ಹೀಗೊಂದು ಹೆಸರಿನ ಆಮಂತ್ರಣ ಪತ್ರಕ್ಕೆ ಈಗ ವಿಶ್ವದೆಲ್ಲೆಡೆಯಿಂದ ವಿಪರೀತ ಬೇಡಿಕೆ. ಇದು ಅಂತಿAಥ ಆಮಂತ್ರಣ... ನಿಮಂತ್ರಣ ಅಲ್ಲ. ಇದು ಪ್ರಭು ಶ್ರೀರಾಮನ ಪಟ್ಟಾಭಿಷೇಕ ಸಮಾರಂಭಕ್ಕೆ ಆಹ್ವಾನ.. ಲಕ್ಷ ರೂಪಾಯಿ ಕೊಟ್ಟರೂ ಈ ಆಮಂತ್ರಣ ಪತ್ರ ದೊರಕದಂಥ ಸ್ಥಿತಿಯಿದೆ. ಇದೊಂದು ಆಮಂತ್ರಣ ದೊರಕಿಲ್ಲ ಎಂದು ದೇಶದಲ್ಲಿನ ಅನೇಕ ಗಣ್ಯರು ಬೇಸರ ಪಟ್ಟುಕೊಂಡಿದ್ದರೆ, ಈ ನಿಮಂತ್ರಣ ಬಂದಿಲ್ಲ ಎಂದು ರಾಜಕೀಯವಾಗಿಯೂ ವಿವಾದ ಪ್ರಾರಂಭವಾಗಿದೆ. ವ್ಯಕ್ತಿಯ ವರ್ಚಸ್ಸು ಗಮನಿಸಿ ಅಳೆದೂ ತೂಗಿ ಎಂಬAತೆ ಶ್ರೀರಾಮತೀರ್ಥ ಕ್ಷೇತ್ರ ಟ್ರಸ್ಟ್ ಈ ಆಹ್ವಾನವನ್ನು ಜಗತ್ತಿನಾದ್ಯಂತಲಿನ ಪ್ರಮುಖರಿಗೆ ನೀಡುತ್ತಿದೆ.
ಯಾವ ಕಾರ್ಯಕ್ರಮದ ಆಮಂತ್ರಣ ದೊರಕದೇ ಇದ್ದರೂ ಬೇಸರವಿಲ್ಲ. ಇದೊಂದು ಆಹ್ವಾನ ಕಳುಹಿಸಿಕೊಡು.. ಶ್ರೀರಾಮಚಂದ್ರನೇ ..ಎಂದು ದೊರೆಗೇ ಮೊರೆ ಇಡುವಂಥ ಸ್ಥಿತಿ ಗಣ್ಯಾತಿಗಣ್ಯರದ್ದಾಗಿದೆ. ಇದೊಂದು ಆಹ್ವಾನ ಪತ್ರ ಹಿಡಿದು ಜನವರಿ ೨೨ ರಂದು ಅಯೋಧ್ಯೆ ನಗರಿಗೆ.. ಶ್ರೀರಾಮನ ಪಟ್ಟಾಭಿಷೇಕ ಸಮಾರಂಭಕ್ಕೆ ತೆರಳಲು ಸಾಧ್ಯವಿದೆ.
ಇಷ್ಟಕ್ಕೂ ೨೨ ರ ಸೋಮವಾರ ಹೇಗಿರಲಿದೆ ಕಾರ್ಯಕ್ರಮ?
ಜನವರಿ ೨೨ ರಂದು ಮಧ್ಯಾಹ್ನ ೧೧.೩೦ ರಿಂದ ೧೨.೨೦ ಗಂಟೆಯವರೆಗೆ ಶ್ರೀರಾಮನ ಮೂರ್ತಿಯ ಪ್ರಾಣ ಪ್ರತಿಷ್ಠೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ ಬಳಿಕ ಪ್ರಭು ರಾಮನಿಗೆ ಮೊಟ್ಟ ಮೊದಲ ಮಹಾ ಆರತಿಯನ್ನೂ ಮೋದಿಯವರೇ ನೆರವೇರಿಸಲಿದ್ದಾರೆ.
