ಸೋಮವಾರಪೇಟೆ, ಜ. ೧೦: ಕೊಡಗು ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಹಾಗೂ ಇಲ್ಲಿನ ಜಯವೀರಮಾತೆ ದೇವಾಲಯದ ಆಶ್ರಯದಲ್ಲಿ ತಾ. ೧೩ ರಿಂದ ೧೫ ರವರೆಗೆ ಸಮೀಪದ ಬಳಗುಂದ (ಬಜೆಗುಂಡಿ) ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಜಿಲ್ಲಾಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಮತ್ತು ಕ್ರೀಡಾಕೂಟ ಆಯೋಜಿಸಲಾಗಿದೆ ಎಂದು ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಎಸ್.ಎಂ. ಡಿಸಿಲ್ವಾ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಲವಷ್ಟು ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಚಟುವಟಿಕೆಯಲ್ಲಿರುವ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ನಿಂದ ಕೋವಿಡ್ ಸಂದರ್ಭ ಸಾವಿರಾರು ಕುಟುಂಬಗಳಿಗೆ ನೆರವು ಒದಗಿಸಲಾಗಿದೆ. ಮಡಿಕೇರಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ಗೆ ಒಳಗಾದ ಕುಟುಂಬಕ್ಕೆ ಸಹಾಯಹಸ್ತ ನೀಡಲಾಗಿದೆ. ಇದರೊಂದಿಗೆ ಸಮುದಾಯದವರನ್ನು ಒಂದೆಡೆ ಬೆಸೆಯುವಂತೆ ಮಾಡುವ ಉದ್ದೇಶದಿಂದ ಕಳೆದ ೧೩ ವರ್ಷಗಳಿಂದ ಕ್ರೀಡಾಕೂಟ ಆಯೋಜಿಸಿಕೊಂಡು ಬರಲಾಗುತ್ತಿದೆ ಎಂದರು.
ತಾ. ೧೩ ರಿಂದ ೧೫ ರವರೆಗೆ ಬಜೆಗುಂಡಿ ಶಾಲಾ ಮೈದಾನದಲ್ಲಿ ಕ್ರಿಕೆಟ್, ಹಗ್ಗಜಗ್ಗಾಟ ಹಾಗೂ ಮಹಿಳೆಯರಿಗೆ ಥ್ರೋಬಾಲ್ ಪಂದ್ಯಾವಳಿ ನಡೆಯಲಿದೆ. ಕ್ರಿಕೆಟ್ನಲ್ಲಿ ಪ್ರಥಮ ಸ್ಥಾನ ಪಡೆಯುವ ತಂಡಕ್ಕೆ ೫೦ ಸಾವಿರ ನಗದು, ದ್ವಿತೀಯ ಸ್ಥಾನ ಗಳಿಸುವ ತಂಡಕ್ಕೆ ೩೦ ಸಾವಿರ ನಗದು ಬಹುಮಾನದೊಂದಿಗೆ ಆಕರ್ಷಕ ಟ್ರೋಫಿ ನೀಡಲಾಗುವುದು. ಥ್ರೋಬಾಲ್ ಮತ್ತು ಹಗ್ಗಜಗ್ಗಾಟದಲ್ಲಿ ಕ್ರಮವಾಗಿ ೧೦ ಹಾಗೂ ೫ ಸಾವಿರ ನಗದು ಮತ್ತು ಟ್ರೋಫಿ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ತಾ. ೧೩ ರಂದು ಬೆಳಿಗ್ಗೆ ೮.೩೦ಕ್ಕೆ ಓಎಲ್ವಿ ದೇವಾಲಯದ ಸಹಾಯಕ ಗುರು ಜಾನ್ ಫೆರ್ನಾಂಡೀಸ್ ಅವರು ಧ್ವಜಾರೋಹಣ ಮಾಡುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಲಿದ್ದಾರೆ. ಮೈಸೂರು ಧರ್ಮಕ್ಷೇತ್ರದ ಡಾ. ಬರ್ನಾಡ್ ಮೊರಾಸ್, ಓಎಲ್ವಿ ಚರ್ಚ್ನ ಎಂ. ರಾಯಪ್ಪ ಭಾಗವಹಿಸಲಿದ್ದಾರೆ. ಶಾಸಕ ಮಂಥರ್ ಗೌಡ ಅವರು ಕ್ರೀಡಾಕೂಟ ಉದ್ಘಾಟಿಸಲಿದ್ದಾರೆ ಎಂದರು.
