ಮಡಿಕೇರಿ,ಜ. ೧೨ : ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕು ನೂರು ವರ್ಷ ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಶತಮಾನೋತ್ಸವದ ಸಂಭ್ರಮದಲ್ಲಿದ್ದು, ಸಹಕಾರಿಗಳಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಸುಸಜ್ಜಿತವಾದ ಶತಮಾನೋತ್ಸವ ಭವನವನ್ನು ನಿರ್ಮಿಸಿದ್ದು, ಅದರ ಉದ್ಘಾಟನೆ ಸಹಕಾರಿ ಸಮ್ಮೇಳನ, ವಾಹನ ಹಾಗೂ ಕೃಷಿ ಯಂತ್ರೋಪಕರಣಗಳ ಸಾಲ ಮೇಳ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬ್ಯಾಂಕ್ ಆಡಳಿತ ಮಂಡಳಿ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ: ಶತಮಾನೋತ್ಸವದ ನೆನಪಿನಲ್ಲಿ ನಿರ್ಮಿಸಲಾಗಿರುವ ನೂತನ ಭವನದಲ್ಲಿ ತಾ. ೧೪ರಂದು ಸಾಯಂಕಾಲ ೭ ಗಂಟೆಗೆ ಸಂಪ್ರದಾಯದAತೆ ವಾಸ್ತು ಪೂಜೆ ಮತ್ತು ವಾಸ್ತು ಬಲಿ, ತಾ.೧೫ರಂದು ಪೂರ್ವಾಹ್ನ ೭ ಗಂಟೆಗೆ ಗಣಹೋಮ, ೧೦.೩೦ ಗಂಟೆಗೆ ಸತ್ಯನಾರಾಯಣ ಪೂಜೆ ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ಸಹಕಾರಿ ಸಮ್ಮೇಳನ
೧೧೮ ವರ್ಷಗಳ ಕೊಡಗಿನ ಸಹಕಾರ ಕ್ಷೇತ್ರದ ಇತಿಹಾಸದಲ್ಲಿ ಹಿಂದೆAದೂ ಕಂಡು ಕೇಳರಿಯದ ರೀತಿಯಲ್ಲಿ ಜಿಲ್ಲಾ ಮಟ್ಟದ ಸಹಕಾರ ಸಮ್ಮೇಳನ ನಡೆಸಲು ಬ್ಯಾಂಕಿನ ಆಡಳಿತ ಮಂಡಳಿ ತೀರ್ಮಾನಿಸಿದೆ. ಕಳೆದ ೧೦೦ ವರ್ಷಗಳಲ್ಲಿ ಬ್ಯಾಂಕಿನ ಆಡಳಿತ ಮಂಡಳಿಯಲ್ಲಿ ಸೇವೆಗೈದ ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು, ಆಡಳಿತ ಮಂಡಳಿಯ ಸರ್ವ ಸದಸ್ಯರುಗಳು, ಜಿಲ್ಲೆಯ ೨೮೭ ಸಹಕಾರ ಸಂಘಗಳ ಹಾಲಿ ಅಧ್ಯಕ್ಷರು, ಉಪಾಧ್ಯಕ್ಷರು, ಆಡಳಿತ ಮಂಡಳಿಯ ಸರ್ವ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರು, ಬ್ಯಾಂಕಿನಲ್ಲಿ ಸೇವೆಗೈದ ನಿವೃತ್ತ ಅಧಿಕಾರಿ ಮತ್ತು ಸಿಬ್ಬಂದಿಗಳು, ಜಿಲ್ಲೆಯ ವಿವಿಧ ಸಂಘ-ಸAಸ್ಥೆಗಳ ಆಡಳಿತ ಮಂಡಳಿಯ ಪದಾಧಿಕಾರಿಗಳು, ಬ್ಯಾಂಕಿನ ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಉತ್ತಮ ಗ್ರಾಹಕರು, ಬ್ಯಾಂಕಿನಿAದ ರಚಿಸಲ್ಪಟ್ಟ ೧೦೦೦ ಸ್ವಸಹಾಯ ಗುಂಪುಗಳ ಪ್ರತಿನಿಧಿಗಳು, ಜಿಲ್ಲೆ ಮತ್ತು ರಾಜ್ಯ ಮಟ್ಟದ ಸಹಕಾರ ಇಲಾಖಾಧಿಕಾರಿಗಳು, ಸಹಕಾರಿಗಳು ಮತ್ತು ಜನಪ್ರತಿನಿಧಿಗಳು ಸೇರಿದಂತೆ ಸುಮಾರು ೫೦೦೦ ಸಹಕಾರಿಗಳನ್ನು ಆಹ್ವಾನಿಸುವ ಮುಖಾಂತರ ಗಾಂಧಿ ಮೈದಾನದಲ್ಲಿ ಒಂದೇ ಸೂರಿನಡಿ ಸಮಸ್ತ ಸಹಕಾರಿಗಳ ಬೃಹತ್ ಸಹಕಾರಿ ಸಮ್ಮೇಳನ ನಡೆಯಲಿದೆ ಎಂದು ತಿಳಿಸಿದರು.
