ವೀರಾಜಪೇಟೆಯ, ಜ. ೧೧: ವೀರಾಜಪೇಟೆಯ ಕಾವೇರಿ ಶಾಲೆ ವಾರ್ಷಿಕೋತ್ಸವ ಸಮಾರಂಭ "ಪ್ರಣವಂ ಭಾರತ್" ಸಂಭ್ರಮದಿAದ ನಡೆಯಿತು. ನಗರದ ಸೆರೆನಿಟಿ ಸಭಾಂಗಣದಲ್ಲಿ ನಡೆದ ಕಾರ್ಯ ಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಕಾವೇರಿ ಎಜುಕೇಶನ್ ಟ್ರಸ್ಟ್ನ ಅಧ್ಯಕ್ಷೆ ಕಾವೇರಿ ಮುತ್ತಣ್ಣ, ವಿದ್ಯಾರ್ಥಿಗಳು ಓದಿಗೆ ಹೆಚ್ಚಿನ ಒತ್ತು ನೀಡಿ, ನಿರಂತರ ಕಲಿಕೆಯಿಂದ ಜ್ಞಾನವನ್ನು ವೃದ್ಧಿಸಿ ಕೊಳ್ಳುವ ಮೂಲಕ ವಿವಿಧ ಕ್ಷೇತ್ರಗಳಲ್ಲಿ ಸಾಧಕರಾಗಿ ಹೊರಹೊಮ್ಮುವಂತೆ ಕರೆ ನೀಡಿದರು.

ವೀರಾಜಪೇಟೆ ಕ್ಷೇತ್ರ ಸಮನ್ವಯ ಅಧಿಕಾರಿ ವನಜಾಕ್ಷಿ ಮಾತನಾಡಿ, ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಶಾಲೆಗಳು ಹೊಣೆಗಾರಿಕೆಯ ಪಾತ್ರ ವಹಿಸುತ್ತವೆ ಮತ್ತು ಇದರಲ್ಲಿ ಮಕ್ಕಳ ಪೋಷಕರ ಜವಾಬ್ದಾರಿಯೂ ಇದೇ ಎಂದರು. ಕಾವೇರಿ ಶಾಲೆ ಕಾರ್ಯದರ್ಶಿ ಪಿ.ಎನ್. ವಿನೋದ್ ಮಾತನಾಡಿ, ದೇಶವನ್ನು ಕಾಡುತ್ತಿರುವ ಭಯೋತ್ಪಾದನೆ, ಕೋಮುದ್ವೇಷ, ಭ್ರಷ್ಟಾಚಾರ ತೊಲಗಿ ಭಾರತ ದೇಶ ವಿವಿಧತೆಯಲ್ಲಿ ಏಕತೆ ಹೊಂದಿದ ದೇಶ ಎಂಬುದನ್ನು ನಮ್ಮ ಮುಂದಿನ ಪೀಳಿಗೆಗೆ ತಿಳಿಸುವ ಚಿಂತನೆಯೊAದಿಗೆ ಶಾಲಾ ವಾರ್ಷಿಕೋತ್ಸವಕ್ಕೆ ‘ಪ್ರಣವಂ ಭಾರತ್’ ಎಂದು ಹೆಸರಿಡಲಾಗಿದೆ ಎಂದರು.

ಕಾವೇರಿ ಶಾಲೆÀ ಅಧ್ಯಕ್ಷ ಬಿ.ಎಸ್. ಸುದೇಶ್ ಅವರು ವಾರ್ಷಿಕ ವರದಿ ವಾಚಿಸಿದರು. ವೇದಿಕೆಯಲ್ಲಿ ಕ್ಲಸ್ಟರ್ ಸಂಪನ್ಯೂಲ ವ್ಯಕ್ತಿ ಸುಶಾ ಹಾಜರಿದ್ದರು.

ಕಳೆದ ಮೂರು ವರ್ಷಗಳಲ್ಲಿ ಎಸ್.ಎಸ್.ಎಲ್.ಸಿ. ಯಲ್ಲಿ ಅತಿಹೆಚ್ಚು ಅಂಕ ಗಳಿಸಿದ ಹಾಗೂ ೨೦೨೨-೨೩ ರ ಸಾಲಿನಲ್ಲಿ ಯು.ಕೆ.ಜಿ. ಯಿಂದ ೯ನೇ ತರಗತಿಯವರೆಗೆ ಅತ್ಯುತ್ತಮ ಸಾಧನೆ ತೋರಿದ ಶಾಲೆಯ ವಿದ್ಯಾರ್ಥಿಗಳನ್ನು ಗೌರವಿಸ ಲಾಯಿತು. ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಕಾವೇರಿ ಮುತ್ತಣ್ಣ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಇತ್ತೀಚೆಗೆ ಅಗಲಿದ ಕಲಾವಿದ ಶ್ರೀನಿವಾಸ್ ಅವರಿಗೆ ಮೌನಾಚರಣೆಯ ಮೂಲಕ ಸಂತಾಪ ಸೂಚಿಸಲಾಯಿತು.

ಶಾಲಾ ಆಡಳಿತ ಮಂಡಳಿ ಸದಸ್ಯರಾದ ಸಹನ, ಚಿತ್ರಾ, ಪೂರ್ವ ಪ್ರಾಥಮಿಕ ವಿಭಾಗದ ಕೋ ಆರ್ಡಿನೇಟರ್ ಅಮೃತಾ ಅರ್ಜುನ್, ಪ್ರಾಥಮಿಕ ವಿಭಾಗದ ಕೋ ಆರ್ಡಿನೇಟರ್ ಭಾಗ್ಯ. ಪ್ರೌಢಶಾಲೆ ವಿಭಾಗದ ಕೋ ಆರ್ಡಿನೇಟರ್ ಚೈತ್ರಾ ಸೇರಿದಂತೆ ಶಾಲಾ ಶಿಕ್ಷಕರು, ಬೋಧಕೇತರ ಸಿಬ್ಬಂದಿಗಳು, ಮಕ್ಕಳ ಪೋಷಕರು ಹಾಜರಿದ್ದರು. ಶಾಲಾ ವಾರ್ಷಿಕೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಂದ ಮಾರ್ಷಲ್ ಆರ್ಟ್ಸ್ ಕರಾಟೆ ಪ್ರದರ್ಶನ ಸೇರಿದಂತೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು.