ಇಂದು ಭೂಸೇನಾ ದಿವಸ
ಯಾವುದೇ ರಾಷ್ಟçವು ಎಷ್ಟೇ ನೈಸರ್ಗಿಕ ಸಂಪತ್ತು, ಬೆಲೆಬಾಳುವ ಅರಣ್ಯ ಮೂಲಗಳು, ಅತ್ಯಾಧುನಿಕ ಯಂತ್ರೋಪಕರಣಗಳು ಮೊದಲಾದ ಅತಿ ಮೌಲ್ಯದ ಸಾಮಗ್ರಿಗಳನ್ನು ಹೊಂದಿದ್ದರೂ ಅವುಗಳನ್ನು ಸರಿಯಾಗಿ ರಕ್ಷಿಸಿಕೊಳ್ಳಲು ಸಾಧ್ಯವಾಗದಿದ್ದರೆ, ತನ್ನ ಸಾರ್ವಭೌಮತ್ವಕ್ಕೆ ಧಕ್ಕೆಯುಂಟಾಗುವ ಸ್ಥಿತಿಯು ನಿರ್ಮಾಣವಾದರೆ ಆ ಎಲ್ಲ ಸಂಪತ್ತೂ ವ್ಯರ್ಥವೆನ್ನಿಸುತ್ತದೆ. ಹಾಗಾಗಿ ಎಲ್ಲ ರಾಷ್ಟçಗಳೂ ತಮ್ಮ ರಕ್ಷಣಾ ಪಡೆಗಳನ್ನು ಉಚ್ರಾಯ ಸ್ಥಿತಿಯಲ್ಲಿ ಇರಿಸಿಕೊಳ್ಳಲೇಬೇಕಾದ ಅನಿವಾರ್ಯತೆ ಇದೆ. ಭಾರತ ದೇಶ ಈ ನಿಯಮಗಳಿಂದ ಹೊರತಾಗಿಲ್ಲ. ಅದು ತನ್ನ ರಕ್ಷಣೆಗಾಗಿ ನೆಲ, ಜಲ, ವಾಯು ಸೈನ್ಯವೆಂದು ವಿಭಜಿಸಿ ಅವುಗಳಿಂದ ತನ್ನ ಗಡಿಗಳನ್ನು ಭದ್ರಮಾಡಿಕೊಳ್ಳುತ್ತಿದೆ. ಈ ತ್ರಿವಿಧದ ಸೇನೆಗಳಲ್ಲಿ ಭೂಸೇನೆಯು ಅತ್ಯಂತ ಹೆಚ್ಚಿನ ಸಶಸ್ತçರನ್ನು ಹೊಂದಿದ್ದು, ಭಾರತದ ಉದ್ದಗಲಗಳಲ್ಲಿ ತನ್ನ ಶಿಬಿರವನ್ನು ಸ್ಥಾಪಿಸಿಕೊಂಡಿದೆ.
ಭಾರತದ ಸ್ವಾತಂತ್ರö್ಯ ಪೂರ್ವದಲ್ಲಿ ಅಂದರೆ ೧೯೪೧ರ ಜನವರಿ ೧೫ ರಂದು ಮೊದಲನೇ ಭಾರತದ ಭೂಸೈನ್ಯದ ಶಾಖೆಯು ಸ್ಥಾಪನೆಗೊಂಡಿತು. ಆಗ ಈ ಕಾಲ್ದಳವು ರಾಯಲ್ ಇಂಡಿಯನ್ ಆರ್ಮಿ ಎಂಬ ಹೆಸರಿನಿಂದ ತನ್ನ ಮೊದಲ ಶಾಖೆಯನ್ನು ತೆರೆದರೂ ಅನಂತರದ ದಿನಗಳಲ್ಲಿ ಸಹಸ್ರಾರು ಇಂತಹ ಶಾಖೆಗಳು ಅನಾವರಣಗೊಂಡು ದೇಶದ ಸ್ವಾವಲಂಬನೆಗೆ ಕಾರಣೀಭೂತವೆನ್ನಿಸಿದವು. ಅಂದು ಭಾರತದ ಜನರಲ್ ಕಾರ್ಯಪ್ಪನವರು ಬ್ರಿಟಿಷ್ ಮೂಲದ ಜನರಲ್ ಫ್ರಾನ್ಸಿಸ್ ರಾಯ್ ಬುಚರ್ರವರಿಂದ ಕಾಲ್ದಳದ ಅಧಿಕಾರವನ್ನು ಸ್ವೀಕರಿಸಿ ಭಾರತದ ಭೂಸೇನೆಯ ಪ್ರಥಮ ದಂಡನಾಯಕರೆನ್ನಿಸಿಕೊAಡರು. ಈ ಗೌರವಾನ್ವಿತ ದಿನದ ನೆನಪಿಗಾಗಿ ಭಾರತದ ಎಲ್ಲ ಭಾಗಗಳಲ್ಲಿಯೂ ಪ್ರತಿವರ್ಷ ಜನವರಿ ೧೫ನ್ನು ಭಾರತದ ಭೂಸೇನಾ ದಿನವನ್ನಾಗಿ ಆಚರಿಸಲಾಗುತ್ತಿದೆ. ಅತ್ಯುತ್ಸಾಹದಿಂದ ಈ ದಿನದಂದು ಪ್ರತಿವರ್ಷವೂ ಒಂದೊAದು ಉದ್ಘೋಷವನ್ನು ಇರಿಸಿಕೊಂಡು ರಾಷ್ಟçದ ರಕ್ಷಣೆಗಾಗಿ ಬಲಿದಾನ ಇತ್ತವರ, ಶೌರ್ಯ ಮೆರೆದವರ ಹಾಗೂ ದೇಶವನ್ನು ರಕ್ಷಿಸಲು ತಮ್ಮನ್ನು ಪಣವಾಗಿ ಇರಿಸಿಕೊಂಡವರ ನೆನಪು ಮಾಡಲಾಗುತ್ತದೆ. ಈ ವರ್ಷ “ದೇಶದ ಸೇವೆಗಾಗಿ ಕಾಲ್ದಳ” ಎನ್ನುವ ಉದ್ಘೋಷವನ್ನು ಇರಿಸಿಕೊಳ್ಳಲಾಗಿದೆ.
ಭಾರತದ ಭೂಸೈನ್ಯದ ಧ್ಯೇಯವು “ತನಗಿಂತ ಮೊದಲು ಸೇವಾ ಕೈಂಕರ್ಯ ”ಎಂದಾಗಿದ್ದು ಯಾವುದೇ ವ್ಯಕ್ತಿಗಳ ಹಿತರಕ್ಷಣೆಗಿಂತಲೂ ದೇಶದ ಸಂರಕ್ಷಣೆಯು ಪ್ರಧಾನ ಎನ್ನುವ ಧ್ಯೇಯವಾಕ್ಯವನ್ನು ಹೊಂದಿದೆ. ಈ ಧ್ಯೇಯವು ರಾಷ್ಟçದ ಸಾರ್ವಭೌಮತ್ವವನ್ನು ಕಾಪಾಡುವಲ್ಲಿ, ಗಡಿಗಳ ರಕ್ಷಣೆಯಲ್ಲಿ ಹಾಗೂ ದೇಶದ ಪ್ರಜೆಗಳ ಹಿತ ಕಾಯುವಲ್ಲಿ ತುಸುವೂ ಅಲುಗಾಡದು, ಹಿಂಜರಿಯದು ಎಂದಾಗಿದೆ.
ಭಾರತದ ಭೂಸೈನ್ಯವು ಪ್ರತಿವರ್ಷ ಉತ್ತರಪ್ರದೇಶದ ಲಕ್ನೋದಲ್ಲಿ ತನ್ನ ಹುಟ್ಟುಹಬ್ಬದ ಅಂಗವಾಗಿ ಅತ್ಯಾಕರ್ಷಕವಾದ ಕವಾಯತನ್ನು ಮಾಡುತ್ತದೆ. ಇಲ್ಲ್ಲಿ ಭೂಪಡೆಗಳ ಶಿಸ್ತು, ಸಾಮರ್ಥ್ಯ ಮತ್ತು ಯಾವುದೇ ಕ್ಷಣದಲ್ಲಿಯೂ ಯುದ್ಧಕ್ಕೆ ಸನ್ನದ್ಧವಾಗಿರುವ ಸ್ಥಿತಿಯನ್ನು ಅನಾವರಣಗೊಳಿಸಲಾಗುತ್ತದೆ. ಇದರೊಂದಿಗೆ ಭೂಸೈನ್ಯದ ವಿಮಾನಗಳು ಹಾಗೂ ಹೆಲಿಕಾಪ್ಟರ್ಗಳ ಆಕರ್ಷಕ ಹಾಗೂ ಮೈನವಿರೇಳಿಸುವ “ಫ್ಲೆöÊ ಪಾಸ್ಟ್” ಅನ್ನೂ ನಡೆಸಲಾಗುತ್ತದೆ. ಇದರೊಂದಿಗೆ ದೇಶಕ್ಕಾಗಿ ಹೋರಾಡಿ ಅಮರರಾದ ಯೋಧರನ್ನು ನೆನಪಿಸಿಕೊಳ್ಳಲಾಗುತ್ತದೆ. ಇದರ ಅನಂತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿ ಇದರಲ್ಲಿ ದೇಶದ ಪಾರಂಪರಿಕ ನೃತ್ಯ, ವಾದ್ಯಗಳ ನಾದ ಹಾಗೂ ಮಿಲಿಟರಿಯ ಪಾರಂಪರಿಕ ವಸ್ತುಗಳ ಪ್ರದರ್ಶನವನ್ನು ಮಾಡಲಾಗುತ್ತದೆ. ಲಕ್ನೋ ನಗರವು ಭಾರತದ ಭೂಸೈನ್ಯಕ್ಕೆ ಒಂದು ಪ್ರಮುಖ ನೆಲೆಯೂ ಆಗಿದ್ದು ಇಲ್ಲಿ ಇತಿಹಾಸಗಳ ಪ್ರಕಾರ ಹಲವಾರು ಯುದ್ಧಗಳು ನಡೆದಿವೆ. ಅಲ್ಲದೆ ಉತ್ತರಭಾರತಕ್ಕೆ ಲಕ್ನೋ ನಗರವು ಒಂದು ಕೇಂದ್ರನೆಲೆಯಾಗಿದ್ದು ಇಲ್ಲಿ ಸಹಸ್ರಾರು ದೇಶಾಭಿಮಾನಿಗಳು ಹಾಗೂ ಗಣ್ಯರು ಆಗಮಿಸಿ ಈ ಕವಾಯತನ್ನು ವೀಕ್ಷಿಸುತ್ತಾರೆ.
ಇಡೀ ವಿಶ್ವದಲ್ಲಿ ಭಾರತವು ನಾಲ್ಕನೆಯ ಅತಿಪ್ರಬಲವಾದ ಭೂಸೇನೆಯನ್ನು ಹೊಂದಿದೆ. ಅಮೆರಿಕಾ, ರಷ್ಯಾ, ಚೀನಾಗಳ ಅನಂತರ ಭಾರತದ ಭೂಸೇನೆಯನ್ನು ಅತಿಸಾಮರ್ಥ್ಯವನ್ನು ಹೊಂದಿದ ಸೇನೆಯೆಂದು ವಿಶ್ವ ಪವರ್ ಇಂಡೆಕ್ಸ್ ಗುರುತಿಸಿದೆ. ಭಾರತದ ಭೂಸೇನೆಯನ್ನು ಮೊದಲು ಈಸ್ಟ್ ಇಂಡಿಯಾ ಕಂಪೆನಿಯನ್ನಾಗಿ ಏಪ್ರಿಲ್ ಒಂದರ ೧೮೯೫ ರಲ್ಲಿ ರಚಿಸಿ ಅದನ್ನು ಬ್ರಿಟಿಷ್ ಇಂಡಿಯನ್ ಆರ್ಮಿ ಎಂದು ಗುರುತಿಸಿದರೂ ಸ್ವಾತಂತ್ರಾö್ಯ ನಂತರ ಅದನ್ನು ರಾಷ್ಟಿçÃಯ ಭೂಸೇನೆ ಎಂದೇ ಕರೆಯಲಾಗುತ್ತಿದೆ. ಹಾಗಾಗಿ ಪ್ರತಿವರ್ಷ ಜನವರಿ ೧೫ ರಂದು ಭಾರತದ ಎಲ್ಲ ಸೇನಾ ಶಿಬಿರಗಳ ಮೈದಾನದಲ್ಲಿ ಭೂಸೈನಿಕರಿಂದ ಕಾವಾಯತು ಮಾಡಿಸಲಾಗುತ್ತದೆ.
ಸೇಮ್ ಮಾಣಿಕ್ ಷಾರವರು ೧೯೭೩ ರ ಜನವರಿಯಲ್ಲಿ ಭಾರತದ ಪ್ರಥಮ ಫೀಲ್ಡ್ ಮಾರ್ಷಲ್ ಆಗಿ ಭೂಸೇನೆಯ ಅತ್ಯುಚ್ಚ ಸ್ಥಾನಕ್ಕೆ ಭಾಜನರಾದರು. ಕೊಡಂದೇರ ಎಂ. ಕಾರ್ಯಪ್ಪ ಅವರು ೧೯೮೬ ರ ಜನವರಿ ೧೪ ರಂದು ಎರಡನೆಯವರಾಗಿ ಈ ಸ್ಥಾನಕ್ಕೆ ಆಯ್ಕೆಯಾದರು.
