ಸೋಮವಾರಪೇಟೆ, ಜ.೧೧ : ಕೊಡವ ನ್ಯಾಷನಲ್ ಕೌನ್ಸಿಲ್ ಮೂಲಕ ನಡೆಯುತ್ತಿರುವ ಸಂವಿಧಾನದ ೬ನೇ ಪರಿಚ್ಛೇದದ ಮೂಲಕ ಕೊಡವ ಲ್ಯಾಂಡ್ ಘೋಷಣೆ, ಎಸ್ಟಿ ಮೀಸಲು ಸೇರಿದಂತೆ ಇನ್ನಿತರ ಹೋರಾಟಗಳ ದೂರಗಾಮಿ ಪರಿಣಾಮಗಳ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಕೊಡವೇತರ ಸಮುದಾಯಗಳ ಮುಖಂಡರು, ಮುಂದಿನ ದಿನಗಳಲ್ಲಿ ಕಾನೂನು ಭಾಗದಲ್ಲಿ ಹೋರಾಟ ನಡೆಸಲು ಇಂದು ನಡೆದ ಸಭೆಯಲ್ಲಿ ತೀರ್ಮಾನಿಸಿದರು.
ಇಲ್ಲಿನ ಒಕ್ಕಲಿಗರ ಸಮುದಾಯ ಭವನದ ಶ್ರೀಗಂಧ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಕೊಡವ ಲ್ಯಾಂಡ್ ಘೋಷಣೆಯಾದರೆ ಮುಂದೆ ಬೀರ ಬಹುದಾದ ಪ್ರತಿಕೂಲತೆಗಳು, ಇತರ ಸಮುದಾಯಗಳ ಮೇಲೆ ಉಂಟಾಗುವ ಪರಿಣಾಮಗಳ ಬಗ್ಗೆ ವಿಸ್ತೃತ ಚರ್ಚೆ ನಡೆದು, ಅಂತಿಮವಾಗಿ ರಾಜ್ಯ ಹೈಕೋರ್ಟ್ನಲ್ಲಿ ಸಲ್ಲಿಕೆಯಾಗಿ ರುವ ಸಾರ್ವಜನಿಕ ಹಿತಾಸಕ್ತಿ ದಾವೆ ಯಡಿ ನಮ್ಮನ್ನೂ ವಿಚಾರಣೆಗೆ ಒಳಪಡಿಸ ಬೇಕು. ಇತರರ ಅಭಿಪ್ರಾಯವನ್ನೂ ಸಂಗ್ರಹಿ ಸಬೇಕೆಂದು ನ್ಯಾಯಾಲಯಕ್ಕೆ ಮನ ವರಿಕೆ ಮಾಡಲು ತೀರ್ಮಾನಿಸಲಾಯಿತು.
ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯು ಕೊಡವ ಲ್ಯಾಂಡ್ ಬೇಡಿಕೆ ಮುಂದಿಟ್ಟುಕೊAಡು ಹೋರಾಟ ನಡೆಸುತ್ತಿದೆ. ಕೊಡವರನ್ನು ಎಸ್ಟಿ ಮೀಸಲಾತಿಗೆ ಒಳಪಡಿಸುವ ಸಂಬAಧ ಒತ್ತಡ ಹಾಕುತ್ತಿದೆ. ಇದಕ್ಕೆ ಆರಂಭದಲ್ಲಿ ಸುಮ್ಮನಿದ್ದ ಇತರರು ಇದೀಗ ಬೆಂಬಲವಾಗಿ ನಿಲ್ಲುತ್ತಿದ್ದಾರೆ. ವಿವಿಧ ರಾಜಕೀಯ ಪಕ್ಷಗಳ ಮುಖಂ ಡರು ಸಿಎನ್ಸಿ ಪರವಾಗಿದ್ದಾರೆ. ಅಧಿಕಾರಿಗಳು, ಜನಪ್ರತಿನಿಧಿಗಳು ಬೆಂಬಲ ನೀಡುತ್ತಿದ್ದಾರೆ. ಒಂದು ವೇಳೆ ಕೊಡವ ಲ್ಯಾಂಡ್ ಆದರೆ ಮುಂದೆ ಆಗಬಹುದಾದ ಪರಿಣಾಮಗಳ ಬಗ್ಗೆ ಇತರ ಸಮುದಾಯಗಳು ಚಿಂತಿಸುತ್ತಿಲ್ಲ ಎಂದು ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಎಸ್.ಎಂ. ಚಂಗಪ್ಪ ಹೇಳಿದರು.
