ಮಡಿಕೇರಿ, ಜ. ೧೧: ಸುಂಟಿಕೊಪ್ಪ ಗದ್ದೆಹಳ್ಳದ ಆ್ಯಮಿಟಿ ಯುನೈಟೆಡ್ ಎಫ್‌ಸಿ ವತಿಯಿಂದ ಗದ್ದೆಹಳ್ಳ ಮೈದಾನದಲ್ಲಿ ರಾಜ್ಯಮಟ್ಟದ ಮುಕ್ತ ಹೊನಲು ಬೆಳಕಿನ ೫+೨ ಫುಟ್ಬಾಲ್ ಪಂದ್ಯಾಟ ತಾ.೨೬ರಿಂದ ನಡೆಯಲಿದೆ ಎಂದು ಪಂದ್ಯಾಟದ ಉಸ್ತುವಾರಿ ನೌಫಲ್, ಸದಸ್ಯ ಸತ್ತಾರ್ ಇಚ್ಚಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಗಣರಾಜ್ಯೋತ್ಸವ ಪ್ರಯುಕ್ತ ಆಯೋಜಿಸಲಾಗುತ್ತಿರುವ ಪಂದ್ಯಾಟ ತಾ.೨೬, ೨೭ ಮತ್ತು ೨೮ ರಂದು ನಡೆಯಲಿದೆ. ಈಗಾಗಲೇ ೪೦ ತಂಡಗಳು ನೋಂದಾಯಿಸಲ್ಪಟ್ಟಿದ್ದು, ಪಂದ್ಯಾಟದಲ್ಲಿ ಭಾಗವಹಿಸುವ ತಂಡಗಳು ತಾ.೧೫ರ ಒಳಗಾಗಿ ಹೆಸರು ನೋಂದಾಯಿಸಬಹುದಾಗಿದೆ. ೬ನೇ ವರ್ಷದ ಪಂದ್ಯಾಟ ಇದಾಗಿದ್ದು, ಮೊದಲ ಬಹುಮಾನವಾಗಿ ೬೬,೬೬೬ ರೂ. ನಗದು, ಬೀಟೆ ಮರದ ಆಕರ್ಷಕ ಟ್ರೋಫಿ, ದ್ವಿತೀಯ ಬಹುಮಾನವಾಗಿ ೩೩,೩೩೩ ರೂ. ನಗದು, ಬೀಟೆ ಮರದ ಟ್ರೋಫಿ ನೀಡಲಾಗುತ್ತದೆ. ಇದರೊಂದಿಗೆ ವೈಯಕ್ತಿಕ ಬಹುಮಾನಗಳನ್ನು ನೀಡಲಾಗುತ್ತದೆ. ಪಂದ್ಯಾಟದೊAದಿಗೆ ಕ್ಲಬ್‌ನ ಸದಸ್ಯರಿಂದ ರಕ್ತದಾನ ಶಿಬಿರ ಕೂಡ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ೬೩೬೬೬೮೦೯೩೧, ೯೭೪೧೫೪೫೮೬೬ ದೂರವಾಣಿಯನ್ನು ಸಂಪರ್ಕಿಸ ಬಹುದು ಎಂದು ಅವರು ಮಾಹಿತಿ ಯಿತ್ತರು. ಇದೇ ಸಂದರ್ಭ ಪಂದ್ಯಾಟಕ್ಕೆ ಸಂಬAಧಿಸಿದ ಕರಪತ್ರವನ್ನು ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ ಬಿಡುಗಡೆಗೊಳಿಸಿದರು.

ಗೋಷ್ಠಿಯಲ್ಲಿ ಕ್ಲಬ್ ಸದಸ್ಯರಾದ ಷರೀಫ್, ಸಾಹಿರ್, ಕೂರ್ಗ್ ಬ್ಲಡ್ ಫೌಂಡೇಶನ್‌ನ ಅಬ್ಬಾಸ್ ಉಪಸ್ಥಿತರಿದ್ದರು.