ಮಡಿಕೇರಿ, ಜ. ೧೦: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಹಿರಿಯ ಸಾಹಿತಿ ನಾ. ಡಿಸೋಜಾ ಮಕ್ಕಳ ಸಾಹಿತ್ಯ ಪುರಸ್ಕಾರ ದತ್ತಿ ಕಾರ್ಯಕ್ರಮದಂತೆ ಜಿಲ್ಲೆಯ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಸಣ್ಣ ಕಥೆ ಬರೆಯುವ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ತಾ. ೨೯ ರಂದು ಬೆಳಿಗ್ಗೆ ೧೦.೩೦ ಗಂಟೆಗೆ ಮಡಿಕೇರಿಯ ಸಂತ ಜೋಸೆಫರ ಶಾಲೆಯಲ್ಲಿ ಕಥೆ ಬರೆಯುವ ಸ್ಪರ್ಧೆ ನಡೆಯಲಿದೆ ಎಂದು ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ರೇವತಿ ರಮೇಶ್ ತಿಳಿಸಿದ್ದಾರೆ. ಪ್ರತಿ ಕಾಲೇಜಿನಿಂದ ೫ ವಿದ್ಯಾರ್ಥಿ ಗಳಿಗೆ ಸ್ಪರ್ಧೆಯಲ್ಲಿ ಭಾಗವ ಹಿಸಲು ಅವಕಾಶ ನೀಡಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವ ಪದವಿ ಪೂರ್ವ ಶಿಕ್ಷಣದ ವಿದ್ಯಾರ್ಥಿ ಗಳು ತಮ್ಮ ಹೆಸರನ್ನು ಕಾಲೇಜಿನ ಮೂಲಕ ಈ ಕೆಳಕಂಡ ವಿಳಾಸಕ್ಕೆ ತಾ. ೧೫ ರೊಳಗೆ ಕಳುಹಿಸಿಕೊಡಬೇಕು.
ಎಂ.ಪಿ. ಕೇಶವಕಾಮತ್, ಅಧ್ಯಕ್ಷರು, ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಎಸ್ಜೆಎಸ್ಆರ್ವೈ ಕಟ್ಟಡ, ಅಂಬೇಡ್ಕರ್ ಭವನದ ಬಳಿ, ಕಾರ್ಯಪ್ಪ ವೃತ್ತ, ಮಡಿಕೇರಿ-೫೭೧೨೦೧.
ಪ್ರೌಢಶಾಲಾ ವಿದ್ಯಾರ್ಥಿಗಳಿಗೆ
ಗೌರಮ್ಮ ದತ್ತಿ ಸಣ್ಣ ಕಥೆ ಬರೆಯುವ ಸ್ಪರ್ಧೆಗೆ ಜಿಲ್ಲೆಯ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಕಥೆ ಬರೆಯುವ ಸ್ಪರ್ಧೆಯನ್ನು ತಾ. ೨೨ ರಂದು ಬೆಳಿಗ್ಗೆ ೧೦.೩೦ ಗಂಟೆಗೆ ಮಡಿಕೇರಿಯ ಕಾರ್ಯಪ್ಪ ವೃತ್ತದ ಬಳಿ ಇರುವ ಬ್ಲಾಸಂ ಶಾಲೆಯಲ್ಲಿ ನಡೆಸಲಾಗುವುದು ಎಂದು ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಎಸ್.ಐ. ಮುನಿರ್ ಅಹಮ್ಮದ್ ತಿಳಿಸಿದ್ದಾರೆ. ಪ್ರತೀ ಪ್ರೌಢಶಾಲೆಯಿಂದ ೫ ವಿದ್ಯಾರ್ಥಿಗಳಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ನೀಡ ಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವ ವಿದ್ಯಾರ್ಥಿಗಳು ತಮ್ಮ ಹೆಸರನ್ನು ಶಾಲೆಗಳ ಮೂಲಕ ಈ ಕೆಳಗಿನ ವಿಳಾಸಕ್ಕೆ ತಾ. ೧೫ ರೊಳಗೆ ತಲುಪಿಸಬೇಕು.
ಎಂ.ಪಿ. ಕೇಶವಕಾಮತ್, ಅಧ್ಯಕ್ಷರು, ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಎಸ್ಜೆಎಸ್ ಆರ್ವೈ ಕಟ್ಟಡ, ಅಂಬೇಡ್ಕರ್ ಭವನದ ಬಳಿ, ಸುದರ್ಶನದ ವೃತ್ತ, ಮಡಿಕೇರಿ-೫೭೧೨೦೧. ಹೆಚ್ಚಿನ ವಿವರಗಳಿಗೆ, ಮೊ. ೯೮೮೬೧೮೧೬೧೩ ಮತ್ತು ೯೬೬೩೨೫೬೮೨೯ ದೂರವಾಣಿ ಸಂಖ್ಯೆ ಸಂಪರ್ಕಿಸಬಹುದು.