ಉತ್ತರ ಭಾರತದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ರಾಜ್ಯಪಾಲರಾದ ಆನಂದಿಬೆನ್, ಆರ್ಎಸ್ಎಸ್ ಸರಸಂಘಚಾಲಕ್ ಡಾ. ಮೋಹನ್ ಭಾಗ್ವತ್, ಪ್ರಧಾನ ಅರ್ಚಕ ಸತ್ಯೇಂದ್ರದಾಸ್ ಇವರು ಪ್ರಧಾನಿ ಜತೆಗೆ ಇರುತ್ತಾರೆ. ದೇಶವ್ಯಾಪಿಯಿಂದ ಆಮಂತ್ರಿತರಿರುವ ನೂರಾರು ಸಾಧುಸಂತರಿAದ ಮಂತ್ರಘೋಷಗಳು ನಡೆಯಲಿವೆ.
ಲಕ್ಷಾಂತರ ಭಕ್ತರಿಗೆ ಅಯೋಧ್ಯೆಯ ವಿವಿಧೆಡೆ ಶ್ರೀರಾಮ ಪಟ್ಟಾಭಿಷೇಕವನ್ನು ಕಣ್ತುಂಬಿಕೊಳ್ಳಲು ಬೃಹತ್ ಪರದೆಯಲ್ಲಿನ ವೀಡಿಯೋ ಮೂಲಕ ಅವಕಾಶ ಮಾಡಲಾಗಿದೆ.
ಇದಕ್ಕೂ ಮುನ್ನ ಜ. ೧೬ ರಿಂದಲೇ ರಾಮ ಪಟ್ಟಾಭಿಷೇಕದ ವಿಧಿಗಳು ಪ್ರಾರಂಭವಾಗಲಿದೆ. ಕಾಶಿಯ ವೈದಿಕ ಲಕ್ಷೀಕಾಂತ್ ದೀಕ್ಷಿತ್ ನೇತೃತ್ವದಲ್ಲಿ ಗಣಪತಿ, ಅಂಬಿಕಾ ಪೂಜೆ, ವಾಸ್ತು ಪೂಜೆ ಪ್ರಾರಂಭವಾಗಲಿದೆ. ಜ.೧೭ ರಂದು ರಾಮ ಪ್ರತಿಮೆಯ ಅಯೋಧ್ಯೆ ನಗರ ಪ್ರದಕ್ಷಿಣೆ ನಡೆಯಲಿದೆ. ಮೂರ್ತಿಗೆ ಪವಿತ್ರಾಭಿಷೇಕದ ಬಳಿಕ ಜ.೨೧ ರಂದು ಶಯನಾಸನ ನೆರವೇರಲಿದ್ದು, ಸರಯೂ ನದಿ ನೀರಿನಿಂದ ಗರ್ಭಗೃಹ ಸ್ವಚ್ಛತಾ ಕಾರ್ಯವೂ ನಡೆಯಲಿದೆ. ಜ.