ಚೆಯ್ಯಂಡಾಣೆ, ಜ. ೧೦: ಕೇರಳದ ಪಯ್ಯವೂರ್ನಲ್ಲಿ ವರ್ಷಂಪ್ರತಿ ನಡೆಯಲಿರುವ ಊಟ್ ಮಹೋತ್ಸವದ ಪ್ರಯುಕ್ತ ನಾಡ್ಗೆ ಒಳಪಟ್ಟ ಗ್ರಾಮಸ್ಥರ ವಿಶೇಷ ಸಭೆಯು ಸ್ಥಳೀಯ ಲಕ್ಷಿö್ಮ ಮಹಿಳಾ ಸಮಾಜದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಕ್ಕಮುಖ್ಯಸ್ಥ ಕುಟುಂಬದ ಹಿರಿಯರಾದ ಮುಂಡ್ಯೋಳAಡ ತಮ್ಮಯ್ಯ ಹಾಗೂ ಬೊವ್ವೇರಿಯಂಡ ತಿಮ್ಮಯ್ಯ ನೇತೃತ್ವ ವಹಿಸಿದ್ದರು.
ಕೇರಳದಿಂದ ಸಭೆಗೆ ಆಗಮಿಸಿದ ದೇವಸಂ ಬೋರ್ಡ್ನ ಬಿಜು ಅವರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು. ಸಭೆಯಲ್ಲಿ ಮಾತನಾಡಿದ, ನಾಡ್ಗೆ ಒಳಪಟ್ಟ ಗ್ರಾಮಸ್ಥರಾದ ಐತಿಚಂಡ ಭೀಮಯ್ಯ, ಅರುಣ, ರಾಜೇಶ್ ಅಚ್ಚಯ್ಯ, ಪಟ್ಟಚೆರುವಂಡ ಹರಿಮುತ್ತಪ್ಪ, ಜೀವನ್, ಕುಮ್ಮಂಡ ಕಾವೇರಪ್ಪ, ಪಯ್ಯವೂರಿನಲ್ಲಿ ಇರುವ ಕೊಡಗಿನ ಸ್ಥಾನದಲ್ಲಿ ಬೇರೆಯವರು ಮನೆ ನಿರ್ಮಿಸಿದ್ದು, ಮತ್ತೊಂದೆಡೆ ಮನೆ ಕಟ್ಟಲು ಅಡಿಪಾಯ ಹಾಕಿದ್ದಾರೆ. ನಮ್ಮ ಸ್ಥಾನದಲ್ಲಿ ವಾಹನ ನಿಲುಗಡೆ, ವ್ಯಾಪಾರ ಮಳಿಗೆ ನಿರ್ಮಾಣವಾಗಿದೆ. ನೈವೇದ್ಯ ಕೊಟ್ಟ ಅಕ್ಕಿ ಮಾರಾಟ ಮಾಡಲಾಗುತ್ತಿದೆ ಎಂಬ ಬಗ್ಗೆ ಗಮನ ಸೆಳೆದರು.
ಈ ಸಂದರ್ಭ ದೇವಸಂ ಬೋರ್ಡ್ನ ಬಿಜು ಮಾತನಾಡಿ, ನಾವು ದೇವಸ್ಥಾನದ ಅಧಿಕಾರ ಸ್ವೀಕರಿಸಿ ೪ ತಿಂಗಳು ಮಾತ್ರವಾಗಿದ್ದು, ಇನ್ನು ಮುಂದಕ್ಕೆ ತಮ್ಮ ಅಭಿಪ್ರಾಯ ಪರಿಗಣಿಸದೆ ಯಾವುದೇ ಕಾರ್ಯ ಕೈಗೊಳ್ಳುವುದಿಲ್ಲ ಎಂದರು.
ಕೊಡಗಿನಿAದ ಬರುವ ಯಾತ್ರಾರ್ಥಿಗಳಿಗೆ ಕೊಡಗಿನ ಸ್ಥಾನವಾದ ಗುದ್ದದಲ್ಲಿ ನೆಟ್ ಅಳವಡಿಸಿ ತಂಗಲು ಅವಕಾಶ ಕಲ್ಪಿಸುವ ಉದ್ದೇಶವಿದೆ ಅದಕ್ಕೆ ನಿಮ್ಮ ಸಹಕಾರ ಮುಖ್ಯ ಎಂದರು.