ಕೊಡವರ ಆಚಾರ, ವಿಚಾರ, ಸಂಸ್ಕೃತಿ ವಿಶೇಷವಾಗಿದ್ದು, ಅದನ್ನು ಉಳಿಸಿ ಬೆಳೆಸಬೇಕಾಗಿದೆ. ಆದರೆ ಪ್ರತ್ಯೇಕ ಕೊಡವ ಲ್ಯಾಂಡ್ ಘೋಷಣೆಯಿಂದ ಇಲ್ಲಿನ ಭೌಗೋಳಿಕ ಪ್ರದೇಶ, ಶಿಕ್ಷಣ, ಕಾನೂನು, ಸರ್ಕಾರದ ವ್ಯವಸ್ಥೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರ ಲಿದೆ. ಅನಿವಾರ್ಯವಾಗಿ ಇತರ ಸಮುದಾಯಗಳು ತಮ್ಮ ಸ್ವಾತಂತ್ರö್ಯವನ್ನು ಕಳೆದುಕೊಳ್ಳಬೇಕಾಗುತ್ತದೆ. ಎರಡನೇ ದರ್ಜೆಯ ಪ್ರಜೆಗಳನ್ನಾಗಿ ಮಾಡ ಲಾಗುತ್ತದೆ. ಇತರ ಸಮುದಾಯಗಳ ಮುಂದಿನ ತಲೆಮಾರುಗಳು ಸಂಕಷ್ಟಕ್ಕೆ ಒಳಗಾಗಬೇಕಾಗುತ್ತದೆ ಎಂದು ಅಭಿಪ್ರಾಯಿಸಿದರು.
ಕಳೆದ ೨೧.೧೨.೨೦೨೧ರಂದು ಕೊಡವ ಲ್ಯಾಂಡ್ ರಚನೆ ಸಂಬAಧ ಪ್ರತ್ಯೇಕ ಆಯೋಗ ರಚಿಸುವಂತೆ, ಕೊಡವರನ್ನು ಎಸ್ಟಿ ಪಟ್ಟಿಗೆ ಸೇರಿ ಸುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಇದಕ್ಕೆ ಯಾವುದೇ ಉತ್ತರ ಬಾರದ ಹಿನ್ನೆಲೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿದೆ. ಈಗಾಗಲೇ ನಾಲ್ಕೆöÊದು ಬಾರಿ ಅರ್ಜಿಯ ವಿಚಾರಣೆ ನಡೆದಿದೆ. ಈ ಹಿನ್ನೆಲೆ ಇತರ ಸಮುದಾಯಗಳೂ ಸಹ ನ್ಯಾಯಾಲ ಯದ ಮೊರೆ ಹೋಗಲೇಬೇಕಿದೆ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.
ಈ ಹಿಂದೆ ಎ.ಕೆ. ಸುಬ್ಬಯ್ಯ ಅವರು ಕೊಡವರನ್ನು ಎಸ್ಟಿಗೆ ಸೇರಿಸಬಾರದು ಎಂದು ಮುಖ್ಯಮಂತ್ರಿ ಗಳನ್ನು ನಿಯೋಗದ ಮೂಲಕ ಭೇಟಿ ಮಾಡಿದ್ದರು. ಪ್ರಸ್ತುತ ಇರುವ ಸಿಎನ್ಸಿ ಸಂಘಟನೆಯ ಪ್ರಮುಖರು ಈ ಹಿಂದೆ ಲಿವಾಕ್ನಿಂದ ಹೋರಾಟ ಆರಂಭಿಸಿ ಇದೀಗ ಕೊಡವ ಲ್ಯಾಂಡ್ ಹೋರಾಟ ದರ್ಜೆಯ ಪ್ರಜೆಗಳನ್ನಾಗಿ ಮಾಡ ಲಾಗುತ್ತದೆ. ಇತರ ಸಮುದಾಯಗಳ ಮುಂದಿನ ತಲೆಮಾರುಗಳು ಸಂಕಷ್ಟಕ್ಕೆ ಒಳಗಾಗಬೇಕಾಗುತ್ತದೆ ಎಂದು ಅಭಿಪ್ರಾಯಿಸಿದರು.