೨೨ ರಂದು ಮುಖ್ಯದಿನ ಮುಂಜಾನೆಯಿAದಲೇ ವಿವಿಧ ಪೂಜೆ, ಹೋಮ, ಯಾಗಗಳು ಮಂದಿರದಲ್ಲಿ ನಡೆಯಲಿದೆ. ಷೋಡಪೋಚಾರ ಪೂಜೆ ಬಳಿಕ ಮೂರ್ತಿ ಮೇಲೆ ಅಕ್ಷತೆ ಹಾಕಿ ಮೊದಲ ಮಹಾ ಆರತಿ ನಡೆಯಲಿದೆ. ಬಳಿಕ ಭಕ್ತಾದಿಗಳಿಗೆ ಪ್ರಭುವಿನ ಮಂದಿರ ವೀಕ್ಷಣೆಗೆ ಮುಕ್ತವಾಗಲಿದೆ. ಜನವರಿ ೨೨ ರಂದು ಅಯೋಧ್ಯೆಯಲ್ಲಿ ರಾಮಚಂದ್ರನ ಪ್ರಾಣ ಪ್ರತಿಷ್ಠೆಯು ಮಧ್ಯಾಹ್ನ ೧೧.೩೦ ರಿಂದ ೧೨.೨೦ ಗಂಟೆಯವರೆಗೆ ನೆರವೇರಿದ ಬಳಿಕ, ಶ್ರೀರಾಮಮಂದಿರ ಲೋಕಾರ್ಪಣೆಯಾಗುತ್ತದೆ. ಅಂತೆಯೇ ಮಧ್ಯಾಹ್ನ ೧೨.೩೦ ಗಂಟೆಗೆ ದೇವಾಲಯದ ಮುಖ್ಯ ಮೆಟ್ಟಿಲುಗಳಲ್ಲಿ ಅಳವಡಿತ ವೇದಿಕೆಯಲ್ಲಿ ಪ್ರಧಾನಿ ಮೋದಿಯವರು ರಾಷ್ಟçವನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಜನವರಿ ೨೨ ರಂದು ಪ್ರಮುಖ ದಿನದಂದು ಅಂದಾಜು ೧ ಲಕ್ಷ ಜನ ಪುಟ್ಟ ಪಟ್ಟಣ ಅಯೋಧ್ಯೆಯಲ್ಲಿ ಸಮಾವೇಶಗೊಳ್ಳಲಿದ್ದಾರೆ. ಜ. ೨೨ ರಿಂದ ಫೆಬ್ರವರಿ ೨೫ ರವರೆಗೂ ಅಂದರೆ ೧ ತಿಂಗಳ ಕಾಲ ದೇಶದ ಹಲವೆಡೆಗಳಿಂದ ೧ ಸಾವಿರದಷ್ಟು ರೈಲುಗಳಲ್ಲಿ ಲಕ್ಷಾಂತರ ಭಕ್ತರು ಅಯೋಧ್ಯೆ ತಲುಪತೊಡಗುತ್ತಾರೆ.
ಇಷ್ಟೊಂದು ಲಕ್ಷ ಭಕ್ತರಿಗೆ ಅಯೋಧ್ಯೆ ಎಲ್ಲಾ ರೀತಿಯ ವ್ಯವಸ್ಥೆ ಕಲ್ಪಿಸಲು ಸಜ್ಜಾಗಿದೆಯೇ.. ಇವರಿಗೆಲ್ಲ ಉಳಿಯಲು ಎಲ್ಲಿ ವ್ಯವಸ್ಥೆ ಮಾಡಲಾಗಿದೆ.. ಎಲ್ಲಿ ಊಟೋಪಾಚಾರಕ್ಕೆ ವ್ಯವಸ್ಥೆಯಿದೆ..