ವಾಹನ ಸಾಲ ಮೇಳ
ಶತಮಾನೋತ್ಸವ ಸಂಭ್ರಮದ ಅಂಗವಾಗಿ ಜಿಲ್ಲೆಯ ಜನತೆ, ಗ್ರಾಹಕರು ಮತ್ತು ಕೃಷಿಕರಿಗಾಗಿ ಜಿಲ್ಲಾ ಮಟ್ಟದ ವಾಹನ ಮೇಳ ಹಾಗೂ ಕೃಷಿ ಯಂತ್ರೋಪಕರಣಗಳ ಸಾಲ ಮೇಳ ಆಯೋಜಿಸಲಾಗಿದೆ. ತಾ.೧೯ರಂದು ಹಾಗೂ ೨೦ರಂದು ಪೂರ್ವಾಹ್ನ ೧೦ ಗಂಟೆಯಿAದ ಸಂಜೆ ೫ ಗಂಟೆಯವರೆಗೆ ನಗರದ ಗಾಂಧಿ ಮೈದಾನದಲ್ಲಿ ಮೇಳ ನಡೆಯಲಿದೆ.
(ಮೊದಲ ಪುಟದಿಂದ) ತಮ್ಮ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ತಾ.೧೯ರಂದು ಬೆಳಿಗ್ಗೆ ೧೦ ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಬೋಸರಾಜು ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಶಾಸಕರುಗಳಾದ ಎ.ಎಸ್.ಪೊನ್ನಣ್ಣ, ಡಾ|| ಮಂಥರ್ಗೌಡ, ವಿಧಾನಪರಿಷತ್ ಸದಸ್ಯ ಎಂ.ಪಿ.ಸುಜಾ ಕುಶಾಲಪ್ಪ, ನಗರ ಸಭಾ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ ಪಾಲ್ಗೊಳ್ಳಲಿದ್ದಾರೆ.
ಸಾಲ ಮೇಳದ ದಿನಗಳಂದು ಜಿಲ್ಲೆಯ ಜನತೆ ಮತ್ತು ಕೃಷಿಕರ ಅನುಕೂಲಕ್ಕಾಗಿ ಬ್ಯಾಂಕಿನ ವತಿಯಿಂದ ವಾಹನ ಖರೀದಿಗಾಗಿ ಪಡೆಯುವ ಅರ್ಹ ಸಾಲದ ಮೊತ್ತದ ಮೇಲೆ ಶೇ.೫ ರಷ್ಟು ಮತ್ತು ಕೃಷಿ ಉಪಯೋಗಿ ಯಂತ್ರೋಪಕರಣಗಳ ಖರೀದಿದಾರರಿಗೆ ಸಾಲದ ಮೊತ್ತದ ಮೇಲೆ ಶೇ.೭ ರಷ್ಟು ರಿಯಾಯಿತಿ ಘೋಷಿಸಲಾಗಿದೆ. ಸಾಲದ ಮೇಲಿನ ಸಂಸ್ಕರಣಾ ಶುಲ್ಕ (ಐoಚಿಟಿ Pಡಿoಛಿessiಟಿg ಈee) ದಲ್ಲಿ ಸಂಪೂರ್ಣ ವಿನಾಯಿತಿ ನೀಡಲಾಗಿದೆ. ಜಿಲ್ಲೆಯ ಜನತೆ ಇದರ ಸದುಪಯೋಗಪಡಿಸಿಕೊಳ್ಳುವಂತೆ ಗಣಪತಿ ಮನವಿ ಮಾಡಿಕೊಂಡರು.
‘ಉನ್ನತಿ’ ಭವನ
ಬ್ಯಾಂಕು ೧೦೦ ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲ್ಲಿ ಶತಮಾನೋತ್ಸವ ಭವನವನ್ನು ೨ ವರ್ಷಗಳ ಅಲ್ಪ ಕಾಲಾವಧಿಯಲ್ಲಿ ರೂ.೮.೪೪ಕೋಟಿ ವೆಚ್ಚದಲ್ಲಿ ಸುಸಜ್ಜಿತವಾಗಿ ನಿರ್ಮಿಸಲಾಗಿದೆ. ನೂತನ ಶತಮಾನೋತ್ಸವ ಕಟ್ಟಡಕ್ಕೆ ಪ್ರಗತಿಯ ಪ್ರತೀಕವಾಗಿ “ಉನ್ನತಿ” ಎಂದು ಹೆಸರಿಡಲಾಗಿದೆ. ನೂತನ ಕಟ್ಟಡದ ಮುಂಭಾಗದಲ್ಲಿ ಬ್ಯಾಂಕಿನ ಸ್ಥಾಪಕ ಅಧ್ಯಕ್ಷರಾದ ರಾವ್ ಬಹದ್ದೂರ್ ಕೊಡಂದೇರ ಕುಟ್ಟಯ್ಯನವರ ಪುತ್ತಳಿಯನ್ನು ಪ್ರತಿಸ್ಥಾಪಿಸಲಾಗಿದೆ.
