ಮಡಿಕೇರಿ, ಜ. ೭: ಶ್ರೀ ರಾಮ ಜನ್ಮ ಭೂಮಿ ಅಯೋಧ್ಯೆ ಹಾಗೂ ಕಾಶೀ ಕ್ಷೇತ್ರಗಳು ಎರಡು ದಶಕಗಳ ಹಿಂದೆ ತಾನು ನೋಡಿದ ಹಾಗೆಯೇ ಇಲ್ಲ. ಇಂದು ಅದ್ಭುತ ರೀತಿಯಲ್ಲಿ ಬದಲಾಗಿ ಅಭಿವೃದ್ಧಿ ಆಗುತ್ತಿದೆ ಎಂದು ಮಾಜಿ ಶಾಸಕ ಎಂ. ಪಿ. ಅಪ್ಪಚ್ಚು ರಂಜನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಎರಡು ದಿನಗಳ ಯಾತ್ರೆ ಕೈಗೊಳ್ಳುವ ಮೂಲಕ ಸಂಸಾರ ದೊಂದಿಗೆ ಮರಳಿದ ಅವರು ಇಂದು ‘ಶಕ್ತಿ’ಯೊಂದಿಗೆ ತಮ್ಮ ಅನುಭವ ಹಂಚಿಕೊAಡರು. ಅಯೋಧ್ಯೆಯ ಶ್ರೀ ರಾಮ ಮಂದಿರ ಇದೇ ತಾ. ೨೨ರಂದು ಪ್ರಭು ಬಾಲರಾಮನ ವಿಗ್ರಹ ಪ್ರತಿಷ್ಠಾಪನೆಗೆ ಸಕಲ ಸಿದ್ಧತೆ ಭರದಿಂದ ಸಾಗುತ್ತಿದೆ ಎಂದು ನುಡಿದ ಅವರು, ಇಡೀ ಭರತ ಭೂಮಿಯಲ್ಲಿ ಬೇರೆಲ್ಲೂ ಕಾಣದಂತೆ ಭವ್ಯ ಮಂದಿರದ ಸಹಿತ ಪುನರುತ್ಥಾನಗೊಳ್ಳವ ದೃಶ್ಯ ಕಂಡುಬAತು ಎಂದು ವಿವರಿಸಿದರು.

ಅಯೋಧ್ಯೆಯನ್ನು ಉತ್ತರ ಪ್ರದೇಶ ರಾಜಧಾನಿ ಲಕ್ನೋ ಹಾಗೂ ಇತರ ನಾಲ್ಕು ದಿಕ್ಕಿನಲ್ಲಿ ಬೃಹತ್ ಹೆದ್ದಾರಿಯೊಂದಿಗೆ ಪ್ರವೇಶ ಕಲ್ಪಿಸಲಾಗಿದೆ. ಅತ್ಯಂತ ಆಕರ್ಷಕ ಹಾಗೂ ಆಧುನಿಕ ತಂತ್ರಜ್ಞಾನದ ಅಳವಡಿಕೆ ಮೂಲಕ ರೈಲ್ವೇ ನಿಲ್ದಾಣದಲ್ಲಿ ವ್ಯವಸ್ಥೆ ರೂಪಿಸಿದ್ದು ಅಂತರರಾಷ್ಟಿçÃಯ ಮಟ್ಟದಲ್ಲಿ ವಿಮಾನ ನಿಲ್ದಾಣ ತಲೆಯೆತ್ತಿದೆ ಎಂದು ಅವರು ಪ್ರತ್ಯಕ್ಷ ವೀಕ್ಷಿಸಿದ ದೃಶ್ಯಗಳ ಮೆಲುಕು ಹಾಕಿದರು.