ಈಗಾಗಲೇ ಭಕ್ತರಿಗೆ ಅಗತ್ಯ ಸೌಲಭ್ಯ ನೀಡಲು ಶ್ರೀರಾಮ ಜನ್ಮಭೂಮಿ ಟ್ರಸ್ಟ್ ೫ ಸಾವಿರಕ್ಕೂ ಅಧಿಕ ಸ್ವಯಂ ಸೇವಕರ ಪಡೆ ನಿಯೋಜಿಸಿದೆ. ಅಲ್ಲಲ್ಲಿ ಟೆಂಟ್ ಮಾದರಿಯಲ್ಲಿ ಭಕ್ತರ ತಾಣ ನಿರ್ಮಿಸಲಾಗುತ್ತದೆ. ಅಲ್ಲಿಯೇ ಬೃಹತ್ ಪರದೆ ಅಳವಡಿಸಿ ಇಲ್ಲಿಂದಲೇ ಶ್ರೀರಾಮ ಪಟ್ಟಾಭಿಷೇಕದ ದರ್ಶನಕ್ಕೆ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಸೂಕ್ತ ನೀರು, ಆಹಾರವನ್ನೂ ಕಲ್ಪಿಸಲಾಗುತ್ತದೆ. ಇಂತಿಷ್ಟೇ ಜನ ಬರುತ್ತಾರೆ ಎಂದು ಹೇಳುವುದು ಕಷ್ಟ ಎಂಬುದು ಟ್ರಸ್ಟ್ ಪ್ರಮುಖರ ಅನಿಸಿಕೆ ೫-೬ ಲಕ್ಷ ಭಕ್ತರು ಬಂದರೂ ಕೂಡ ನಾವು ಸಮರ್ಥವಾಗಿ ನಿಭಾಯಿಸಬಲ್ಲೆವು ಎಂಬದು ಕಾರ್ಯಕರ್ತರ ವಿಶ್ವಾಸ...
ಟ್ರಸ್ಟ್ ಪ್ರಮುಖರ ಮನವಿ ಏನೆಂದರೆ, ದಯವಿಟ್ಟು ಭಕ್ತರು ಜನವರಿ ೨೨ ರಂದು ತಮ್ಮ ಮನೆಯಲ್ಲಿಯೇ ಇದ್ದು ಮಧ್ಯಾಹ್ನ ಶ್ರೀ ರಾಮನ ಪೂಜೆ ಮಾಡಿ, ಮಹಾ ಪ್ರಭುವಿಗೆ ಮಹಾ ಆರತಿ ನೆರವೇರಿಸಿ. ಭಜನೆ, ಕೀರ್ತನೆಗಳ ಮೂಲಕ ರಾಮಸೇವೆಯಲ್ಲಿ ನಿರತರಾಗಿ. ಅಂದು ರಾತ್ರಿ ಮನೆ ಮುಂದೆ ದೀಪಗಳನ್ನು ಬೆಳಗಿಸಿ ರಾಮಪಟ್ಟಾಭಿಷೇಕವನ್ನು ಸಂಭ್ರಮಿಸಿ.
ಹಾಗೇನಾದರೂ ಅಯೋಧ್ಯೆಗೆ ಬಂದೇ ಬರುತ್ತೀರಿ ಎಂದಾದರೆ ಜನವರಿ ೨೧ ರೊಳಗೆ ಇಲ್ಲಿಗೆ ತಲುಪಿಬಿಡಿ. ೨೨ ರಂದು ಲಕ್ಷಾಂತರ ಜನರಿಂದ ತುಂಬಿಕೊಳ್ಳುವ ಅಯೋಧ್ಯೆಯ ಪ್ರವೇಶ ಕಷ್ಟಸಾಧ್ಯವಾಗಲಿದೆ. ಜತೆಗೇ ಪ್ರಧಾನಿ ಕೂಡ ಇಲ್ಲಿಗೆ ಬರುವುದರಿಂದಾಗಿ ಭದ್ರತಾ ಕಾರಣಗಳಿಂದಾಗಿ ಸಾಕಷ್ಟು ರಸ್ತೆಗಳು ಬಂದ್ ಆಗಲಿದೆ.
