ಪೊನ್ನಂಪೇಟೆ, ಜ. ೧೨: ಕೊಡಗಿನ ಕುವರ ಅಪ್ಪಚಂಗಡ ಬಿ. ಬೆಳ್ಯಪ್ಪ ಅವರು ತಾ. ೨೧ ರಂದು ಹಾಂಗ್ಕಾAಗ್ನಲ್ಲಿ ನಡೆಯಲಿರುವ ೧೯ನೇ ಏಷ್ಯನ್ ಮ್ಯಾರಥಾನ್ ಚಾಂಪಿಯನ್ ಶಿಪ್ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಈ ಸ್ಪರ್ಧೆಯ ಪುರುಷರ ವಿಭಾಗದಲ್ಲಿ ಭಾರತವನ್ನು ಕೇವಲ ಇಬ್ಬರು ಸ್ಪರ್ಧಿಗಳು ಮಾತ್ರ ಪ್ರತಿನಿಧಿಸುತ್ತಿದ್ದು, ಅದರಲ್ಲಿ ಕರ್ನಾಟಕದಿಂದ ಕೊಡಗಿನ ಬೆಳ್ಯಪ್ಪ ಒಬ್ಬರು. ಮತ್ತೊಬ್ಬರು ಉತ್ತರಾಖಂಡ್ ರಾಜ್ಯದವರು.
ಬೆಳ್ಯಪ್ಪ ಕಳೆದ ವರ್ಷ ದೆಹಲಿಯಲ್ಲಿ ನಡೆದ ರಾಷ್ಟಿçÃಯ ಮ್ಯಾರಥಾನ್ನಲ್ಲಿ ಬೆಳ್ಳಿ ಪದಕವನ್ನು ಪಡೆದುಕೊಳ್ಳುವ ಮೂಲಕ ಸಾಧನೆ ಮಾಡಿ ಏಷ್ಯನ್ ಮ್ಯಾರಥಾನ್ ಚಾಂಪಿಯನ್ ಶಿಪ್ನಲ್ಲಿ ಭಾಗವಹಿಸಲು ಅರ್ಹತೆ ಪಡೆದುಕೊಂಡಿದ್ದರು. ಭಾರತೀಯ ಸೇನೆಯಲ್ಲಿರುವ ಬೆಳ್ಯಪ್ಪ ಪುಣೆಯ ಆರ್ಮಿ ಸ್ಪೋರ್ಟ್ಸ್ ಇನ್ಸಿ÷್ಟಟ್ಯೂಟ್ನಲ್ಲಿದ್ದು, ಪ್ರಸ್ತುತ ಊಟಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಇವರು ಪೊನ್ನಂಪೇಟೆ ತಾಲೂಕಿನ ಟಿ. ಶೆಟ್ಟಿಗೇರಿ ಗ್ರಾಮದ ಅಪ್ಪಚಂಗಡ ಬೋಪಯ್ಯ ಹಾಗೂ ರೋಜಾ ದಂಪತಿ ಪುತ್ರ.