ಯುವನಿಧಿಗೆ ಚಾಲನೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಶಿವಮೊಗ್ಗ, ಜ. ೧೨: ಬಡವರು ಹಾಗೂ ಮಧ್ಯಮ ವರ್ಗದವರಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿ ತುಂಬಿ ಮುಖ್ಯವಾಹಿನಿಗೆ ತರಬೇಕು ಎಂಬ ಉದ್ದೇಶದಿಂದ ನಮ್ಮ ಸರ್ಕಾರ ಪ್ರಣಾಳಿಕೆಯಲ್ಲಿ ಭರವಸೆ ನೀಡಿದಂತೆ ಐದು ಗ್ಯಾರಂಟಿಗಳನ್ನು ಜಾರಿಗೊಳಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಹೇಳಿದ್ದಾರೆ. ಇಂದು ಶಿವಮೊಗ್ಗದ ಫ್ರೀಡಂ ಪಾರ್ಕ್ನಲ್ಲಿ ಸಿದ್ದರಾಮಯ್ಯ ಅವರು, ಆರು ನಿರುದ್ಯೋಗಿ ಯುವಕರಿಗೆ ಚೆಕ್ಗಳನ್ನು ವಿತರಿಸುವ ಮೂಲಕ ಕಾಂಗ್ರೆಸ್ ಸರ್ಕಾರದ ಐದನೇ ಗ್ಯಾರಂಟಿ ಯೋಜನೆ ಯುವ ನಿಧಿಗೆ ಚಾಲನೆ ನೀಡಿದರು. ಇದರೊಂದಿಗೆ ಕಾಂಗ್ರೆಸ್ ಪಕ್ಷ ಚುನಾವಣಾ ಪೂರ್ವದಲ್ಲಿ ಘೋಷಿಸಿದ್ದ ಎಲ್ಲಾ ಐದೂ ಗ್ಯಾರಂಟಿಗಳನ್ನು ಅನುಷ್ಠಾನ ಗೊಳಿಸಿದಂತಾಗಿದೆ. ಬಳಿಕ ಮಾತನಾಡಿದ ಮುಖ್ಯಮಂತ್ರಿಗಳು, ಚುನಾವಣೆ ಗಾಗಿ ಯುವನಿಧಿ ಯೋಜನೆಯನ್ನು ಜಾರಿಗೆ ತಂದಿಲ್ಲ. ನಿರುದ್ಯೋಗಿ ಯುವಕರಿಗೆ ನೆರವಾಗಬೇಕೆಂಬ ಉದ್ದೇಶದಿಂದಷ್ಟೇ ಈ ಯೋಜನೆ ಜಾರಿ ಗೊಳಿಸಲಾಗಿದೆ. ದೇಶದಲ್ಲಿ ದಿನಬಳಕೆ, ಪೆಟ್ರೋಲ್, ಡಿಸೇಲ್ ದರ ಏರಿಕೆ ಯಾಗಿದೆ. ಜನಸಮಾನ್ಯರಿಗೆ ಖರೀದಿಸುವ ಸಾಮರ್ಥ್ಯವಿಲ್ಲ ಎಂದು ಹೇಳಿದರು.
ದೇಶದ ಅತಿ ಉದ್ದದ ಸಮುದ್ರ ಸೇತುವೆಗೆ ಚಾಲನೆ
ಮುಂಬೈ, ಜ. ೧೨: ದೇಶದ ಅತಿ ಉದ್ದದ ಸಮುದ್ರ ಸೇತುವೆ, ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್ (ಒಖಿಊಐ) ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಉದ್ಘಾಟಿಸಿದರು. ಮುಂಬೈನ ಸೆವ್ರಿ ಮತ್ತು ರಾಯಗಡ ಜಿಲ್ಲೆಯ ಪನ್ವೆಲ್ ನಡುವಿನ ೨೧.೮ ಕಿ.ಮೀ. ಉದ್ದದ ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್ ಸೇತುವೆಗೆ ಪ್ರಧಾನಿ ಮೋದಿ ಇಂದು ಅಧಿಕೃತವಾಗಿ ಚಾಲನೆ ನೀಡಿದರು. ಈ ಸೇತುವೆ ರಾಯಗಢ ಜಿಲ್ಲೆಯ ಪನ್ವೆಲ್ ಮತ್ತು ದಕ್ಷಿಣ ಮಧ್ಯ ಮುಂಬೈನ ಸೆವ್ರಿ ನಡುವಿನ ಅಂತರವನ್ನು ಕಡಿಮೆಗೊಳಿಸುತ್ತದೆ ಮತ್ತು ಪ್ರಯಾಣದ ಸಮಯ ಸುಮಾರು ಎರಡು ಗಂಟೆಗಳಿAದ ೧೫ ರಿಂದ ೨೦ ನಿಮಿಷಗಳಿಗೆ ಇಳಿಯಲಿದೆ.