ಮುಖ್ಯ ಅತಿಥಿಯಾಗಿ ಮೈಸೂರು ಗೋಪಾಲಗೌಡ ಆಸ್ಪತ್ರೆಯ ಶುಶ್ರೂಷ್ ಗೌಡ, ದಕ್ಷಿಣ ಕನ್ನಡ ಮತ್ತು ಕರಾವಳಿ ಜಿಲ್ಲಾ ಸಂಘಗಳ ಒಕ್ಕೂಟದ ಅಧ್ಯಕ್ಷ ಗ್ರೇಷಿಯಸ್ ರೋಡ್ರಿಗಸ್, ಮಡಿಕೇರಿ ವಲಯದ ಗುರು ದೀಪಕ್, ಎಂ.ಡಿ.ಇ.ಎಸ್.ನ ನಿರ್ದೇಶಕ ಅವಿನಾಶ್, ಬೇಳೂರು ಗ್ರಾ.ಪಂ. ಅಧ್ಯಕ್ಷೆ ಪಿ.ಎಂ. ಪಾರ್ವತಿ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ.
ತಾ. ೧೫ ರಂದು ಸಂಜೆ ೪ ಗಂಟೆಗೆ ಸಮಾರೋಪ ಸಮಾರಂಭ ಮತ್ತು ಬಹುಮಾನ ವಿತರಣೆ ನಡೆಯಲಿದ್ದು, ವೀರಾಜಪೇಟೆ ವಲಯದ ಗುರುಗಳಾದ ಡಾ. ದಯಾನಂದ ಪ್ರಭು, ಸುಂಟಿಕೊಪ್ಪದ ಅರುಳ್ ಸೆಲ್ವಕುಮಾರ್, ಮಡಿಕೇರಿಯ ಸಿರಿಲ್ ಮೊರಾಸ್, ಅಸೋಸಿಯೇಷನ್ನ ಸಂಸ್ಥಾಪಕ ಅಧ್ಯಕ್ಷ ವಿ.ಎ. ಲಾರೆನ್ಸ್, ಗುತ್ತಿಗೆದಾರ ಕೆ.ಟಿ. ಸತೀಶ್ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಅಥ್ಲೆಟಿಕ್ ತರಬೇತುದಾರ ಅಂತೋಣಿ ಡಿಸೋಜ, ನಗರೂರು ನಿವಾಸಿ ಅಲೆಕ್ಸ್ ಅವರ ಪುತ್ರ, ಅಂರ್ರಾಷ್ಟಿçÃಯ ಒಳಾಂಗಣ ಕ್ರಿಕೆಟ್ ಆಟಗಾರ ಆಶಿಸ್ ಕ್ರಿಸ್ಟಿ, ಗ್ಲಾಡಿಸ್ ಅವರ ಪುತ್ರಿ, ಸಂಶೋಧಕಿ ಗ್ಲಿನಿಟಾ ಬ್ರಿಜಿತ್ ಡಿಸೋಜ ಅವರುಗಳನ್ನು ಸನ್ಮಾನಿಸಲಾಗುವುದು ಎಂದು ಮಾಹಿತಿ ನೀಡಿದರು.
ಗೋಷ್ಠಿಯಲ್ಲಿ ಅಸೋಸಿಯೇಷನ್ ಉಪಾಧ್ಯಕ್ಷ ಜೋಕಿಂ ವಾಸ್, ನಿರ್ದೇಶಕ ವಿನ್ಸೆಂಟ್ ಪಿಂಟೋ, ಕ್ರೀಡಾ ಕಾರ್ಯದರ್ಶಿ ಅಂತೋಣಿ ಡಿಸೋಜ, ಸಂಸ್ಥಾಪಕ ಅಧ್ಯಕ್ಷ ವಿ.ಎ. ಲಾರೆನ್ಸ್ ಉಪಸ್ಥಿತರಿದ್ದರು.