ಸೋಮವಾರಪೇಟೆ, ಜ. ೭: ‘ಸಾರ್ವಜನಿಕರ ತೆರಿಗೆ ಹಣವನ್ನು ಬಳಸಿಕೊಂಡು ಒಂದೂವರೆ ಕೋಟಿ ವೆಚ್ಚದಲ್ಲಿ ಜಾನುವಾರುಗಳಿಗೆ ಕೊಟ್ಟಿಗೆ, ಅಲೆಮಾರಿಗಳಿಗೆ ಆಶ್ರಯತಾಣ ನಿರ್ಮಿಸಿದ ಮಹಾನ್ ಕೀರ್ತಿ ಸಹಜವಾಗಿ ಈವರೆಗೆ ಆಡಳಿತ ನಡೆಸಿದ ಅಧಿಕಾರಿ ವರ್ಗ, ಜನಪ್ರತಿನಿಧಿಗಳಿಗೆ ಸಲ್ಲಲೇಬೇಕು! ಇದನ್ನು ಕಂಡೂ ಕಾಣದಂತಿರುವ, ಯಾವುದ್ಯಾವುದೋ ಸಂಬAಧವೇ ಇಲ್ಲದ ವಿಷಯಗಳಿಗೆ ಬೀದಿಗಿಳಿಯುವ ಈ ಭಾಗದ ಸಂಘ ಸಂಸ್ಥೆಗಳಿಗೂ ಈ ಶ್ರೇಯಸ್ಸಿನಲ್ಲಿ ಪಾಲು ನೀಡಲೇಬೇಕು!

ಹೌದು..! ಹೀಗೆಂದು ಅನ್ನಿಸದೇ ಇರದು. ಇದಕ್ಕೆ ಕಾರಣ- ಶನಿವಾರಸಂತೆಯಿAದ ಸೋಮವಾರಪೇಟೆ ಪಟ್ಟಣಕ್ಕೆ ಪ್ರವೇಶ ಕಲ್ಪಿಸುವ ಸ್ಥಳದಲ್ಲಿ ಈಗಲೂ ಸ್ಮಾರಕದಂತಿರುವ ಶತಮಾನೋತ್ಸವ ಭವನ. ಈ ಭವನ ಈವರೆಗೆ ಆಡಳಿತ ನಡೆಸಿದ ಆಡಳಿತಗಾರರ ದಿವ್ಯ ಅನಾದರಕ್ಕೆ ಒಳಗಾಗಿದೆ. ಅನುದಾನದೊಂದಿಗೆ ಇಚ್ಛಾಶಕ್ತಿಯ ಕೊರತೆಯಿಂದಾಗಿ ಭವನ ಶಿಥಿಲಾವಸ್ಥೆಗೆ ತಲುಪಿದ್ದು, ೧೬ ವರ್ಷವಾದರೂ ಭವನ ಕಾಮಗಾರಿ ಪೂರ್ಣಗೊಂಡಿಲ್ಲ.

ಸದ್ಯದ ಮಟ್ಟಿಗೆ ಬೀಡಾಡಿ ಜಾನುವಾರುಗಳು, ಕೆರೆಕಟ್ಟೆ, ರಸ್ತೆ ಸೇರಿದಂತೆ ಇನ್ನಿತರ ಕೆಲಸ ಕಾರ್ಯಗಳಿಗಾಗಿ ನೂರಾರು ಕಿಲೋಮೀಟರ್ ದೂರದಿಂದ ಬರುವ ಅಲೆಮಾರಿ ಕಾರ್ಮಿಕರಿಗೆ, ಗಾಂಜಾ, ಮದ್ಯ ಸೇವಿಸುವ ಪುಂಡರಿಗೆ ಆಶ್ರಯ ಒದಗಿಸುವ ಕಟ್ಟಡವಾಗಿ ಇದು ಬಳಕೆಯಾಗುತ್ತಿದ್ದು, ಜಾನುವಾರುಗಳ ಕೊಟ್ಟಿಗೆಗೆ ಒಂದೂವರೆ ಕೋಟಿ ಈಗಾಗಲೇ ವೆಚ್ಚ ಮಾಡಿರುವ ಕೀರ್ತಿ ಸರ್ಕಾರದ ಭಾಗವಾಗಿರುವ ಜನಪ್ರತಿನಿಧಿಗಳು, ಅಧಿಕಾರಿಗಳು, ನಮ್ಮದೇ ತೆರಿಗೆಯ ಹಣ ಎಂಬ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲದ ಈ ಭಾಗದ ಜನರಿಗೆ ಸಲ್ಲಲೇಬೇಕು!

