ಸಂಕ್ರಾAತಿ ಎಂದರೆ ಎಳ್ಳು, ಬೆಲ್ಲ ಅದಿಲ್ಲದೆ ಸಂಕ್ರಾAತಿ ಇಲ್ಲ. ಎಳ್ಳು-ಬೆಲ್ಲದಲ್ಲಿ ಪ್ರೀತಿ ತುಂಬಿದ ಸಂದೇಶ, ಕಬ್ಬಿನ ರಸದಲ್ಲಿ ಸುಗ್ಗಿ ಸಂಕ್ರಾAತಿಯ ಸಿಹಿ ಸಂದೇಶ, ಬೆಲ್ಲದ ಸವಿ, ಸವಿದವನೇ ಬಲ್ಲ.
ಸಂಕ್ರಾAತಿ ಹಬ್ಬ ಸುಗ್ಗಿಯ ದವಸ ಧಾನ್ಯಗಳ ಸಮೃದ್ಧಿಯ ಸಂಕೇತ, ಕನ್ನಡಿಗರಿಗೆ ಸಂಕ್ರಾAತಿ, ತಮಿಳರಿಗೆ ಪೊಂಗಲ್ ಎಂದೂ ಕೇರಳದವರು ಮಕರವಿಳಕ್ಕೂ, ಬಂಗಾಳಿಗಳಿಗೆ ತಿಲುವಾ ಎಂದು ಕರೆಯು ವರು. ಸಂಕ್ರಾAತಿ ಎತ್ತುಗಳಿಗೆ ಮಹತ್ವದ ದಿನ. ರೈತರಿಗೆ ಉಪಕಾರ ಮಾಡಿದ ದನಕರುಗಳಿಗೆ ಸಿಂಗರಿಸಿ ಆಹಾರ ನೀಡಿ ಕೃತಜ್ಞತೆ ಸಲ್ಲಿಸುವರು.
ಪುರಾಣ ಶಾಸ್ತçದ ಪ್ರಕಾರ ಸೂರ್ಯನು ಉತ್ತರಾಯಣಕ್ಕೆ ಪದಾರ್ಪಣೆ ಮಾಡುವ ಪರ್ವಕಾಲ. ಸೂರ್ಯನಿಲ್ಲದೆ ಬೆಳೆ ಬೆಳೆಯಲಾಗದು, ಅನ್ನ ನೀಡಿದ ಸೂರ್ಯನಿಗೆ ಕೃತಜ್ಞತೆ ಅರ್ಪಿಸುವುದು ಸಂಕ್ರಾAತಿ ಹಬ್ಬದ ಒಂದು ಭಾಗ. ‘ಸುಗ್ಗಿಯು ಬಂದಿತು ಹಿಗ್ಗನು ತಂದಿತು, ಹೆಮ್ಮೆಯ ನಾಡಿನ ಜನಕೆಲ್ಲ’ ಎಂಬ ಕವಿವಾಣಿ ಇದೆ. ಸಂಕ್ರಾAತಿ ರೈತರ ಹಬ್ಬ. ಬೆಳೆ ಕೈಗೆ ಬರುವ ದಿನ ಸಂಕ್ರಾAತಿ ಎಂದರೆ ಸಂಕ್ರಮಣ. ಆ ದಿನವೆ ಸೂರ್ಯ ಮಕರ ರಾಶಿ ಪ್ರವೇಶಿಸುವನು. ಅದೇ ಮಕರ ಸಂಕ್ರಾAತಿ. ಸಂಕ್ರಾAತಿ ಸೌರಮಾನವನ್ನು ಅನುಸರಿಸಿ ಬರುತ್ತದೆ. ಸಂಕ್ರಾAತಿ ವರ್ಷದಲ್ಲಿ ಒಂದೇ ದಿನಾಂಕದಲ್ಲಿ ಬರುತ್ತದೆ. ಬೇರೆ-ಬೇರೆ ಹಬ್ಬಗಳು ಬೇರೆ ದಿನದಲ್ಲಿ ಬರುತ್ತದೆ. ಅಂದರೆ ಚಾಂದ್ರಮಾನಕ್ಕನುಗುಣವಾಗಿ ಬರುತ್ತದೆ. ಸಂಕ್ರಾAತಿ ದಿನದಿಂದಲೇ ಉತ್ತರಾಯಣ ಆರಂಭ, ಚಳಿಯ ಸಂದರ್ಭದಲ್ಲಿ ಈ ಹಬ್ಬ.
ಆದ್ದರಿಂದಲೇ ಸಂಕ್ರಾAತಿಯAದು ಎಳ್ಳು-ಬೆಲ್ಲ, ಕಡ್ಲೆ-ಕೊಬ್ಬರಿ, ಕಬ್ಬು ತಿಂದು ದೇಹದ ಕೊಬ್ಬಿನಂಶವನ್ನು ಹೆಚ್ಚಿಸಿಕೊಳ್ಳುವರು. ‘ಎಳ್ಳು-ಬೆಲ್ಲ ತಿಂದು ಒಳ್ಳೆಯ ಮಾತನಾಡಿ’ ಎಂದು ಹೆಂಗಳೆಯರು ಮನೆ-ಮನೆಗೂ ಎಳ್ಳು ಬೀರಿ ಸಂತಸ ಪಡುವರು. ಎಳ್ಳು-ಬೆಲ್ಲ ನೀಡುವುದು ಬಾಂಧವ್ಯದ ಸಂಕೇತ. ಎಳ್ಳುಬೆಲ್ಲದ ಮಿಶ್ರಣ ನೋವು ನಲಿವುಗಳನ್ನು ಬದುಕಿನಲ್ಲಿ ಸಮವಾಗಿ ಸ್ವೀಕರಿಸುವದೇ ಆಗಿದೆ.