ಕಳೆದ ೨೧.೧೨.೨೦೨೧ರಂದು ಕೊಡವ ಲ್ಯಾಂಡ್ ರಚನೆ ಸಂಬAಧ ಪ್ರತ್ಯೇಕ ಆಯೋಗ ರಚಿಸುವಂತೆ, ಕೊಡವರನ್ನು ಎಸ್ಟಿ ಪಟ್ಟಿಗೆ ಸೇರಿ ಸುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಇದಕ್ಕೆ ಯಾವುದೇ ಉತ್ತರ ಬಾರದ ಹಿನ್ನೆಲೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿದೆ. ಈಗಾಗಲೇ ನಾಲ್ಕೆöÊದು ಬಾರಿ ಅರ್ಜಿಯ ವಿಚಾರಣೆ ನಡೆದಿದೆ. ಈ ಹಿನ್ನೆಲೆ ಇತರ ಸಮುದಾಯಗಳೂ ಸಹ ನ್ಯಾಯಾಲ ಯದ ಮೊರೆ ಹೋಗಲೇಬೇಕಿದೆ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.
ಈ ಹಿಂದೆ ಎ.ಕೆ. ಸುಬ್ಬಯ್ಯ ಅವರು ಕೊಡವರನ್ನು ಎಸ್ಟಿಗೆ ಸೇರಿಸಬಾರದು ಎಂದು ಮುಖ್ಯಮಂತ್ರಿ ಗಳನ್ನು ನಿಯೋಗದ ಮೂಲಕ ಭೇಟಿ ಮಾಡಿದ್ದರು. ಪ್ರಸ್ತುತ ಇರುವ ಸಿಎನ್ಸಿ ಸಂಘಟನೆಯ ಪ್ರಮುಖರು ಈ ಹಿಂದೆ ಲಿವಾಕ್ನಿಂದ ಹೋರಾಟ ಆರಂಭಿಸಿ ಇದೀಗ ಕೊಡವ ಲ್ಯಾಂಡ್ ಹೋರಾಟ ಜನಪ್ರತಿನಿಧಿಗಳು, ರಾಜಕಾರಣಿಗಳಿಗೆ ಪತ್ರ ಬರೆಯಲಾಗಿದೆ. ಆದರೆ ಯಾರೊಬ್ಬರೂ ಸಹ ತಮ್ಮ ರಾಜಕೀಯ ಕಾರಣಕ್ಕಾಗಿ ತಮ್ಮ ನಿಲುವು ಸ್ಪಷ್ಟಪಡಿಸಿಲ್ಲ. ಕೊಡಗಿನಲ್ಲಿರುವ ಇತರ ಎಲ್ಲಾ ಜನಾಂಗದವರು ಸಹ ಈ ನಿಟ್ಟಿನಲ್ಲಿ ಚಿಂತಿಸಬೇಕಿದೆ ಎಂದು ಶಶಿಧರ್ ಹೇಳಿದರು.
ಸಭೆಯಲ್ಲಿ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್. ಮುತ್ತಣ್ಣ, ಒಕ್ಕಲಿಗರ ಯುವ ವೇದಿಕೆ ಅಧ್ಯಕ್ಷ ಚಕ್ರವರ್ತಿ ಸುರೇಶ್ ಅವರುಗಳು ಉಪ ಸ್ಥಿತರಿದ್ದರು. ತಕ್ಷಣಕ್ಕೆ ಎಲ್ಲಾ ಜನಾಂಗದ ಪ್ರಮುಖರನ್ನು ಒಳಗೊಂಡAತೆ ನಿಯೋ ಗದ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲು ತೀರ್ಮಾ ನಿಸಲಾಯಿತು. ಇದರೊಂದಿಗೆ ಮುಂದಿನ ಕಾನೂನು ಭಾಗದ ಹೋರಾಟದ ಬಗ್ಗೆ ಚರ್ಚೆ ನಡೆಯಿತು. ಹೋರಾಟವನ್ನು ಜನಾಂದೋಲನ ವನ್ನಾಗಿಸುವ ನಿಟ್ಟಿನಲ್ಲಿ ಹೋಬಳಿ, ತಾಲೂಕು, ಜಿಲ್ಲಾಮಟ್ಟದಲ್ಲಿ ಸಮಿತಿ ಗಳನ್ನು ರಚಿಸುವ ಬಗ್ಗೆ ನಿರ್ಧರಿಸಲಾ ಯಿತು. ಸಭೆಯಲ್ಲಿ ಸೋಮವಾರಪೇಟೆ ವ್ಯಾಪ್ತಿಯ ವಿವಿಧ ಸಮುದಾಯಗಳ ಮುಖಂಡರು, ಸಮಾಜಗಳ ಪದಾ ಧಿಕಾರಿಗಳು ಭಾಗವಹಿಸಿದ್ದರು.