ಹಾಗೆಯೇ, ಜನವರಿ ೨೨ ರಂದೇ ಅಯೋಧ್ಯೆಯಿಂದ ನಿರ್ಗಮಿಸಲು ಮುಂದಾಗದಿರಿ, ಏಕೆಂದರೆ ಎಲ್ಲರೂ ಒಂದೇ ದಿನ ನಿರ್ಗಮಿಸಲು ಮುಂದಾದರೆ ಭಕ್ತಸಾಗರದಿಂದ ರೈಲು, ಬಸ್ ನಿಲ್ದಾಣಗಳಲ್ಲಿ ಸಮಸ್ಯೆ ತಲೆದೋರಬಹುದು, ರಸ್ತೆಗಳಲ್ಲಿ ವಾಹನ ದಟ್ಟಣೆ ನಿಭಾಯಿಸಲು ಕಷ್ಟವಾದೀತು. ಹೀಗಾಗಿ ಜನವರಿ ೨೩ ರ ಬಳಿಕವೇ ಹಂತಹAತದಲ್ಲಿ ಅಯೋಧ್ಯೆಯಿಂದ ವಾಪಾಸ್ ತೆರಳುವಂತೆ ಯೋಜನೆ ರೂಪಿಸಿಕೊಂಡು ಸರಯೂ ನಗರಿಗೆ ಬನ್ನಿ ಎಂದು ಟ್ರಸ್ಟ್ ಹೇಳಿಕೆಯಲ್ಲಿ ಕೋರಿದೆ.
ಜನವರಿ ೨೨ ಕ್ಕೆ ಮೂರು ದಿನ ಮುನ್ನವೇ ಶ್ರೀ ರಾಮ ಮಂದಿರವನ್ನು ಸೇನಾಪಡೆಯವರು ವಶಕ್ಕೆ ಪಡೆಯಲಿದ್ದಾರೆ. ಈ ದಿನಗಳಲ್ಲಿ ಸಾರ್ವಜನಿಕರಿಗೆ ದೇವಾಲಯ ಸಂಕೀರ್ಣದ ಬಳಿ ಹೋಗಲು ಅವಕಾಶವಿರುವುದಿಲ್ಲ. ಅಂತೆಯೇ ಜನವರಿ ೨೨ರಂದು ಕೂಡ ಭಕ್ತರಿಗೆ ದೇವಾಲಯ ವೀಕ್ಷಣೆಗೆ ಅವಕಾಶ ಇರುವುದಿಲ್ಲ. ಜನವರಿ ೨೩ ರಿಂದ ಮಾತ್ರ ಸಾರ್ವಜನಿಕರಿಗೆ ಶ್ರೀ ರಾಮ ಮಂದಿರಕ್ಕೆ ಪ್ರವೇಶ ನೀಡಲಾಗುತ್ತದೆ.
ಜನವರಿ ೨೨ ರಂದು ದೇಶವಿದೇಶಗಳ ಗಣ್ಯಾತಿಗಣ್ಯ ಅತಿಥಿಗಳು ಅಯೋಧ್ಯೆಗೆ ಬರಲಿದ್ದಾರೆ. ದೇಶದ ಹೆಸರಾಂತ ವಿಜ್ಞಾನಿಗಳು, ಸಿನಿಮಾ ತಾರೆಯರು, ಕ್ರೀಡಾಪಟುಗಳು, ಕೈಗಾರಿಕೋದ್ಯಮಿಗಳು, ರೈತರು, ವಕೀಲರು, ಕರಸೇವೆಯಲ್ಲಿ ಪ್ರಮುಖ ಪಾತ್ರ ವಹಿಸಿದವರು, ಬೇರೆ ಬೇರೆ ರಾಜ್ಯಗಳ ಪ್ರಮುಖ ರಾಜಕಾರಣಿಗಳು ರಾಮನೂರಿಗೆ ಬರಲಿದ್ದಾರೆ.
