ಮಡಿಕೇರಿ, ಜ. ೧೩: ಗಣಕ ಯಂತ್ರ ಕೊರತೆ ಎದುರಿಸುತ್ತಿದ್ದ ಇಲ್ಲಿನ ಸರಕಾರಿ ಪದವಿಪೂರ್ವ ಕಾಲೇಜಿಗೆ ಇನ್ಫೋಸಿಸ್ ಸಂಸ್ಥೆ ಮೂಲಕ ಹದಿನೈದು ಗಣಕಯಂತ್ರಗಳನ್ನು ನೀಡಲಾಗಿದ್ದು, ಕಾಲೇಜು ತಾಂತ್ರಿಕವಾಗಿ ಅಭಿವೃದ್ಧಿ ಹೊಂದಲು ಸಹಾಯವಾಗಿದೆ ಎಂದು ಪ್ರಾಂಶುಪಾಲ ಪಿ.ಆರ್. ವಿಜಯ್ ಹೇಳಿದರು.

ಕೊಡಗು ಜಾನಪದ ಪರಿಷತ್ ಮಡಿಕೇರಿಯಲ್ಲಿ ವೀರಲೋಕ ಪ್ರಕಾಶನದ ಮೂಲಕ ಕಥಾ ಕಮ್ಮಟ ಹಮ್ಮಿಕೊಂಡಿದ್ದ ಸಂದರ್ಭ ಪ್ರಾಂಶುಪಾಲರು ಗಣಕಯಂತ್ರದ ಬೇಡಿಕೆ ಇರಿಸಿದ್ದರು. ಪ್ರಕಾಶನದ ಮುಖ್ಯಸ್ಥ ಪೂರಕ ಶ್ರೀನಿವಾಸ್ ಅವರು ಮನವಿಗೆ ಸ್ಪಂದಿಸಿ ಇನ್ಫೋಸಿಸ್ ಸಂಸ್ಥೆಯ ಮಿತ್ರ, ಸಮರ್ಪಣ ಟ್ರಸ್ಟಿನ ಸಾಗರ್ ಸಾಬೋಜಿ ಮೂಲಕ ಗಣಕಯಂತ್ರ ನೀಡಲು ವ್ಯವಸ್ಥೆ ಮಾಡಿದರು.

ಗಣಕ ಯಂತ್ರ ಹಸ್ತಾಂತರಿಸಿದ ನಂತರ ಸಾಗರ್ ಸಾಬೋಜಿ ಮಾತನಾಡಿ, ಕಾಲೇಜಿಗೆ ಇನ್ನೂ ಅವಶ್ಯವಿರುವ ಪ್ರಾಜೆಕ್ಟರ್, ಸ್ಕಿçÃನ್ ಇತ್ಯಾದಿ ಸಲಕರಣೆಗಳನ್ನು ಒದಗಿಸುವ ಭರವಸೆ ನೀಡಿದರು. ಜೊತೆಗೆ, ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ತರಬೇತಿ ನೀಡಲು ಬೆಂಗಳೂರಿನಿAದ ಪ್ರತಿ ಶನಿವಾರ ತಂತ್ರಜ್ಞರನ್ನು ಕಳುಹಿಸುವುದಾಗಿ ಹೇಳಿದರು.

ಕಂಪ್ಯೂಟರ್ ಕೊಠಡಿಯನ್ನು ಶಾಸಕ ಮಂಥರ್ ಗೌಡ ಉದ್ಘಾಟಿಸಿ ಮಾತನಾಡಿ, ಆಧುನಿಕ ತಂತ್ರಜ್ಞಾನದಿAದ ಒಳಿತು, ಕೆಡುಕು ಎರಡೂ ಇರುತ್ತದೆ. ಮೊಬೈಲ್, ಕಂಪ್ಯೂಟರ್‌ಗಳನ್ನು ಒಳ್ಳೆಯ ಉದ್ದೇಶಕ್ಕೆ ಮಾತ್ರ ಬಳಸಬೇಕು. ಅದರ ಸದುಪಯೋಗ ಪಡೆದುಕೊಳ್ಳಬೇಕು. ಉನ್ನತ ಶಿಕ್ಷಣ ಪಡೆದು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು. ಧರ್ಮ, ಜಾತಿ, ರಾಜಕೀಯದಿಂದ ದೂರವಿದ್ದು, ವೈಯಕ್ತಿಕ ಬೆಳವಣಿಗೆಗೆ ಆದ್ಯತೆ ನೀಡಿ, ಬೆಳೆದು ಉತ್ತಮ ಸಮಾಜ ನಿರ್ಮಾಣಕ್ಕೆ ಕಾರಣರಾಗಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಈ ಸಂದರ್ಭ ಇನ್ಫೋಸಿಸ್ ಸಂಸ್ಥೆ ಇನ್ನಷ್ಟು ಕಾಲೇಜುಗಳಿಗೆ ಸಹಕಾರ ನೀಡಲಿ ಎಂದು ಬಯಸಿದರು.

