ಕೂಡಿಗೆ, ಜ. ೧೦: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಂಡೆಬೆಟ್ಟದ ಹಾಡಿಯಲ್ಲಿ ಕೂಡಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಆರೋಗ್ಯ ತಪಾಸಣಾ ಶಿಬಿರವು ಹಾಡಿಯಲ್ಲಿ ನಡೆಸಲಾಯಿತು.

ಶಿಬಿರದಲ್ಲಿ ಹಾಡಿಯಲ್ಲಿನ ಗರ್ಭಿಣಿಯರ ತಪಾಸಣೆ ಮತ್ತು ಹದಿಹರೆಯದ ಯುವತಿಯರು ತಪಾಸಣೆ, ೩೦ ವರ್ಷ ಮೇಲ್ಪಟ್ಟ ವರ ಅರೋಗ್ಯ ತಪಾಸಣೆ ಮತ್ತು ಕ್ಷಯರೋಗ, ಅಸಾಂಕ್ರಾಮಿಕ ರೋಗ ಸೇರಿದಂತೆ ವಿವಿಧ ತಪಾಸಣೆ ಮೂಲಕ ೪೦ ಜನರ ತಪಾಸಣೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಕೂಡಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ದಯಾನಂದ, ಆರೋಗ್ಯ ನಿರೀಕ್ಷಣಾಧಿಕಾರಿ ಚಂದ್ರೇಶ್, ಮುಖೇಶ್, ಪ್ರಾಥಮಿಕ ಸುರಕ್ಷತಾಧಿಕಾರಿ ಸಕಿನಾ, ಆರೋಗ್ಯ ಅಧಿಕಾರಿಗಳಾದ ದೀಪಾ, ಮಮತಾ, ಆಶಾ ಕಾರ್ಯಕರ್ತರಾದ ಸುಲೇಖ, ಸುಮಿತ್ರ ಹಾಜರಿದ್ದು ಆರೋಗ್ಯ ಇಲಾಖೆಯ ಸಮಗ್ರವಾದ ಮಾಹಿತಿಯನ್ನು ಹಾಡಿಯ ಗ್ರಾಮಸ್ಥರಿಗೆ ತಿಳಿಸುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ಮನವಿ ಮಾಡಿದರು.