ಇಂತಹ ಅತಿಥಿಗಳಿಗೆ ಈಗಾಗಲೇ ಆಹ್ವಾನ ಪತ್ರಿಕೆ ನೀಡುವ ಕಾರ್ಯ ಭರದಿಂದ ಸಾಗಿದೆ. ರಾಮಮಂದಿರದ ಛಾಯಾರೂಪವನ್ನು ಆಹ್ವಾನ ಪತ್ರಿಕೆ ಹೊಂದಿದೆ. ಹಿಂದಿ, ಇಂಗ್ಲೀಷ್ ಭಾಷೆಗಳಲ್ಲಿ ಮಾಹಿತಿಯನ್ನು ಮುದ್ರಿಸಲಾಗಿದ್ದು, ತಾವರೆ ಮೇಲೆ ಬಿಲ್ಲು ಬಾಣ ಹಿಡಿದು ನಿಂತಿರುವ ಬಾಲ ರಾಮನ ಚಿತ್ರದೊಂದಿಗೇ (ಬಾಲರೂಪ ಪ್ರಭು ರಾಮ) ಅಯೋಧ್ಯ,, ಅಪೂರ್ವ ಆನದಿಕ್ ನಿಮಂತ್ರಣ್ ಎಂದು ಮುಖ ಹೊದಿಕೆಯಲ್ಲಿ ಮುದ್ರಿಸಲಾಗಿದೆ.
ಪ್ರಮುಖರ ನೆನಪಿನ ಪುಸ್ತಕ
ಆಹ್ವಾನ ಪತ್ರಿಕೆಯ ಜತೆಯಲ್ಲಿಯೇ ಕಿರುಹೊತ್ತಿಗೆಯನ್ನೂ ನೀಡಲಾಗಿದ್ದು, ರಾಮಜನ್ಮಭೂಮಿ ಹೋರಾಟದಲ್ಲಿ ಪಾಲ್ಗೊಂಡಿದ್ದ ಪ್ರಮುಖರ ಬಗ್ಗೆ ಅವರ ಫೋಟೋದೊಂದಿಗೆ ಮಾಹಿತಿಯನ್ನು ನೀಡಲಾಗಿದೆ. ಸಂತ ದೇವ್ರಾಹ ಬಾಲಾಜಿ ಮಹಾರಾಜ್, ಮಹಂತ ಅಭಿರಾಮ್ ದಾಸ್, ಪರಮಹಂಸ ರಾಮಚಂದ್ರದಾಸ್, ೧೯೪೦-೫೦ ರ ಅವಧಿಯಲ್ಲಿ ಫೈಜಾಬಾದ್ನ ಜಿಲ್ಲಾಧಿಕಾರಿಯಾಗಿದ್ದ ಸಂದರ್ಭ ರಾಮನಿಗೆ ಭೂಮಿ ದೊರಕುವಲ್ಲಿ ಮುಖ್ಯ ಪಾತ್ರ ವಹಿಸಿದ್ದ ಕೆ.ಕೆ. ನಾಯರ್, ಆರ್ಎಸ್ಎಸ್ ಸಹಸಂಘಚಾಲಕರಾಗಿದ್ದ ರಜ್ಜೂ ಭಯ್ಯ, ವಿಶ್ವಹಿಂದೂ ಪರಿಷತ್ ರಾಷ್ಟಿçÃಯ ಅಧ್ಯಕ್ಷರಾಗಿದ್ದ ಅಶೋಕ್ ಸಿಂಘಲ್ ಅವರುಗಳ ವ್ಯಕ್ತಿ ಚಿತ್ರಣವನ್ನು ಆಹ್ವಾನಪತ್ರಿಕೆ ಜತೆಗಿರುವ ಕಿರುಪುಸ್ತಕ ಹೊಂದಿದೆ.. ಅಂತೆಯೇ ಶ್ರೀರಾಮಮಂದಿರ ಉದ್ಘಾಟನೆಯ ಸಂದರ್ಭದ ಅತಿಥಿಗಳಾಗಿ ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ರಾಜ್ಯಪಾಲರಾದ ಆನಂದಿಬೆನ್, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಆರ್ಎಸ್ಎಸ್ ಸರಸಂಘಚಾಲಕ್ ಡಾ. ಮೋಹನ್ ಭಾಗ್ವತ್, ಇವರ ಹೆಸರು ಆಹ್ವಾನದಲ್ಲಿದೆ.
