ಕೂಡಿಗೆ, ಜ. ೭: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದಲ್ಲಿ ಕುಮುಟ ಮೂಲದ ವ್ಯಕ್ತಿಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಹಾರಂಗಿ ಹಿನ್ನೀರಿನಲ್ಲಿ ಖಾಸಗಿ ವಾಟರ್ ಅಡ್ವೆಂಚರ್ ನಡೆಸುವ ಸಲುವಾಗಿ ರ‍್ಯಾಫ್ಟ್ ನಿರ್ವಹಣೆಗೆ ನಿಯೋಜಿಸಿದ್ದ ಪ್ರವೀಣ್ (೩೫) ನೇಣಿಗೆ ಶರಣಾದ ವ್ಯಕ್ತಿ. ಚಿಕ್ಕತ್ತೂರು ಲಿಖಿತಾ ಎಂಬವರ ಮನೆಯಲ್ಲಿ ಈತ ಬಾಡಿಗೆಗೆ ಇದ್ದ ಎನ್ನಲಾಗಿದೆ. ಹಿಂದಿನ ರಾತ್ರಿ ಕೆಲವರು ಈತನ ನಿವಾಸಕ್ಕೆ ಬಂದು ಹೋಗಿರುವ ಕುರುಹುಗಳು ಕಂಡುಬAದಿದ್ದು, ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.