ದೇವಾಲಯ ಆವರಣ ಶುಚಿಗೊಳಿಸಿದ ಪಿ.ಎಂ. ಮೋದಿ
ನಾಸಿಕ್, ಜ. ೧೨: ಸ್ವಚ್ಛತಾ ಅಭಿಯಾನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಮಹಾರಾಷ್ಟçದ ನಾಸಿಕ್ನಲ್ಲಿರುವ ಕಲಾರಾಮ ದೇವಾಲಯದ ಆವರಣವನ್ನು ಸ್ವಚ್ಛಗೊಳಿಸಿದರು. ಮೋದಿ ಅವರು ಮಾಪ್ ಸ್ಟಿಕ್ ಹಿಡಿದು, ಬಕೆಟ್ನೊಂದಿಗೆ ದೇವಾಲಯದ ನೆಲವನ್ನು ಒರೆಸುವ ದೃಶ್ಯಗಳು ವೀಡಿಯೋದಲ್ಲಿ ಸೆರೆಯಾಗಿದೆ. ಸಂಸದ ಪ್ರತಾಪ್ ಸಿಂಹ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಈ ವೀಡಿಯೋವನ್ನು ಹಂಚಿ ಕೊಂಡಿದ್ದಾರೆ. ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೂ ಮುನ್ನ ದೇಶಾದ್ಯಂತ ದೇವಾಲಯಗಳಲ್ಲಿ ಸ್ವಚ್ಛತಾ ಚಟುವಟಿಕೆಗಳನ್ನು (ಸ್ವಚ್ಛತಾ ಅಭಿಯಾನ) ಕೈಗೊಳ್ಳುವಂತೆ ಪ್ರಧಾನಿ ಜನರಿಗೆ ಮನವಿ ಮಾಡಿದ್ದಾರೆ. ಇದಕ್ಕೂ ಮುನ್ನ ಕಲಾರಾಮ ಮಂದಿರದಲ್ಲಿ ದರ್ಶನ ಹಾಗೂ ಪೂಜೆ ಸಲ್ಲಿಸಿದರು. ಗೋದಾವರಿ ನದಿಯ ದಡದಲ್ಲಿರುವ ಶ್ರೀ ರಾಮ್ ಕುಂಡದಲ್ಲಿಯೂ ವಿಶೇಷ ಪೂಜೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಮೋದಿ ಅವರು ರಾಮಾಯಣ ಮಹಾಕಾವ್ಯದ ‘ಯುದ್ಧಕಾಂಡ' ಭಾಗವನ್ನು ಕೇಳಿದ್ದಾರೆ.
ಸಾವಿರ ಗಡಿ ದಾಟಿದ ಜೆಎನ್. ೧ ಪ್ರಕರಣ
ನವದೆಹಲಿ, ಜ. ೧೨: ಕೊರೊನಾ ವೈರಸ್ ರೂಪಾಂತರಿ ಜೆಎನ್. ೧ ಮೊದಲ ಪ್ರಕರಣ ಕೇರಳದಲ್ಲಿ ಪತ್ತೆಯಾದ ನಂತರ ದೇಶಾದ್ಯಂತ ಆತಂಕ ಹೆಚ್ಚಾಗತೊಡಗಿದ್ದು, ಕೋವಿಡ್ ಸೋಂಕಿತರ ಜೊತೆಗೆ ರೂಪಾಂತರಿ ಪ್ರಕರಣಗಳ ಸಂಖ್ಯೆ ಶುಕ್ರವಾರ ೧ ಸಾವಿರದ ಗಡಿ ದಾಟಿದೆ. ದೇಶದ ೧೬ ರಾಜ್ಯಗಳಲ್ಲಿ ಇದುವರೆಗೆ ೧೦೧೩ ಜೆಎನ್. ೧ ಪ್ರಕರಣಗಳು ವರದಿಯಾಗಿದ್ದು, ಕರ್ನಾಟಕ ೨೧೪ ಪ್ರಕರಣಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ೧೭೦ ಪ್ರಕರಣಗಳೊಂದಿಗೆ ಮಹಾರಾಷ್ಟç ಎರಡನೇ ಸ್ಥಾನದಲ್ಲಿದೆ. ಕೇರಳ (೧೫೪), ಆಂಧ್ರಪ್ರದೇಶ (೧೮೯), ಗುಜರಾತ್ (೭೬) ಮತ್ತು ಗೋವಾ (೬೬) ನಂತರದ ಸ್ಥಾನದಲ್ಲಿವೆ. ತೆಲಂಗಾಣ ಮತ್ತು ರಾಜಸ್ಥಾನದಲ್ಲಿ ತಲಾ ೩೨, ಛತ್ತೀಸ್ಗಢದಲ್ಲಿ ೨೫, ತಮಿಳುನಾಡಿನಲ್ಲಿ ೨೨, ದೆಹಲಿಯಲ್ಲಿ ೧೬, ಉತ್ತರ ಪ್ರದೇಶದಲ್ಲಿ ೬, ಹರಿಯಾಣದಲ್ಲಿ ೫, ಒಡಿಶಾದಲ್ಲಿ ೩, ಪಶ್ಚಿಮ ಬಂಗಾಳದಲ್ಲಿ ೨ ಮತ್ತು ಉತ್ತರಾಖಂಡದಲ್ಲಿ ೧ ಪ್ರಕರಣ ದಾಖಲಾಗಿದೆ.