ಶತಮಾನೋತ್ಸವ ಭವನದ ದುಸ್ಥಿತಿಯ ಬಗ್ಗೆ ಹಲವಷ್ಟು ಬಾರಿ ಈವರೆಗಿನ ಶಾಸಕರು, ಅಧಿಕಾರಿಗಳ ಗಮನ ಸೆಳೆದರೂ ಸಹ ಶತಮಾನೋತ್ಸವ ಭವನಕ್ಕೆ ಹಿಡಿದ ಗ್ರಹಣ ಇಂದಿಗೂ ಬಿಟ್ಟಂತೆ ಕಾಣುತ್ತಿಲ್ಲ. ಶತಮಾನೋತ್ಸವ ಭವನ ಎರಡು ಗುಂಪುಗಳ ನಡುವಿನ ಪ್ರತಿಷ್ಠೆಗೆ ಬಲಿಯಾಗುತ್ತಿದ್ದು, ಪಾಳುಬಿದ್ದ ಗೋಪುರದಂತಾಗಿದೆ.

ಏನಿದು ಭವನ?: ಕಳೆದ ೨೦೦೭ ರಲ್ಲಿ ಶಾಸಕರಾಗಿದ್ದ ಮಾಜೀ ಸಚಿವ ಬಿ.ಎ. ಜೀವಿಜಯ ಅವರ ಅಭಿಲಾಷೆಯಂತೆ, ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಗೆ ೧೦೦ ವರ್ಷಗಳು ತುಂಬಿದ ಸವಿನೆನಪಿಗಾಗಿ ಶತಮಾನೋತ್ಸವ ಭವನ ನಿರ್ಮಿಸಲು ಕಾರ್ಯಯೋಜನೆ ರೂಪಿಸಲಾಗಿತ್ತು. ೨೦೦೭ರಲ್ಲಿಯೇ ರೂ. ೧.೨೫ ಕೋಟಿ ವೆಚ್ಚದ ಭವನಕ್ಕೆ ಉತ್ಸಾಹದಿಂದ ಚಾಲನೆ ನೀಡಿದ ಜೀವಿಜಯ ಅವರು, ನಂತರದ ಚುನಾವಣೆಗಳಲ್ಲಿ ಸತತವಾಗಿ ಸೋಲು ಕಂಡಿದ್ದರಿAದ, ಶತಮಾನೋತ್ಸವ ಭವನವೂ ಸಹ ಸೋಲು ಕಾಣುವಂತಾಯಿತು.

೨೦೦೭ರಲ್ಲಿ

(ಮೊದಲ ಪುಟದಿಂದ) ಎಂಎಲ್‌ಎ ಆಗಿದ್ದ ಬಿ.ಎ. ಜೀವಿಜಯ ಅವರು ಭವನ ನಿರ್ಮಾಣ ಸಮಿತಿಯ ಕಾರ್ಯಾಧ್ಯಕ್ಷರೂ ಆಗಿದ್ದರಿಂದ ತಮ್ಮ ಶಾಸಕರ ನಿಧಿಯಿಂದ ರೂ. ೧೮ ಲಕ್ಷ, ಮಲೆನಾಡು ಅಭಿವೃದ್ದಿ ಮಂಡಳಿ ಯಿಂದ ವಿವಿಧ ಹಂತಗಳಲ್ಲಿ ರೂ. ೧೫ ಲಕ್ಷ, ರಾಜ್ಯ ಸಭಾ ಸದಸ್ಯ ರೆಹಮಾನ್‌ಖಾನ್‌ರವರು ತಮ್ಮ ಕ್ಷೇತ್ರಾಭಿವೃದ್ದಿ ನಿಧಿಯಿಂದ ನೀಡಿದ ರೂ. ೪ ಲಕ್ಷ, ಕೇಂದ್ರ ಸಚಿವ ಎಂ.ವಿ.ರಾಜಶೇಖರನ್ ತಮ್ಮ ಕ್ಷೇತ್ರಾಭಿವೃದ್ದಿ ನಿಧಿಯಿಂದ ರೂ. ೨.೫ ಲಕ್ಷ ಹಾಗೂ ವಿಧಾನ ಪರಿಷತ್ ಸದಸ್ಯೆ ಮೋಟಮ್ಮರವರು ತಮ್ಮ ಕ್ಷೇತ್ರಾಭಿವೃದ್ದಿ ನಿಧಿಯಿಂದ ರೂ. ೩ ಲಕ್ಷ ಒದಗಿಸಿದ್ದರಿಂದ ಭವನ ನಿರ್ಮಾಣ ಶೇ.೪೦ರಷ್ಟು ಪೂರ್ಣಗೊಂಡಿದೆ.

