ಸೋಮವಾರಪೇಟೆ, ಜ. ೧೧: ಜೆ.ಸಿ.ಐ. ಸೋಮವಾರಪೇಟೆ ಪುಷ್ಪಗಿರಿ ಸಂಸ್ಥೆಯ ನೂತನ ಸಾಲಿನ ಅಧ್ಯಕ್ಷರಾಗಿ ಎಸ್.ಆರ್. ವಸಂತ್ ಅವರು ಆಯ್ಕೆಯಾಗಿದ್ದು, ಇಲ್ಲಿನ ಸಂಕಪ್ಪ ಸಭಾಂಗಣದಲ್ಲಿ ನಡೆದ ಪದಗ್ರಹಣ ಕಾರ್ಯಕ್ರಮದಲ್ಲಿ ಅಧಿಕಾರ ಸ್ವೀಕರಿಸಿದರು.

ನೂತನ ಸಾಲಿನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಎಸ್.ಆರ್. ವಸಂತ್ ಮತ್ತು ತಂಡಕ್ಕೆ ಪದಗ್ರಹಣ ಕಾರ್ಯಕ್ರಮವನ್ನು ವಲಯ ೧೪ರ ಅಧ್ಯಕ್ಷೆ ಆಶಾ ಜೈನ್ ನಡೆಸಿದರು. ನಂತರ ಮಾತನಾಡಿದ ಅವರು, ಪ್ರಪಂಚದ ೧೨೦ ರಾಷ್ಟçಗಳಲ್ಲಿ ಸೇವೆಯನ್ನು ನೀಡುತ್ತಿರುವ ಜೇಸಿ ಸಂಸ್ಥೆಗೆ ಭಾರತ ದೇಶದ ಕೆ. ಕವೀನ್ ಕುಮಾರ್ ಅಧ್ಯಕ್ಷರಾಗಿರುವುದು ಶ್ಲಾಘನೀಯ ಎಂದರು.

ಒಬ್ಬರಿAದಾಗದ ಕೆಲಸವನ್ನು ಸಂಸ್ಥೆಯ ಎಲ್ಲರೂ ಸೇರಿ ಮಾಡಬೇಕಿದೆ. ಈ ನಿಟ್ಟಿನಲ್ಲಿ ನೂತನ ಸಾಲಿನ ಅಧ್ಯಕ್ಷರು ಯುವ ಸದಸ್ಯರನ್ನು ಸಂಸ್ಥೆಗೆ ಸೇರಿಸಿಕೊಳ್ಳುವ ಮೂಲಕ ಸಮಾಜಸೇವೆಗೆ ಮುಂದಾಗಬೇಕೆAದರು. ವಲಯ ಅಧ್ಯಕ್ಷ ಎಂ.ಡಿ. ರಂಗಸ್ವಾಮಿ ಮಾತನಾಡಿ, ಸಂಸ್ಥೆಯ ನೇತೃತ್ವದಲ್ಲಿ ಹತ್ತು ಹಲವು ಯೋಜನೆಗಳನ್ನು ಹಮ್ಮಿಕೊಳ್ಳುವ ಮೂಲಕ ಸಮಾಜ ಸೇವೆಯಲ್ಲಿ ಸದಸ್ಯರು ತಮ್ಮನ್ನು ತೊಡಗಿಸಿಕೊಳ್ಳಬೇಕು. ಆ ಮೂಲಕ ಜೇಸಿ ಆಂದೋಲನ ಮಾಡಬೇಕು. ಅದಕ್ಕಾಗಿ ಯುವಜನರನ್ನು ತಮ್ಮೊಂದಿಗೆ ಕರೆದೊಯ್ಯುವುದರೊಂದಿಗೆ ಸಮಾಜದಲ್ಲಿ ನೊಂದವರ ಬೆಳಕಾಗಬೇಕೆಂದರು.

ವೇದಿಕೆಯಲ್ಲಿ ವಲಯ ೧೪ರ ಉಪಾಧ್ಯಕ್ಷ ಜಿ. ರಾಕೇಶ್, ಕಾರ್ಯದರ್ಶಿ ಜಗದಾಂಭ, ಲೇಡಿ ಜೇಸಿ ಅಧ್ಯಕ್ಷೆ ವಿನುತಾ ಸುದೀಪ್, ಐ.ಪಿ.ಪಿ., ಎಂ.ಎ. ರುಬೀನ, ಜೆ.ಜೆ.ಸಿ. ದೀಪಶ್ರೀ ಇದ್ದರು.