ಮಡಿಕೇರಿ, ಜ. ೧೧ : ಪ್ರಧಾನಿ ನರೇಂದ್ರ ಮೋದಿ ಅವರ ಪರಿಕಲ್ಪನೆಯ ೬ನೇ ಆವೃತ್ತಿಯ ಖೇಲೋ ಇಂಡಿಯಾ ಯೂತ್ ಗೇಮ್ಸ್ ರಾಷ್ಟಿçÃಯ ಕ್ರೀಡಾಕೂಟ ತಮಿಳುನಾಡುವಿನಲ್ಲಿ ಆರಂಭಗೊಳ್ಳಲಿದೆ. ಈ ಕ್ರೀಡಾಕೂಟಕ್ಕೆ ಮೊನ್ನೆ ಚಾಲನೆ ನೀಡಲಾಗಿದ್ದು, ಸ್ಕಾ÷್ವಷ್ ಕ್ರೀಡಾ ತಾರೆ ಕೊಡಗಿನವರಾದ ಕುಟ್ಟಂಡ ಜೋಶ್ನಾ ಚಿಣ್ಣಪ್ಪ ಅವರು ಆಹ್ವಾನಿತರಾಗಿ ಪಾಲ್ಗೊಂಡು ಸಮಾರಂಭಕ್ಕೆ ಕ್ರೀಡಾಜ್ಯೋತಿಯನ್ನು ತಂದರು.

ಈ ಬಾರಿಯ ಖೇಲೋ ಇಂಡಿಯಾ ಯೂತ್ ಗೇಮ್ಸ್ನಲ್ಲಿ ಸ್ಕಾ÷್ವಷ್ ಕ್ರೀಡೆಯೂ ಇದೇ ಮೊದಲ ಬಾರಿಗೆ ಸೇರ್ಪಡೆಗೊಂಡಿರುವುದು ವಿಶೇಷವಾಗಿದೆ. ಜೋಶ್ನಾ ಚಿಣ್ಣಪ್ಪ ಅವರೊಂದಿಗೆ ತಮಿಳುನಾಡು ಮುಖ್ಯಮಂತ್ರಿ ಸ್ಟಾö್ಯಲಿನ್, ಕ್ರೀಡಾ ಸಚಿವರು ಸೇರಿದಂತೆ ಪ್ರಮುಖರು ಸಮಾರಂಭದಲ್ಲಿ ಉಪಸ್ಥಿತರಿದ್ದರು.