ಸಿದ್ದಾಪುರ, ಜ. ೯: ೨೦೧೯ರಲ್ಲಿ ಭಾರೀ ಮಳೆಗೆ ಕಾವೇರಿ ನದಿಯಲ್ಲಿ ಪ್ರವಾಹ ಸೃಷ್ಟಿಯಾಗಿದ್ದು, ಈ ಹಿನ್ನೆಲೆ ನೆಲ್ಲಿಹುದಿಕೇರಿ ವ್ಯಾಪ್ತಿಯ ಬೆಟ್ಟದ ಕಾಡು, ನಲ್ವತ್ತೇಕರೆ, ಕುಂಬಾರಗುAಡಿ ವ್ಯಾಪ್ತಿಯ ನೂರಕ್ಕೂ ಅಧಿಕ ಮನೆಗಳು ಹಾನಿಗೊಳಗಾಗಿತ್ತು. ಅದರಲ್ಲಿ ಸುಮಾರು ೧೫೦ ಮನೆ ಸಂಪೂರ್ಣ ನೆಲಸಮವಾಗಿತ್ತು.

ಮೌನಕ್ಕೆ ಜಾರಿದ ಶಾಶ್ವತ ಸೂರಿಗಾಗಿ ಪ್ರತಿಭಟಿಸಿದ ನಿರಾಶ್ರಿತರು

ಪ್ರವಾಹಕ್ಕೆ ತುತ್ತಾಗಿ ಮನೆ ಕಳೆದುಕೊಂಡ ನಿರಾಶ್ರಿತರು ಅಂದಿನ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಸಚಿವರುಗಳ ಎದುರು ಬೃಹತ್ ಪ್ರತಿಭಟನೆ ಮಾಡಿ ಶಾಶ್ವತ ಸೂರು ಒದಗಿಸಬೇಕೆಂದು ಒತ್ತಾಯಿಸಿದರು. ಇದಾದ ನಂತರ ಜಿಲ್ಲಾಡಳಿತವು ಅಭ್ಯತ್‌ಮಂಗಲ ವ್ಯಾಪ್ತಿಯಲ್ಲಿ ೮.೨೨ ಎಕರೆ ಜಾಗವನ್ನು ವಶಪಡಿಸಿಕೊಂಡು ನಿರಾಶ್ರಿತರಿಗೆ ಮನೆ ನಿರ್ಮಿಸಿ ಹಸ್ತಾಂತರಿಸುವ ಕೆಲಸಕ್ಕೆ ಮುಂದಾಗಿತ್ತು. ಈ ಹಿನ್ನೆಲೆಯಲ್ಲಿ ವಶಪಡಿಸಿಕೊಂಡ ಸ್ಥಳದಲ್ಲಿ ಕಾಮಗಾರಿಗಳು ಪ್ರಾರಂಭಗೊAಡಿತ್ತು. ಪ್ರಾರಂಭವಾದ ಕೆಲವು ದಿನಗಳಲ್ಲಿ ನಿರಾಶ್ರಿತರು ಕೆಲಸ ವಿಳಂಬವನ್ನು ಪ್ರಶ್ನಿಸಿ ಪ್ರತಿಭಟನೆಗೆ ಸಿದ್ಧರಾಗಿದ್ದರು. ತದ ನಂತರ ವರ್ಷಗಳು ಕಳೆದರೂ ಕೂಡ ನದಿ ತೀರದ ನಿರಾಶ್ರಿತರು ಜಾಗದ ಕುರಿತು ಪ್ರಶ್ನಿಸುವ ಗೋಜಿಗೆ ಹೋಗದೇ ತಮ್ಮ ಕೆಲಸದಲ್ಲೇ ಮಗ್ನರಾಗಿ ಮೌನಕ್ಕೆ ಜಾರಿದ್ದಾರೆ.