ಕೊಡಗಿನ ನಾಡ್ಗೆ ಒಳಪಟ್ಟ ಪೊನ್ನುಪರಂಬ್ನಲ್ಲಿರುವ ೧ ಎಕರೆಗೂ ಅಧಿಕ ಸ್ಥಳವನ್ನು ಬೇರೆಯವರು ಅತಿಕ್ರಮಿಸಿದ್ದು ಇದರ ಮೊಕದ್ದಮೆ ಕೋರ್ಟ್ನಲ್ಲಿದೆ ಎಂದು ವಿವರಿಸಿದರು.
ಮುಂದಿನ ದಿನಗಳಲ್ಲಿ ಸರಕಾರದ ಅನುದಾನ ಪಡೆದು ಹಾಗೂ ದಾನಿಗಳಿಂದ ಹಣ ಸಂಗ್ರಹಿಸಿ ಕೊಡಗಿನ ಸ್ಥಾನ(ಗುದ್ದ)ದಲ್ಲಿ ಕಟ್ಟಡ ನಿರ್ಮಿಸಿ ಕೊಡಗಿನಿಂದ ಬರುವ ಯಾತ್ರಾರ್ಥಿಗಳಿಗೆ ತಂಗಲು ಅವಕಾಶ ಕಲ್ಪಿಸಲಾಗುವುದು ಎಂದರು.
ಉಳಿದ ಎಲ್ಲಾ ಸಮಸ್ಯೆಗಳನ್ನು ಆದಷ್ಟು ಬೇಗ ಪರಿಹರಿಸಲಾಗುವುದು ಎಂದು ಮಾಹಿತಿ ನೀಡಿದರು.
ನಂತರ ಸಭೆಯಲ್ಲಿದ್ದ ಎಲ್ಲರ ಅಭಿಪ್ರಾಯ ಪಡೆದು ಕೊಡಗಿನ ಸ್ಥಾನ ಗುದ್ದದಲ್ಲಿ ನೆಟ್ ಅಳವಡಿಸುವಂತೆ ಒಪ್ಪಿಗೆ ನೀಡಲಾಯಿತು.
ಟ್ರಸ್ಟಿ ಮುಂಡ್ಯೋಳAಡ ಅಜಿತ್ ಸುಬ್ಬಯ್ಯ ಮಾತನಾಡಿ, ಈ ವರ್ಷದ ಊಟ್ ಹಬ್ಬದ ಮುಂಚಿತವಾಗಿ ಸಭೆ ಕರೆದು ಊಟ್ ಹಬ್ಬವನ್ನು ಯಶಸ್ವಿಗೊಳಿಸಲಾಗುವುದು. ಅಲ್ಲಿ ಬೇಕಾದ ಎಲ್ಲಾ ಸೌಕರ್ಯಗಳಿಗೆ ಕ್ರಮ ಕೈಗೊಳ್ಳಲಾಗುವುದು, ಊಟ್ ಹಬ್ಬ ಕಾರ್ಯಕ್ರಮಕ್ಕೆ ವೀರಾಜಪೇಟೆ ಕ್ಷೇತ್ರದ ಶಾಸಕರನ್ನು ಆಹ್ವಾನಿಸಲು ತೀರ್ಮಾನಿಸಲಾಗುವುದು ಎಂದರು.
ಈ ಸಂದರ್ಭ ದೇವಸಂ ಬೋರ್ಡ್ನ ಪ್ರವೀಣ್ ಕುಮಾರ್ ಪಿ, ಶರತ್ ಶಶಿ, ಟ್ರಸ್ಟಿಗಳಾದ ಉತ್ತಮನ್ ಕೆ.ವಿ, ಜೀವನ್ ಬಿ.ಕೆ. ನಾಡ್ಗೆ ಒಳಪಟ್ಟ ಗ್ರಾಮಸ್ಥರು ಉಪಸ್ಥಿತರಿದ್ದರು. ಕುಮ್ಮಂಡ ಕಾವೇರಪ್ಪ ಪ್ರಾರ್ಥಿಸಿ, ಅಜಿತ್ ಸುಬ್ಬಯ್ಯ ಸ್ವಾಗತಿಸಿ, ವಂದಿಸಿದರು.
ಅಶ್ರಫ್