ಮಡಿಕೇರಿ, ಜ.೧೧: ಭಾರತ ಔಷಧಿ ವ್ಯಾಪಾರಿಗಳ ಸಂಘದ ಸಂಘಟನಾ ಕಾರ್ಯದರ್ಶಿಯಾಗಿ ಆಯ್ಕೆಯಾದ ಮಡಿಕೇರಿಯ ಸಪ್ತಗಿರಿ ಔಷಧಿ ಮಾರಾಟ ಸಂಸ್ಥೆಯ ಉದ್ಯಮಿ ಅಂಬೆಕಲ್ ಜೀವನ್ ಕುಶಾಲಪ್ಪ ಅವರನ್ನು ಕರ್ನಾಟಕ ರಾಜ್ಯ ಔಷಧಿ ವ್ಯಾಪಾರಿಗಳ ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಬೆಂಗಳೂರಿನ ನಾಗರಬಾವಿ ಯಲ್ಲಿರುವ ಕಿಂಗ್ಸ್ ಕ್ಲಬ್‌ನಲ್ಲಿ ಆಯೋಜಿತ ಸಮಾರಂಭದಲ್ಲಿ ಅಂಬೆಕಲ್ ಜೀವನ್ ಕುಶಾಲಪ್ಪ ಅವ ರನ್ನು ರಾಜ್ಯ ಔಷಧಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ರಘುನಾಥ ರೆಡ್ಡಿ, ಅಖಿಲ ಭಾರತ ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ಜಗನ್ನಾಥ್ ಶಿಂಧೆ, ರಾಷ್ಟಿçÃಯ ಕಾರ್ಯದರ್ಶಿ ರಾಜೀವ್ ಸಿಂಘಾಲ್, ದಕ್ಷಿಣ ವಲಯ ಉಪಾಧ್ಯಕ್ಷ ಮೋಹನ್, ಮತ್ತಿತರರು ಗೌರವಿಸಿ ಸನ್ಮಾನಿಸಿದರು. ಇದೇ ಸಂದರ್ಭ ರಾಜ್ಯದ ವಿವಿಧ ಜಿಲ್ಲೆಗಳ ಔಷಧಿ ವ್ಯಾಪಾರಸ್ಥರ ಸಂಘದ ವತಿಯಿಂದಲೂ ಜೀವನ್ ಅವರನ್ನು ಸನ್ಮಾನ ಮಾಡಲಾಯಿತು.

ಜೀವನ್ ಅವರು ರಾಷ್ಟಿçÃಯ ಮಟ್ಟದಲ್ಲಿ ಔಷಧಿ ವ್ಯಾಪಾರಿಗಳ ವಿವಿಧ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವ ಭರವಸೆ ತಮಗಿದ್ದು, ಪಾಂಡಿಚೇರಿ, ಲಕ್ಷದ್ವೀಪದಲ್ಲಿ ಸಂಘಟನೆ ಬಲಗೊಳಿಸುವ ನಿಟ್ಟಿನಲ್ಲಿ ಹೆಚ್ಚಿನ ಮುತುವರ್ಜಿ ವಹಿಸಲು ಜೀವನ್ ಅವರನ್ನು ಅಲ್ಲಿನ ಉಸ್ತುವಾ ರಿಯನ್ನಾಗಿ ನಿಯೋಜಿಸಲಾಗಿದೆ ಎಂದು ರಾಷ್ಟಿçÃಯ ಅಧ್ಯಕ್ಷ ಜಗನ್ನಾಥ್ ಶಿಂಧೆ ಹೇಳಿದರು.

ಈ ಸಂದರ್ಭ ಮಾತನಾಡಿದ ಜೀವನ್ ಕುಶಾಲಪ್ಪ, ಕೊಡಗು ಜಿಲ್ಲೆಯಲ್ಲಿ ಕಳೆದ ವರ್ಷಗಳಿಂದ ಔಷಧಿ ಸಗಟು ವಹಿವಾಟು ನಡೆಸುತ್ತಿರುವ ತನ್ನನ್ನು ರಾಜ್ಯ ಸಂಘದ ಪದಾಧಿಕಾರಿಗಳು ರಾಷ್ಟಿçÃಯ ಸಂಘದ ಸಂಘಟನಾ ಕಾರ್ಯದರ್ಶಿಯಾಗಿ ಆಯ್ಕೆಯಾ ಗಲು ಅವಕಾಶ ನೀಡಿದ್ದು ಸಂತೋಷ ತಂದಿದೆ. ಮುಂದಿನ ದಿನಗಳಲ್ಲಿ ಔಷಧಿ ವ್ಯಾಪಾರಸ್ಥರ ವಿವಿಧ ಸಮಸ್ಯೆಗಳ ಪರಿಹಾರ ಸಂಬAಧಿತ ರಾಷ್ಟçಮಟ್ಟದಲ್ಲಿ ಚರ್ಚಿಸುವುದಾಗಿ ಭರವಸೆ ನೀಡಿದರು. ಸದ್ಯದಲ್ಲಿಯೇ ಮಡಿಕೇರಿಯಲ್ಲಿ ಕೊಡಗು ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘದ ನೂತನ ಕೆಮಿಸ್ಟ್ ಭವನಕ್ಕೆ ಭೂಮಿಪೂಜೆ ನೆರವೇರಿಸು ವುದಾಗಿಯೂ ಸಂಘದ ಜಿಲ್ಲಾ ಧ್ಯಕ್ಷರೂ ಆಗಿರುವ ಜೀವನ್ ಭರವಸೆ ನೀಡಿದರು.