ಸೋಮವಾರಪೇಟೆ, ಜ. ೧೦: ಸಮೀಪದ ಚೌಡ್ಲು ಸಾಂದೀಪನಿ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ ಸಮಾರಂಭ ‘ಸಾಂದೀಪನಿ ಉತ್ಸವ’ ತಾ. ೧೨ರಂದು ಬೆಳಿಗ್ಗೆ ೧೦ ಗಂಟೆಗೆ ಶಾಲಾ ಮೈದಾನದಲ್ಲಿ ನಡೆಯಲಿದೆ ಎಂದು ಮುಖ್ಯ ಶಿಕ್ಷಕ ರಜಿತ್ ಗಾಂಧಿ ತಿಳಿಸಿದ್ದಾರೆ.

ಕಾರ್ಯಕ್ರಮವನ್ನು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ ಮತ್ತು ಸಂಸದ ಪ್ರತಾಪ್ ಸಿಂಹ ಉದ್ಘಾಟಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಉಪನಿರ್ದೇಶಕರಾದ ಚಂದ್ರಕಾAತ್ ಎಸ್., ಬಿ.ಇ.ಓ ಎಸ್ ಭಾಗ್ಯಮ್ಮ, ಚೌಡ್ಲು ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ಗೀತಾ ಸಿ.ಎಸ್. ಪಾಲ್ಗೊಳ್ಳಲಿದ್ದಾರೆ.