ಮಡಿಕೇರಿ, ಜ. ೧೦: ರೋಟರಿ ರಸ್ತೆ ಸುರಕ್ಷತಾ ಅಭಿಯಾನದಡಿಯಲ್ಲಿ ಮಡಿಕೇರಿ ರೋಟರಿ ವುಡ್ಸ್ ವತಿಯಿಂದ ನಗರದ ಫೀ.ಮಾ. ಕಾರ್ಯಪ್ಪ ವೃತ್ತದಲ್ಲಿ ಎರಡು ಸೂಚನಾ ಫಲಕಗಳನ್ನು ಅಳವಡಿಸಲಾಯಿತು. ಮೈಸೂರು ಕಡೆಯಿಂದ ಮಡಿಕೇರಿ ನಗರ ಪ್ರವೇಶಿಸುವ ಮತ್ತು ಮಡಿಕೇರಿ ನಗರದಿಂದ ಸಿದ್ದಾಪುರ ಕಡೆಗೆ ಪ್ರಯಾಣಿಸುವವರ ಅನುಕೂಲಕ್ಕಾಗಿ ಫಲಕಗಳನ್ನು ಹಾಕಲಾಗಿದೆ. ಮಡಿಕೇರಿ ನಗರದ ಸಂಚಾರಿ ಪೊಲೀಸ್ ಠಾಣಾ ಎಎಸ್ಐ ನಂದ ಹಾಗೂ ರೋಟರಿ ವುಡ್ಸ್ನ ಅಧ್ಯಕ್ಷ ವಸಂತ್ ಕುಮಾರ್ ಜಂಟಿಯಾಗಿ ಫಲಕಗಳನ್ನು ಉದ್ಘಾಟಿಸಿದರು. ರೋಟರಿ ವಲಯ ಸೇನಾನಿ ಘಟಕದ ಸಂಪತ್ ಕುಮಾರ್, ರವಿ ಕುಮಾರ್, ರಾಜೇಶ್ ಚೌಧರಿ, ಭಗತ್ ರಾಜ್, ಕಶ್ಯಪ್ ಮತ್ತಿತರರು ಹಾಜರಿದ್ದರು.