ಕೋವಿಡ್ನಿಂದ ಮೃತಪಟ್ಟವರ ಅಂತ್ಯಕ್ರಿಯೆಗೆ ನಿರಾಕರಿಸದಂತೆ ಸುತ್ತೋಲೆ
ಬೆಂಗಳೂರು, ಜ. ೧೨: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಈ ನಡುವಲ್ಲೇ ಕೊವಿಡ್ ೧೯ ಸೋಂಕಿನಿAದ ಮರಣ ಹೊಂದಿದವರ ಅಂತ್ಯಕ್ರಿಯೆ ನಡೆಸುವ ಕುರಿತಾಗಿ ಆರೋಗ್ಯ ಇಲಾಖೆಯಿಂದ ಸುತ್ತೋಲೆ ಹೊರಡಿಸಿದೆ. ರಾಜ್ಯದ ಜಿಲ್ಲೆಗಳಲ್ಲಿ ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ೧೯ ಸೋಂಕಿನಿAದ ಮರಣ ಹೊಂದಿದವರ ಅಂತ್ಯಕ್ರಿಯೆಯನ್ನು ಸಾಮಾನ್ಯ ಚಿತಾಗಾರ, ಸ್ಮಶಾನ ಮತ್ತು ರುದ್ರಭೂಮಿಯಲ್ಲಿ ನಡೆಸುವಂತೆ ಸೂಚಿಸಲಾಗಿದೆ. ರಾಜ್ಯದ ಜಿಲ್ಲೆಗಳಲ್ಲಿ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಕೋವಿಡ್ ಸೋಂಕಿನಿAದ ಮರಣ ಹೊಂದಿದವರ ಅಂತ್ಯಕ್ರಿ ಯೆಯನ್ನು ಸಾಮಾನ್ಯ ಚಿತಾಗಾರ, ಸ್ಮಶಾನ ಹಾಗೂ ರುದ್ರಭೂಮಿಯಲ್ಲಿ ನಡೆಸಬೇಕು. ಕೋವಿಡ್ ಸೋಂಕಿನಿAದ ಮರಣ ಹೊಂದಿದವರ ಅಂತ್ಯಕ್ರಿ ಯೆಯನ್ನು ನಡೆಸಲು ಬಿಬಿಎಂಪಿ ವ್ಯಾಪ್ತಿಯಲ್ಲಿ ಹಾಗೂ ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುವ ಚಿತಾಗಾರ, ಸ್ಮಶಾನ ಹಾಗೂ ರುದ್ರಭೂಮಿಗಳಲ್ಲಿ ಅಂತ್ಯಕ್ರಿಯೆಗೆ ತರುವ ಮೃತದೇಹಗಳನ್ನು ಚಿತಾಗಾರ, ಸ್ಮಶಾನದ ಸಿಬ್ಬಂದಿ ನಿರಾಕರಿಸದೆ, ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಎನ್-೯೫ ಮಾಸ್ಕ್, ಗ್ಲೌವ್ಸ್ ಹಾಗೂ ಪಿಪಿಇ ಕಿಟ್ ಧರಿಸಿ ಅಂತ್ಯಕ್ರಿಯೆ ನಡೆಸಿದ ನಂತರ ಅವುಗಳನ್ನು ಮಾರ್ಗಸೂಚಿಯಂತೆ ವಿಲೇವಾರಿ ಮಾಡಬೇಕು ಎಂದು ಹೇಳಿದೆ.