ಕಣಿವೆ, ಜ. ೧೦: ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಕುಶಾಲನಗರ ವ್ಯಾಪ್ತಿಯ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮವನ್ನು ಮಂಗ ಳವಾರ ಹಮ್ಮಿಕೊಳ್ಳಲಾಗಿತ್ತು.

ತಾಯಿಯಿಂದ ಮಗು ವಿಗೆ ಸಿಫಿಲಿಸ್ ಹಾಗೂ ಹೆಪಟೈಟಿಸ್ ಹರಡುವಿಕೆ ನಿರ್ಮೂಲನಾ ಆಂದೋ ಲನದ ಅಂಗವಾಗಿ ಹಮ್ಮಿ ಕೊಂಡಿದ್ದ ಕಾರ್ಯಕ್ರಮ ದಲ್ಲಿ ೩೦ಕ್ಕೂ ಹೆಚ್ಚು ಗರ್ಭಿಣಿಯರು ಪಾಲ್ಗೊಂಡಿದ್ದರು.

ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಮಧುಸೂದನ್ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಹಿಳೆಯರಿಗೆ ಆರೋಗ್ಯದ ಕುರಿತು ಮಾಹಿತಿ ನೀಡಿದರು.

ಆಸ್ಪತ್ರೆಯ ಪ್ರಸೂತಿ ಹಾಗೂ ಹೆರಿಗೆ ತಜ್ಞರಾದ ಡಾ. ಪ್ರತಿಭಾ ಅವರು, ಗರ್ಭಿಣಿಯರ ಆರೋಗ್ಯ ಪದ್ಧತಿ, ಕಾಲಾನುಕ್ರಮವಾಗಿ ತಪಾಸಣೆ ಮಾಡಿಸಿಕೊಳ್ಳುವ ಬಗ್ಗೆ, ರಕ್ತ ಪರೀಕ್ಷೆ, ಗರ್ಭನಿರೋಧಕಗಳ ಬಳಕೆ ಸೇರಿದಂತೆ ಸಮಗ್ರ ಆರೋಗ್ಯ ನಿರ್ವಹಣೆಯ ಕುರಿತಾಗಿ ಮಾಹಿತಿ ನೀಡಿದರು.

ತಾಲೂಕು ಆರೋಗ್ಯ ಸುರಕ್ಷಾ ಅಧಿಕಾರಿ ಕೆ.ವಿ. ಅಶ್ವಿನಿ, ವೈದ್ಯಾಧಿಕಾರಿ ಡಾ. ಪ್ರಾಣೇಶ್, ಆಸ್ಪತ್ರೆಯ ಕಚೇರಿ ಅಧೀಕ್ಷಕಿ ಅನಿತಾ, ಹಿರಿಯ ಶುಶ್ರೂಷಕಿ ಮಂಜುಳಾ, ಆಪ್ತಸಮಾಲೋಚಕಿ ಮುತ್ತಮ್ಮ, ಶ್ರೀಲತಾ, ದಿವಾಕರ್ ಇದ್ದರು.