಿಗೂ’ ಪರವಾನಗಿ ನೀಡಲಾಗಿದೆ. ಈ ಸಂಬAಧ ಮತ್ತೊಮ್ಮೆ ಪರಿಶೀಲಿಸ ಬೇಕು ಎಂದು ಇದೇ ಸಂದರ್ಭದಲ್ಲಿ ನಿರ್ದೇಶನ ನೀಡಿದರು.