ವೀರಾಜಪೇಟೆ, ಜ. ೮: ಶಿಕ್ಷಣದಿಂದ ಮಾತ್ರ ವ್ಯಕ್ತಿತ್ವ ವಿಕಸನ ಸಾಧ್ಯ. ಪ್ರತಿಭೆಗಳನ್ನು ಪ್ರದರ್ಶನ ಮಾಡುವುದರಿಂದ ಸಮಾಜವು ಗುರುತಿಸುವಂತಾಗುತ್ತದೆ ಎಂದು ಹೇಳಿದರು.
ಮಗ್ಗುಲದ ಲಿಟಲ್ ಸ್ಕಾಲರ್ಸ್ ಆಕಾಡೆಮಿ ವತಿಯಿಂದ ನಗರದ ಹೊರ ವಲಯ ಬಿಟ್ಟಂಗಾಲದಲ್ಲಿ ಆಯೋಜಿಸಲಾಗಿದ್ದ ‘ಚಿಣ್ಣರ ಕಲರವ ಸೀಜನ್ ೨’ರ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು, ಶಿಕ್ಷಣವಂತÀ ವ್ಯಕ್ತಿಗೆ ಮಾತ್ರ ಸಮಾಜವು ಗೌರವನ್ನು ಸೂಚಿಸುತ್ತದೆ. ಶಿಕ್ಷಣದೊಂದಿಗೆ ಮಕ್ಕಳಲ್ಲಿರುವ ಬಹುಮುಖ ಪ್ರತಿಭೆಯನ್ನು ಗುರುತಿಸಿ ಪ್ರದರ್ಶನ ಮಾಡಲು ವೇದಿಕೆ ಕಲ್ಪಿಸಬೇಕು. ಬಾಲ್ಯದಿಂದಲೇ ಶಿಕ್ಷಣದೊಂದಿಗೆ ವಿವಿಧ ಪಠ್ಯೇತರ ಚಟುವಟಿಕೆಗಳನ್ನು ಕಲಿಸಿದ್ದಲ್ಲಿ ಮುಂದೇ ವಿದ್ಯಾರ್ಥಿಯು ಸಮಾಜದ ವಿವಿಧ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸಲು ಸನ್ನದ್ಧನಾಗುತ್ತಾನೆ. ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆಯುದರೊಂದಿಗೆ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಉತ್ತಮ ಪ್ರಜೆಯಾಗುವಂತೆ ಕರೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ ಮಾತನಾಡಿ, ಪ್ರತಿಭೆ ಎಂಬುದು ಎಲ್ಲಾ ಮಕ್ಕಳಲ್ಲಿರುತ್ತದೆ. ಪೋಷಕರು, ಗುರುಗಳು ಅದನ್ನು ಗುರುತಿಸಬೇಕು. ಶೈಕ್ಷಣಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ವೇದಿಕೆಯಲ್ಲಿ ಧಿಟ್ಟವಾಗಿ ಮಾತನಾಡುವ, ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದರು.
ಕಾರ್ಯಕ್ರಮ ಉದ್ದೇಶಿಸಿ ವೀರಾಜಪೇಟೆ ತಾಲೂಕು ಕ್ಷೇತ್ರ ಶಿಕ್ಷಣ ಇಲಾಖೆ ಸಮನ್ವಯ ಅಧಿಕಾರಿ ವನಜಾಕ್ಷಿ, ಗಾಯಕಿ ರೇಮೋ ಮತ್ತು ಬಿಗ್ ಬಾಸ್ ವಿಜೇತ ಪ್ರಥಮ್ ಅವರುಗಳು ಮಾತನಾಡಿದರು.
ಲಿಟಲ್ ಸ್ಕಾಲರ್ಸ್ ಆಕಾಡೆ ಮಿಯ ಆಡಳಿತಾಧಿಕಾರಿಗಳಾದ ಪ್ರಜೇಶ್, ಲಿಟಲ್ ಸ್ಕಾಲರ್ಸ್ ಆಕಾಡೆಮಿಯ ಅಧ್ಯಕ್ಷೆ ಪೂಜಾ ಸಜೇಶ್, ಕಾರ್ಯದರ್ಶಿ ಪ್ರತೀಮಾ ರಂಜನ್, ಮುಖ್ಯೋಪಾಧ್ಯಾಯಿನಿ ಮೀರಾ ಪೂಣಚ್ಚ, ಶಿಕ್ಷಣ ಇಲಾಖೆಯ ಅಧಿಕಾರಿ ಸುಶಾ ಅವರುಗಳು ಉಪಸ್ಥಿತರಿದ್ದರು.
ಕಿಂಡರ್ ಗಾರ್ಡನ್ ವಿಭಾಗ ಪಾಶ್ಚಾತ್ಯ ಫ್ಯಾಶನ್ ಶೋ, ೧ನೇ ತರಗತಿಯಿಂದ ೪ನೇ ತರಗತಿಯ ವಿಭಾಗಕ್ಕೆ ರೆಟ್ರೋ ನೃತ್ಯ, ೫ನೇ ತರಗತಿಯಿಂದ ೭ನೇ ತರಗತಿಯ ವಿಭಾಗಕ್ಕೆ ಜಾನಪದ ನೃತ್ಯ, ೮ನೇ ತರಗತಿಯಿಂದ ೧೦ನೇ ತರಗತಿ ವಿಭಾಗಕ್ಕೆ ಸಾಂಪ್ರದಾಯಿಕ ಫ್ಯಾಶನ್ ಶೋ, ಒಟ್ಟು ನಾಲ್ಕು ವಿಭಾಗದಲ್ಲಿ ಸ್ಫರ್ಧೆಗಳು ಜರುಗಿದವು. ಜಿಲ್ಲೆಯ ನಾನಾ ಭಾಗಗಳಿಂದ ಸುಮಾರು ನೂರಕ್ಕೂ ಅಧಿಕ ಮಕ್ಕಳು ಭಾಗವಹಿಸಿದ್ದರು. ವಿಜೇತರಿಗೆ ಪಾರಿತೋಷಕ ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಲಿಟಲ್ ಸ್ಕಾಲರ್ಸ್ ಆಕಾಡೆಮಿಯ ಶಿಕ್ಷಕರಾದ ಸ್ವಾತಿ ಸ್ವಾಗತಿಸಿ, ವಂದಿಸಿದರು.