ಕಟ್ಟಡವು ಸೆಲ್ಲರ್ ಸೇರಿದಂತೆ ನಾಲ್ಕು ಅಂತಸ್ತುಗಳನ್ನು ಹೊಂದಿದ್ದು, ಸೆಲ್ಲರ್ನಲ್ಲಿ ವಾಹನಗಳ ನಿಲುಗಡೆಗಾಗಿ, ನೆಲ ಅಂತಸ್ತಿನ ಮುಖ್ಯದ್ವಾರದ ಬಳಿ ಕಾವೇರಿ ಮಾತೆಯ ವಿಗ್ರಹವನ್ನು ನೀರಿನ ಚಿಲುಮೆಯ ಸಹಿತ ಪ್ರತಿಷ್ಠಾಪಿಸಲಾಗಿದ್ದು, ಬ್ಯಾಂಕಿನ ಅಧ್ಯಕ್ಷರು, ಉಪಾಧ್ಯಕ್ಷರು, ಮುಖ್ಯಕಾರ್ಯನಿರ್ವಹಣಾಧಿಕಾರಿ ಮತ್ತು ಪ್ರಧಾನ ವ್ಯವಸ್ಥಾಪಕರಿಗೆ ಪ್ರತ್ಯೇಕವಾದ ಚೇಂಬರ್ಗಳಿವೆ. ಕೇಂದ್ರ ಕಚೇರಿಯ ಮೂರು ವಿಭಾಗಗಳು ಅಂತಸ್ತಿನಲ್ಲಿರುತ್ತದೆ. ಮೊದಲನೇ ಅಂತಸ್ತಿನಲ್ಲಿ ಆಡಳಿತ ಮಂಡಳಿಯ ಸಭಾಂಗಣ, ಉಪ ಸಮಿತಿ ಸಭಾಂಗಣಗಳನ್ನು ಒಳಗೊಂಡAತೆ ಉಳಿದ ಕೇಂದ್ರ ಕಚೇರಿಯ ವಿಭಾಗಗಳು, ಸ್ಟೇಷನರಿ ರೂಮ್, ವೀಡಿಯೋಕಾನ್ಫ್ರೆನ್ಸ್ ರೂಮ್ಗಳಿದ್ದು, ಎರಡನೇ ಅಂತಸ್ತಿನಲ್ಲಿ ೫೦೦ ಜನರ ಸಾಮರ್ಥ್ಯದ ದೊಡ್ಡ ಸಭಾಂಗಣ ನಿರ್ಮಿಸಲಾಗಿದೆ. ಕೊಡಗಿನ ಸಹಕಾರಿ ದಿಗ್ಗಜ ದಿ. ಪದ್ಯಂಡ ಐ ಬೆಳ್ಯಪ್ಪನವರ ಸ್ಮರಣಾರ್ಥ ಸಭಾಂಗಣಕ್ಕೆ ಅವರ ಹೆಸರಿಡಲಾಗಿದೆ. ಕಟ್ಟಡವು ಭಾಗಶಃ ಹವಾನಿಯಂತ್ರಣಕ್ಕೆ ಒಳಪಟ್ಟಿದ್ದು, ಲಿಫ್ಟ್ ವ್ಯವಸ್ಥೆಯನ್ನು ಹೊಂದಿದೆ ಎಂದು ಗಣಪತಿ ಮಾಹಿತಿ ನೀಡಿದರು.
ಭವನ ಉದ್ಘಾಟನೆ
ತಾ.೨೧ರಂದು ಪೂರ್ವಾಹ್ನ ೧೦ ಗಂಟೆಗೆ “ಉನ್ನತಿ” ಭವನದ ಉದ್ಘಾಟನೆಯನ್ನು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಬೋಸರಾಜು ಉದ್ಘಾಟನೆ ಮಾಡಲಿದ್ದಾರೆ.
