ಮಡಿಕೇರಿ, ಜ. ೧೦: ಕರ್ನಾಟಕ ರಾಜ್ಯದಲ್ಲಿ ಕಾರ್ಮಿಕರ ಕಲ್ಯಾಣವನ್ನು ಸಂವರ್ಧನಗೊಳಿಸುವುದಕ್ಕಾಗಿ ಆರ್ಥಿಕವಾಗಿ ಬಲಿಷ್ಠಗೊಳಿಸಲು ಹಾಗೂ ಕಲ್ಯಾಣ ಯೋಜನೆಯ ಕಾರ್ಯಕ್ರಮ ಹಮ್ಮಿಕೊಳ್ಳುವುದಕ್ಕಾಗಿ ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯು ೧೯೬೯ ರಿಂದ ಅಸ್ತಿತ್ವಕ್ಕೆ ಬಂದಿದೆ.

ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ ಕಾಯ್ದೆ, ೧೯೬೫ ರ ಪ್ರಕರಣ ೭ ಮತ್ತು ೭ಎ ಹಾಗೂ ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ ಅಧಿನಿಯಮ, ೧೯೬೮ ರ ನಿಯಮ-೩ ರ ವ್ಯಾಪ್ತಿಯಲ್ಲಿ ಬರುವ ಎಲ್ಲಾ ನೋಂದಾಯಿತ ಕಾರ್ಖಾನೆಗಳು, ಪ್ಲಾಂಟೇಷನ್‌ಗಳು, ಕಾರ್ಯಾಗಾರಗಳು, ಮೋಟಾರು ದೊಡ್ಡ ಬಸ್ ಬಾಡಿಗೆ ಸೇವೆ, ವಾಹನ ಸಾರಿಗೆ ಸಂಸ್ಥೆಗಳು ಹಾಗೂ ೫೦ ಮತ್ತು ಅದಕ್ಕಿಂತ ಹೆಚ್ಚಿನ ಸಿಬ್ಬಂದಿ ಮತ್ತು ಕಾರ್ಮಿಕರನ್ನು ನೇಮಿಸಿಕೊಂಡು ಕಾರ್ಯನಿರ್ವಹಿಸುತ್ತಿರುವ ವಾಣಿಜ್ಯ ಸಂಸ್ಥೆಗಳು, ಚಾರಿಟೇಬಲ್ ಸಂಸ್ಥೆಗಳು ಮತ್ತು ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ-೧೯೬೦ ರ ಅಡಿಯಲ್ಲಿ ನೋಂದಣಿಯಾದ ಎಲ್ಲಾ ಸಂಘ ಸಂಸ್ಥೆಗಳ ಮಾಲೀಕರು/ಆಡಳಿತ ವರ್ಗದವರು ನೇಮಿಸಿಕೊಂಡು, ವೇತನ ಪಡೆಯುತ್ತಿರುವ ಪ್ರತಿ ಸಿಬ್ಬಂದಿ ಮತ್ತು ಕಾರ್ಮಿಕರ ವಂತಿಗೆಯನ್ನು ಪ್ರತಿ ಕಾರ್ಮಿಕನ ಡಿಸೆಂಬರ್ ಮಾಹೆಯ ವೇತನದಿಂದ ರೂ.೨೦ ನ್ನು ಕಡಿತಗೊಳಿಸಿ ಅದಕ್ಕೆ ಪ್ರತಿಯಾಗಿ ಮಾಲೀಕರ ರೂ.೪೦ ನ್ನು ಸೇರಿಸಿ ಒಬ್ಬ ಕಾರ್ಮಿಕನ ಪರವಾಗಿ ಒಟ್ಟು ರೂ.೬೦ ನ್ನು ಪ್ರತಿ ವರ್ಷ ತಾ. ೧೫ನೇ ದಿನಾಂಕದೊಳಗೆ ಆನ್‌ಲೈನ್ ಮೂಲಕ ಪಾವತಿಸುವುದು ಕಡ್ಡಾಯವಾಗಿದೆ.

ಕಾರ್ಖಾನೆಗಳು/ ಕಾರ್ಯ ಸಂಸ್ಥೆಗಳ ಆಡಳಿತ ವರ್ಗದವರಿಗೆ ಕಾರ್ಮಿಕ ಕಲ್ಯಾಣ ಮಂಡಳಿಯ ವೆಬ್‌ಸೈಟ್ hಣಣಠಿs:/ಞಟತಿbಚಿಠಿಠಿs. ಞಚಿಡಿಟಿಚಿಣಚಿಞಚಿ.gov.iಟಿ ಅಲ್ಲಿ ನೋಂದಣಿ ಮಾಡಿಕೊಂಡು ಕಡ್ಡಾಯವಾಗಿ ವಂತಿಗೆಯನ್ನು ಆನ್‌ಲೈನ್ ಮುಖಾಂತರ ಪಾವತಿಸಲು ಹಾಗೂ ಇನ್ನು ಮುಂದೆ ಯಾವುದೇ ಚೆಕ್/ಡಿಡಿಗಳನ್ನು ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ಸ್ವೀಕರಿಸಲಾಗುವುದಿಲ್ಲ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಹರ್ಷವರ್ಧನ ಅವರು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗೆ ಮಂಡಳಿಯ ದೂರವಾಣಿ ಸಂಖ್ಯೆ: ೮೨೭೭೨೯೧೧೭೫, ೮೨೭೭೧೨೨೫೨೫, ೯೧೪೧೬೦೨೫೬೨ ಹಾಗೂ ೦೮೦-೨೩೫೭೦೨೬೬ ಮೂಲಕ ಸಂಪರ್ಕಿಸಬಹುದು ಎಂದು ಕೊಡಗು ಉಪ ವಿಭಾಗದ ಕಾರ್ಮಿಕ ಅಧಿಕಾರಿ ಎಸ್.ಎಲ್. ಹರ್ಷವರ್ಧನ್ ತಿಳಿಸಿದ್ದಾರೆ.