ಭಾರತದ ಭೂಸೇನೆಯ ಅಧೀನದಲ್ಲಿಯೂ ಗ್ಲೋಬ್ ಮಾಸ್ಟರ್, ಅಪಾಚೆ, ಚಿನೂಕ್, ತೇಜಾ, ರಾಫಲ್, ಚ-೧೩೦, ಪಿಲಾಟಸ್ ಮೊದಲಾದ ಹಲವಾರು ವಿಮಾನಗಳಿದ್ದು ಇದರೊಂದಿಗೆ ಅರ್ಜುನ್, ಭೀಷ್ಮ, ಟಿ-೯೦ಯೆಸ್, ಟಿ-೯೦೫ಟv-೭೨ ಅಜೆಯ, ಸರತ್, ನಾಮಿಕಾ, ಕೇರಿಯರರ್ ಮರ್ಟರ್ ಮೊದಲಾದ ಟ್ಯಾಂಕರ್ಗಳು ಇವೆ. ಹಾಗೆಯೇ ಅಗತ್ಯಗಳಿಗೆ ಅನುಗುಣವಾಗಿ ಭಾರತದ ಭೂಸೇನೆಯಲ್ಲಿ ಡ್ರಾಗುನೋವ್, ೪ಮಾಕ್೧, ಅಯ್ಎಮ್ ಅಯ್ ಗಾಲಿ, ಸ್ನಿಪರ್, ಬರೆಟ್ಟಾ ಹೀಗೆ ಹಲವು ತುಫಾಕಿಗಳೂ ಇವೆ. ಹಾಗೆಯೇ ಎಕೆ-೪೭, ಎಕೆ-೧೦೩ ಮೊದಲಾದ ಅತಿ ವಿಶ್ವಾಸಾರ್ಹವಾದ ರೈಫಲ್ಗಳು ಈ ಹಿಂದೆ ಬಳಕೆಯಲ್ಲಿ ಇದ್ದವು. ಬ್ರಹ್ಮೋಸ್ ಎನ್ನುವ ವಿಮಾನದಲ್ಲಿ ಕೊಂಡೊಯ್ಯ ಬಹುದಾದ ಬ್ರಹ್ಮಾಸ್ತçವೂ ಭಾರತದ ಭೂಸೇನೆಯಲ್ಲಿ ಇದ್ದು ಸೇನೆಯ ಬೆನ್ನೆಲುಬಾಗಿ ಇದು ನಿಲ್ಲುತ್ತದೆ. ಕೇವಲ ಗಡಿಯ ವೈರಿಗಳೊಂದಿಗೆ ಯುದ್ಧದಲ್ಲಿ ಮಾತ್ರವಲ್ಲ, ದೇಶದ ಆಂತರಿಕ ವಿಪ್ಲವಗಳು ಉಂಟಾದಾಗಲೂ ಭಾರತದ ಭೂಸೇನೆಯನ್ನು ಕರೆಲಾಗುತ್ತದೆ. ಚುನಾವಣೆಯ ಸಮಯದಲ್ಲಿ, ಅತೃಪ್ತಪೌರರಿಂದ ದೊಂಬಿ ಯುಂಟಾದಾಗ, ಪ್ರಾಕೃತಿಕ ಆಕಸ್ಮಿಕಗಳಾದ, ಭೂಕುಸಿತ, ಭೂಕಂಪ, ಅತಿವೃಷ್ಟಿ ಯಿಂದ ಆಗುವ ಪ್ರವಾಹ, ಸುರಂಗ ಗಳಲ್ಲಿ ಸಿಲುಕಿಹಾಕಿ ಕೊಂಡಿರುವವರನ್ನು ಹೊರದೆಗೆಯಲು, ವಿದೇಶಿ ಗಣ್ಯರು ಭಾರತಕ್ಕೆ ಭೇಟಿಯಿತ್ತಾಗ ಅವರ ಸುರಕ್ಷತೆಗೆ ಹೀಗೆ ಹಲವಾರು ರಕ್ಷಣಾ ಕಾರ್ಯಗಳಿಗೆ ಭಾರತದ ಸೈನಿಕರನ್ನು ಬಳಸಲಾಗುತ್ತದೆ.
- ಕಿಗ್ಗಾಲು ಎಸ್. ಗಿರೀಶ್, ಮೂರ್ನಾಡು.