ಶಾಸಕ ಎ. ಎಸ್. ಪೊನ್ನಣ್ಣ ಆಡಳಿತ ಮಂಡಳಿ ಸಭಾಂಗಣ ವನ್ನು, ಸಂಸದ ಪ್ರತಾಪ್ ಸಿಂಹ ಭದ್ರತಾ ಕೊಠಡಿಯನ್ನು, ಶಾಸಕ ಡಾ|| ಮಂಥರ್ಗೌಡ ಕಾವೇರಿ ಪ್ರತಿಮೆಯನ್ನು, ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ ಬ್ಯಾಂಕಿನ ಸಂಸ್ಥಾಪಕ ಅಧ್ಯಕ್ಷರಾದ ರಾವ್ಬಹದ್ದೂರ್ ಕೊಡಂದೇರ ಕುಟ್ಟಯ್ಯ ಅವರ ಪ್ರತಿಮೆ, ಕರ್ನಾಟಕ ರಾಜ್ಯ ಅಪೆಕ್ಸ್ ಬ್ಯಾಂಕು ಅಧ್ಯಕ್ಷ ಬೆಳ್ಳಿ ಪ್ರಕಾಶ್ ಅವರು ದಿ. ಪಂದ್ಯAಡ ಐ. ಬೆಳ್ಯಪ್ಪ ಸಭಾಂಗಣದ ಉದ್ಘಾಟನೆಯನ್ನು ನೆರವೇರಿಸ ಲಿದ್ದಾರೆ ಎಂದು ತಿಳಿಸಿದರು.
ನಂತರ ನಗರದ ಗಾಂಧಿ ಮೈದಾನದಲ್ಲಿ ೧೧ ಗಂಟೆಗೆ ೫೦೦೦ ಕ್ಕೂ ಮೇಲ್ಪಟ್ಟು ಸಹಕಾರಿಗಳನ್ನು ಆಹ್ವಾನಿಸಿರುವ ಸಮಾರಂಭದ ಕಾರ್ಯಕ್ರಮ ನಡೆಯಲಿದೆ. ಅಧ್ಯಕ್ಷತೆಯನ್ನು ತಾನೇ ವಹಿಸಲಿದ್ದು, ವೇದಿಕೆಯಲ್ಲಿ ಕಟ್ಟಡ ಉದ್ಘಾಟನೆ ಮಾಡಿದ ಗಣ್ಯರುಗಳಲ್ಲದೆ, ಮುಖ್ಯ ಅತಿಥಿಗಳಾಗಿ ಮಾಜಿ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಅಧ್ಯಕ್ಷ ಜಿ.ಟಿ. ದೇವೇಗೌಡ, ವಿಧಾನ ಪರಿಷತ್ ಸದಸ್ಯ ಭೋಜೇಗೌಡ, ಮಡಿಕೇರಿ ನಗರಸಭಾ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ, ಮಾಜಿ ಶಾಸಕ ಕೆ.ಜಿ ಬೋಪಯ್ಯ, ಮಾಜಿ ಸಚಿವ ಎಂ.ಸಿ. ನಾಣಯ್ಯ, ಮಾಜಿ ಶಾಸಕ ಎಂ.ಪಿ.ಅಪ್ಪಚ್ಚುರAಜನ್, ಮಾಜಿ ಸಚಿವರಾದ ಬಿ.ಎ ಜೀವಿಜಯ, ಸುಮಾವಸಂತ್, ವಿಧಾನ ಪರಿಷತ್ ಮಾಜಿ ಸದಸ್ಯರುಗಳಾದ ಎಸ್.ಜಿ ಮೇದಪ್ಪ, ಚೆಪ್ಪುಡೀರ ಎಸ್.ಅರುಣ್ ಮಾಚಯ್ಯ, ಎಂ.ಪಿ. ಸುನಿಲ್ ಸುಬ್ರಮಣಿ, ಶಾಂತೆಯAಡ ವೀಣಾಅಚ್ಚಯ್ಯ ಪಾಲ್ಗೊಳ್ಳಲಿದ್ದಾರೆ. ಇವರುಗಳೊಂದಿಗೆ ಅನೇಕರು ವಿಶೇಷ ಅಹ್ವಾನಿತರಾಗಿ ಉಪಸ್ಥಿತರಿರಲಿದ್ದಾರೆ ಎಂದು ಬಾಂಡ್ ಗಣಪತಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಕೆಟೋಳೀರ ಹರೀಶ್ ಪೂವಯ್ಯ, ನಿರ್ದೇಶಕರುಗಳಾದ ಹೊಟ್ಟೆಂಗಡ ರಮೇಶ್, ಕನ್ನಂಡ ಸಂಪತ್, ಕಿಮ್ಮುಡಿರ ಜಗದೀಶ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉಮಾಕಾಂತ್ ಉಪಸ್ಥಿತರಿದ್ದರು.