ನಿರಾಶ್ರಿತರ ಮೌನವನ್ನು ಬಂಡವಾಳವನ್ನಾಗಿಸಿದ ಜಿಲ್ಲಾಡಳಿತ

ನದಿ ತೀರದ ನಿವಾಸಿಗಳ ಹುಮ್ಮಸ್ಸು ಜಿಲ್ಲಾಡಳಿತಕ್ಕೆ ಬಿಸಿ ತಟ್ಟಿತ್ತು. ಈ ಹಿನ್ನೆಲೆಯಲ್ಲಿ ವಶಪಡಿಸಿಕೊಂಡ ಸ್ಥಳದಲ್ಲಿ ಮರ ತೆರವು ಸೇರಿದಂತೆ ಸೇತುವೆ ಕಾಮಗಾರಿಗಳನ್ನು ಮುಗಿಸಿತ್ತು. ಪ್ರತೀ ಭಾರಿಯ ಹೋರಾಟಕ್ಕೆ ಒಂದೊAದು ಕಾಮಗಾರಿಯನ್ನು ಮಾಡುತ್ತಿದೆ. ಇದೀಗ ಸೇತುವೆ ಕಾಮಗಾರಿ ಮುಗಿದರೂ ಕೂಡ ಸ್ಥಳದಲ್ಲಿ ಬೇರೆ ಕಾಮಗಾರಿಗಳು ನಡೆಯದೇ ಜಿಲ್ಲಾಡಳಿತ ಮತ್ತು ಅಧಿಕಾರಿಗಳು ಭರವಸೆಯ ಮಾತಿನಲ್ಲೇ ಮುನ್ನಡೆಯುತ್ತಿದ್ದಾರೆೆ. ಇತ್ತ ಜಿಲ್ಲಾಡಳಿತಕ್ಕೆ ಪ್ರತಿಭಟನೆ, ಪ್ರಶ್ನೆ, ಹೋರಾಟದ ಮೂಲಕ ಬಿಸಿ ಮುಟ್ಟಿಸಬೇಕಾದ ಸಂತ್ರಸ್ತರು ಮೌನವಹಿಸಿರುವುದು ಜಿಲ್ಲಾಡಳಿಕ್ಕೆ ವರವಾಗಿ ಪರಿಣಮಿಸಿದೆ.

ಸಂತ್ರಸ್ತರಿಗಾಗಿ ವಶಪಡಿಸಿಕೊಂಡ ಜಾಗಕ್ಕೆ ತೆರಳಲು ಹಿಂದೇಟು

ಪ್ರಳಯದಲ್ಲಿ ಮನೆ ಕಳೆದುಕೊಂಡ ಕುಟುಂಬಗಳಿಗಾಗಿ ವಾಲ್ನೂರು ತ್ಯಾಗತ್ತೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ೮.೨೨ ಎಕರೆ ಜಾಗವನ್ನು ವಶಪಡಿಸಿಕೊಂಡು ಅಲ್ಲಿ ಮನೆ ನಿರ್ಮಿಸಿ ಹಸ್ತಾಂತರಿಸುವ ಯೋಜನೆಗೆ ಜಿಲ್ಲಾಡಳಿತ ಮುಂದಾಗಿದೆ.

ಕಳೆದ ಕೆಲವು ವರ್ಷಗಳ ಹಿಂದೆ ನೆಲ್ಲಿಹುದಿಕೇರಿ, ವಾಲ್ನೂರು ವ್ಯಾಪ್ತಿಯ ಸುಮಾರು ೧೪೪ ಫಲಾನುಭವಿಗಳಿಗೆ ಜಾಗದ ಗುರುತಿನ ಟೋಕನ್ ನೀಡಲಾಗಿತ್ತು. ಟೋಕನ್ ನೀಡಿ ವರ್ಷಗಳು ಕಳೆದರೂ ಕೂಡ ಜಾಗದಲ್ಲಿ ಮನೆ ನಿರ್ಮಾಣ ಕಾಮಗಾರಿ ನಡೆದಿಲ್ಲ.

ವಸತಿ ರಹಿತರಿಗೆ ಸಿಗಬಹುದೇ...?

ನದಿ ತೀರದ ಕೆಲವರು ಅಭ್ಯತ್‌ಮಂಗಲ ವ್ಯಾಪ್ತಿಯಲ್ಲಿ ವಶಪಡಿಸಿಕೊಂಡಿರುವ ಜಾಗಕ್ಕೆ ತೆರಳಲು ಹಿಂದೇಟು ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಹಾಗೂ ಕೆಲವರಿಗೆ ಸಂಘ-ಸAಸ್ಥೆಗಳಿAದ ಮನೆ ದೊರಕಿದ ಹಿನ್ನೆಲೆಯಲ್ಲಿ ಫಲಾನುಭವಿಗಳನ್ನು ಹೊರತುಪಡಿಸಿ ಉಳಿದವರಾದ ಬಾಡಿಗೆ ಮನೆ, ಲೈನ್ ಮನೆಗಳಲ್ಲಿ ವಾಸವಿರುವ ವಸತಿ ರಹಿತರಿಗೆ ವಸತಿ ಅವಕಾಶ ಕಲ್ಪಿಸಬೇಕೆಂಬ ಕೂಗು ಕೇಳಿಬರುತ್ತಿದೆ.

- ಎ.ಎನ್. ವಾಸು, ಸಿದ್ದಾಪುರ.