ಮುಖ್ಯ ಅತಿಥಿ ಪೂರಕ ಶ್ರೀನಿವಾಸ್ ಅವರು ಮಾತನಾಡಿ, ಬಡತನದ ಹಿನ್ನೆಲೆಯಿಂದ ಬಂದ ಸರಕಾರಿ ಶಾಲೆಗಳಲ್ಲಿ ಓದಿ ಬೆಳೆದ ವ್ಯಕ್ತಿಗಳು ಮುಂದೆ ಮಾದರಿಯಾಗಿ ಬೆಳೆದ ಉದಾಹರಣೆಗಳನ್ನು ನೀಡಿ, ಆತ್ಮಸ್ಥೆöÊರ್ಯ ಮತ್ತು ಛಲ ಇದ್ದಲ್ಲಿ ಗುರಿ ಸಾಧನೆ ಸಾಧ್ಯ. ಸಮಾಜದಲ್ಲಿ ‘ನೀಡುವ’ ಕೈಗಳ ಸಂಖ್ಯೆ ಹೆಚ್ಚಬೇಕು. ಸರ್ವಸ್ವವನ್ನೂ

(ಮೊದಲ ಪುಟದಿಂದ) ದಾನ ಮಾಡುತ್ತಿದ್ದ ಕರ್ಣನ ಜೀವ ತನಗೆ ಮಾದರಿ ಎಂದರು.

ವಿದ್ಯಾರ್ಥಿಗಳು ಇಂದು, ಈ ಕ್ಷಣವನ್ನು ಸದುಪಯೋಗಪಡಿಸಿಕೊಂಡರೆ ಅದು ಮುಂದಿನ ಯಶಸ್ಸಿಗೆ ಅಡಿಪಾಯವಾಗುತ್ತದೆ ಎಂದರು.

ಕೊಡಗಿನ ಸೋಮವಾರಪೇಟೆ ಮತ್ತು ನಾಪೋಕ್ಲುವಿನಲ್ಲಿ ಠಾಣಾಧಿಕಾರಿ ಆಗಿದ್ದು, ಬೆಂಗಳೂರಿನಲ್ಲಿ ವೃತ್ತ ನಿರೀಕ್ಷಕರಾಗಿರುವ, ಸಂಪನ್ಮೂಲ ವ್ಯಕ್ತಿ ಎಲ್.ವೈ. ರಾಜೇಶ್ ಅವರು ತಮ್ಮ ಅದ್ಭುತ ಮಾತಿನ ಕಲೆಯಿಂದ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು. ಸಮಯದ ಸದುಪಯೋಗ, ಇಂಟರ್‌ನೆಟ್ ಅಪಾಯಗಳಿಂದ ತೊಂದರೆಗೆ ಒಳಗಾಗುವುದು, ಯಶಸ್ಸಿನ ಗುಟ್ಟು ಇತ್ಯಾದಿ ವಿಚಾರಗಳನ್ನು ಮನದಟ್ಟು ಮಾಡಿದರು.

‘ಶಕ್ತಿ’ ಸಲಹಾ ಸಂಪಾದಕ ಬಿ.ಜಿ. ಅನಂತಶಯನ ಅವರು ಮಾತನಾಡಿ, ಕಾಲೇಜು ಪ್ರಾಂಶುಪಾಲರ ಆಸಕ್ತಿ, ಶ್ರೀನಿವಾಸ್ ಅವರ ಯತ್ನ, ಇನ್ಫೋಸಿಸ್ ಸಹಕಾರದಿಂದ ಕೈಗೂಡಿದ ಗಣಕ ಯಂತ್ರಗಳ ಯೋಜನೆಯ ಸದ್ಬಳಕೆ ಮಾಡುವಂತೆ ವಿದ್ಯಾರ್ಥಿಗಳಿಗೆ ಹಿತ ನುಡಿದರು. ರೋಟರಿ ಉಡ್ಸ್ ಅಧ್ಯಕ್ಷ ವಸಂತ್ ಕುಮಾರ್ ಮಾತನಾಡಿದರು. ಉದ್ಯಮಿ ಚೇತನ್ ಪಟೇಲ್ ಹಾಗೂ ಹಾಸನ ಆಹಾರ ಸುರಕ್ಷತಾ ಸಮಿತಿಯ ಕೆ. ವಿನಯ್ ಹಾಜರಿದ್ದರು.

ಪ್ರಾಂಶುಪಾಲ ಪಿ.ಆರ್. ವಿಜಯ್ ಸ್ವಾಗತ, ಉಪನ್ಯಾಸಕ ಚಿದಾನಂದ ವಂದನಾರ್ಪಣೆ ಹಾಗೂ ಉಪನ್ಯಾಸಕಿ ಕೆ.ಬಿ. ಗೌರಿ ನಿರೂಪಣೆ ಮಾಡಿದರು.