ಅಲ್ಲದೆ ಸರಾಯು ತಟದ ಸಂಪೂರ್ಣ ಅಭಿವೃದ್ಧಿಯೊಂದಿಗೆ ಬೃಹತ್ ಸೇತುವೆ ನಿರ್ಮಾಣ ಮಾಡಲಾಗಿದೆ. ವಾರಣಾಸಿ ಮಾದರಿ ಪ್ರತಿದಿನ ಸಂಜೆ ಗಂಗಾ ಆರತಿಯಂತೆ ಸರಾಯು ನದಿಗೆ ಮಹಾ ಆರತಿ ಆರಂಭಗೊAಡಿದೆ. ಅಯೋಧ್ಯೆಯ ಶ್ರೀ ರಾಮ ಮಂದಿರ ವ್ಯಾಪ್ತಿಯಲ್ಲಿ ೭೦ ಎಕರೆಗೂ ಅಧಿಕ ಜಾಗವನ್ನು ಸಮರ್ಪಕವಾಗಿ ಬಳಸಿಕೊಂಡು ಅಭಿವೃದ್ಧಿ ಕೈಗೊಳ್ಳಲಾಗಿದೆ ಎಂದು ವಿವರಿಸಿದ ಅವರು ಬಹುಶಃ ಇಡೀ ಭಾರತದ ದೇವನೆಲೆಗಳಲ್ಲಿ ಅಯೋಧ್ಯೆ ತುಂಬಾ ಮಹತ್ವ ಪಡೆದುಕೊಂಡ ದೇವಾಲಯಗಳ ನಗರಿಯಾಗಿ ಪ್ರಗತಿ ಹೊಂದುತ್ತಿದೆ ಎಂದು ಹೇಳಿದರು.

ಶ್ರೀ ರಾಮ ವಿಗ್ರಹ ಪ್ರತಿಷ್ಠಾಪನೆ ಸಲುವಾಗಿ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಸಹಿತ ಗಣ್ಯರು ಅಯೋಧ್ಯೆಗೆ ಆಗಮಿಸುವ ಹಿನ್ನೆಲೆಯಲ್ಲಿ ಸರ್ವರೀತಿ ಸಿದ್ಧತೆ ಹಾಗೂ ವ್ಯಾಪಕ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಧಾರ್ಮಿಕ ಕಾರ್ಯಕ್ರಮಗಳ ಬಗ್ಗೆ ಶ್ರೀ ರಾಮಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವತಿಯಿಂದ ವಿವಿಧ ತಯಾರಿ ನಡೆಸಿದೆ ಎಂದು ಅವರು ತಿಳಿಸಿದರು. ಒಟ್ಟಾರೆ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿನಿಧಿಸುವ ಕಾಶೀ ಕ್ಷೇತ್ರದ ಅಭಿವೃದ್ಧಿಯೊಂದಿಗೆ ಅಯೋಧ್ಯೆಯ ರಾಮಜನ್ಮ ಭೂಮಿ ಹಿಂದೆAದೂ ಕಾಣದ ಮಟ್ಟದಲ್ಲಿ ಅಭಿವೃದ್ಧಿ ಆಗುತ್ತಿದೆ ಎಂದು ಅಪ್ಪಚ್ಚು ರಂಜನ್ ಆಶಯದ ನುಡಿಯಾಡಿದರು.

ತಾವು ಕಾಶಿಯಲ್ಲಿ ಕುಟುಂಬದ ಧಾರ್ಮಿಕ ಕಾರ್ಯಕ್ರಮ ನಿಮಿತ್ತ ಯಾತ್ರೆ ಕೈಗೊಳ್ಳುವದರೊಂದಿಗೆ ಅಯೋಧ್ಯೆಯ ಪ್ರಸ್ತುತ ಬೆಳವಣಿಗೆ ನೋಡಿಕೊಂಡು ಶ್ರೀ ರಾಮನ ದರ್ಶನ ಪಡೆದು ಪೂಜೆ ಸಲ್ಲಿಸಿ ನಿನ್ನೆ ರಾತ್ರಿ ಹಿಂತಿರುಗಿದೆ ಎಂದು ಮಾಹಿತಿ ಹಂಚಿಕೊAಡರು.