ಅನೇಕ ಗಣ್ಯ ಅತಿಥಿಗಳು ಜ. ೨೧ ರಂದು ಭಾನುವಾರವೇ ಅಯೋಧ್ಯೆ ತಲುಪಲಿದ್ದಾರೆ. ಇಂಥ ಅತಿಥಿಗಳು ವಿಮಾನ ಮೂಲಕ ಬರಲಿರುವುದರಿಂದ ಈಗಾಗಲೇ ಮಹರ್ಷಿ ವಾಲ್ಮೀಕಿ ವಿಮಾನ ನಿಲ್ದಾಣ ಅಯೋಧ್ಯಾ ಧಾಮ ಎಂದು ಹೆಸರಿಡಲಾಗಿರುವ ಅಂತರರಾಷ್ಟಿçÃಯ ವಿಮಾನ ನಿಲ್ದಾಣದಲ್ಲಿ ೨೦ಕ್ಕೂ ಅಧಿಕ ವಿಮಾನಗಳು ಬಂದು ಇಳಿಯಲು ವ್ವವಸ್ಥೆ ಕಲ್ಪಿಸಲಾಗಿದೆ. ಈ ಮೂಲಕ ಭಾರತದ ವಿಮಾನ ನಿಲ್ದಾಣಕ್ಕೆ ಸಾಂಸ್ಕೃತಿಕ ಸ್ಪರ್ಷ ನೀಡಿದಂತಾಗಿದೆ. ಅಯೋಧ್ಯೆಯ ವಿಮಾನ ನಿಲ್ದಾಣ ಸುಸಜ್ಜಿತವಾಗಿದ್ದು ಯಾವುದೇ ರೀತಿಯಲ್ಲಿಯೂ ಜಾಗತಿಕ ಗುಣಮಟ್ಟಕ್ಕೆ ಕುಂದುAಟಾಗದAತೆ ಇದನ್ನು ನಿರ್ವಹಿಸಲಾಗುತ್ತದೆ. ವಿದೇಶಗಳಿಂದಲೂ ರಾಮಭಕ್ತರು, ಪ್ರವಾಸಿಗರು ಅಯೋಧ್ಯೆಗೆ ಬರಲಿರುವುದರಿಂದಾಗಿ ಅಯೋಧ್ಯೆಯ ಚಿತ್ರಣವೇ ಭವಿಷ್ಯದಲ್ಲಿ ಬದಲಾಗಲಿದೆ. ಆರ್ಥಿಕವಾಗಿ ಅಯೋಧ್ಯೆಯ ಜತೆಗೇ ಫೈಜಾಬಾದ್, ಲಕ್ನೋ, ವಾರಣಾಸಿ ಮುಂತಾದ ಅಯೋಧ್ಯೆ ವ್ಯಾಪ್ತಿಯಲ್ಲಿನ ನಗರಗಳೂ ಬದಲಾವಣೆ ಕಾಣಲಿದೆ ಎಂದು ಕೇಂದ್ರದ ವಿಮಾನ ಯಾನ ಖಾತೆ ಸಚಿವ ಜ್ಯೋತಿರಾದಿತ್ಯ ಸಿಂಧ್ಯಾ ಅಭಿಪ್ರಾಯಪಟ್ಟಿದ್ದಾರೆ. ಧಾರ್ಮಿಕ ಕ್ಷೇತ್ರವೊಂದು ಆರ್ಥಿಕವಾಗಿಯೂ ಅಭಿವೃದ್ಧಿಯ ನಾಗಲೋಟ ಹೊಂದುವುದಕ್ಕೆ ಅಯೋಧ್ಯೆಯೇ ಉದಾಹರಣೆಯಾಗುತ್ತಿದೆ.
್ಡ ಅನಿಲ್ ಎಚ್.ಟಿ. ಮೊ.: ೯೮೪೪೦೬೦೧೭೪