ಸಂಕ್ರಾAತಿಯಲ್ಲಿ ಧಾನ, ಧರ್ಮ ಮಾಡುವರು. ಮಕರ ಸಂಕ್ರಾAತಿಯಲ್ಲಿ ಪುಣ್ಯಕ್ಷೇತ್ರಗಳಲ್ಲಿ ಸಂಕ್ರಾAತಿ ಪೂಜೆಯನ್ನು ಸಲ್ಲಿಸುವರು. ಗೋಪೂಜೆ ಮಾಡಿ ಎತ್ತುಗಳನ್ನಲಂಕರಿಸಿ ಬೆಂಕಿಯಲ್ಲಿ ಹಾಯಿಸು ವರು. ಎಳ್ಳೆಣ್ಣೆ ದೀಪ ಹಚ್ಚಿ ಎಳ್ಳು ದಾನ ಮಾಡುವರು. ಹಬ್ಬದಲ್ಲಿ ಪೊಂಗಲ್ ಮಾಡುವಾಗ ಅದು ಉಕ್ಕಿ ಹರಿದರೆ ಶುಭ ಸಂಕೇತವೆAದು ತಿಳಿಯುವರು. ಉತ್ತು-ಬಿತ್ತಿ ಬೆಳೆದ ಮಾನವ ಸುಗ್ಗಿಯ ಕಾಲದಲ್ಲಿ ಬೆಳೆದ ಬೆಳೆಯ ಅಕ್ಕಿಯನ್ನು ಪಾಯಸ ಮಾಡಿ ಸೂರ್ಯದೇವನಿಗೆ ಸಮರ್ಪಿಸು ವುದೇ ಈ ಹಬ್ಬದ ವೈಶಿಷ್ಟö್ಯ. ಸೃಷ್ಟಿಯ ಪ್ರತ್ಯೇಕ ರೂಪವೇ ಪ್ರಕೃತಿ. ಸಂಕ್ರಾAತಿ ರಂಗೋಲಿಯAತೆ ವರ್ಣರಂಜಿತ ಗ್ರಹಗತಿಯನ್ನಾಧರಿಸಿ ಹಿರಿಯರು ಹಬ್ಬ ಆಚರಿಸುವರು.
ಬದುಕು ರಂಗೋಲಿಯAತೆ ಸುಂದರವಾಗಿರ ಬೇಕೆಂದರೆ ಶ್ರಮಪಡಬೇಕು. ರಂಗೋಲಿಯ ಒಂದು ಚುಕ್ಕಿ ಕ್ರಮ ತಪ್ಪಿದರೆ ಬದುಕು ಹಾಳು. ಸಂಕ್ರಾAತಿ ಹಬ್ಬವನ್ನು ಎಳ್ಳು ಬೀರುವ ಹಬ್ಬವೆಂದು ಕರೆಯುವರು. ಎಳ್ಳು ದಾನ ಮಹತ್ವ ಪಡೆದಿದೆ. ಇದರಲ್ಲಿ ಒಳ್ಳೆಯ ಪೋಷಕಾಂಶವಿದೆ. ಇದು ಆರೋಗ್ಯಕ್ಕೂ ಹಿತಕರ.
ಸೌರಮಾನದ ಪ್ರಕಾರ ಸೂರ್ಯ ಮಕರ ರಾಶಿಯಲ್ಲಿ ಪ್ರವೇಶಿಸುವ ಪರ್ವಕಾಲದಿಂದ ಮಕರ ಮಾಸ ಆರಂಭ ಚಂದ್ರಮಾನದಲ್ಲಿ ಮಾಘ ಮಾಸ ಹೊಂದಿರುವ ಈ ತಿಂಗಳು ಮಕರ ಮಾಸಕ್ಕೆ ಸೇರುವಂತದ್ದು ಆ ದಿನದಿಂದ ಕುಂಭ ಸಂಕ್ರಮಣದ ತನಕ ಪ್ರತಿದಿನ ಸೂರ್ಯಾರಾಧನೆ ಮಾಡುವರು. ಸೂರ್ಯ, ಶಕ್ತಿದಾತ, ಪ್ರಾಣದಾತ, ಅನ್ನದಾತ, ಅನೇಕ ಸಂಕೇತಾರ್ಥಗಳ ಮೂಲಕ ಸೂರ್ಯನ ಮಹಿಮೆಯನ್ನು ವಿವರಿಸುವರು.
-ಅಶ್ವಿನಿ ಎಸ್. ಕೆ.,
ಮಡಿಕೇರಿ.