ಇದಾದ ನಂತರ ಜೀವಿಜಯ ಅವರು ಚುನಾವಣೆಯಲ್ಲಿ ಸೋತು ಅಪ್ಪಚ್ಚು ರಂಜನ್ ಅವರು ಶಾಸಕರಾಗಿ ಗೆಲುವು ಸಾಧಿಸಿದರು. ಈ ಸಂದರ್ಭ ರಾಜಕೀಯ ಪ್ರತಿಷ್ಠೆಯಿಂದಾಗಿ ಶತಮಾನೋತ್ಸವ ಭವನ ನಿರ್ಮಾಣ ಸಮಿತಿಯ ಪದಾಧಿಕಾರಿಗಳು ಹಾಗೂ ಅಪ್ಪಚ್ಚು ರಂಜನ್ ನಡುವೆ ಹೊಂದಾಣಿಕೆ ಇಲ್ಲದೇ ಹೋಗಿ ದ್ದರಿಂದ ಇಂದಿಗೂ ಭವನ ಶಿಥಿಲಾ ವಸ್ಥೆಯಲ್ಲಿಯೇ ಉಳಿಯುವಂತಾಗಿದೆ.

ಪ.ಪA.ನಿAದ ೧ಕೋಟಿ ಅನುದಾನಕ್ಕೆ ಕೊಕ್ಕೆ: ೨೦೧೩ರಲ್ಲಿ ಕೇಂದ್ರ ಸರ್ಕಾರ ಪುರಸ್ಕೃತ ಯುಐಡಿಎಸ್ ಎಸ್‌ಎಂಟಿ ಯೋಜನೆಯಡಿ ಪ್ರತಿ ಪಟ್ಟಣ ಪಂಚಾಯಿತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ೨೦ಕೋಟಿ ರೂ. ಗಳ ಕ್ರಿಯಾ ಯೋಜನೆಯನ್ನು ರೂಪಿಸಲಾಗಿತ್ತು. ಅದರಲ್ಲಿ ಶತಮಾನೋತ್ಸವ ಭವನ ಕಾಮಗಾರಿ ಪೂರ್ಣಗೊಳಿಸಲು ಒಂದು ಕೋಟಿ ರೂ.ಗಳನ್ನು ಮೀಸಲಿಡಲಾಗಿತ್ತು.

ಆದರೆ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಕೆಲ ಸದಸ್ಯರು ಶತಮಾನೋತ್ಸವ ಭವನ ಕಾಮಗಾರಿಗೆ ಮೀಸಲಿಟ್ಟಿದ್ದ ಹಣವನ್ನು ಬೇರೆ ಉದ್ದೇಶಕ್ಕೆ ಬಳಸಿಕೊಳ್ಳುವಂತೆ ಸಲಹೆ ನೀಡಿದ್ದರಿಂದ, ಅಲ್ಲಿಯೂ ಭವನಕ್ಕೆ ಸೋಲಾಯಿತು.

ದಾಖಲೆ ನೀಡಿದರೆ ಕ್ರಮ ಎಂದಿದ್ದ ರಂಜನ್: ಶತಮಾನೋತ್ಸವ ಭವನ ಸಂಬAಧಿತ ಎಲ್ಲಾ ದಾಖಲೆಗಳು ಮಾಜೀ ಶಾಸಕ ಬಿ.ಎ. ಜೀವಿಜಯ ಅವರ ಬಳಿಯಿದ್ದು, ಯೋಜನೆಗೆ ಸಂಬAಧಿಸಿದ ಯಾವದೇ ದಾಖಲೆಗಳು ತನ್ನ ಬಳಿಯಿಲ್ಲ. ಈ ಹಿಂದೆ ಅನೇಕ ಬಾರಿ ದಾಖಲೆಗಳನ್ನು ಒದಗಿಸುವಂತೆ ಕೇಳಿಕೊಂಡಿದ್ದರೂ ಹಸ್ತಾಂತರಿಸಿಲ್ಲ. ಶತಮಾನೋತ್ಸವ ಭವನದ ಕಾರ್ಯಾಧ್ಯಕ್ಷರೂ ಸಹ ಜೀವಿಜಯ ಅವರೇ ಆಗಿದ್ದು, ಅದಕ್ಕೆ ಸಂಬAಧಿಸಿದ ಅನುದಾನದ ವಿವರ, ಕ್ರಿಯಾಯೋಜನೆ, ನೀಲನಕ್ಷೆ ಸೇರಿದಂತೆ ಇದುವರೆಗಿನ ಎಲ್ಲಾ ದಾಖಲೆ ನೀಡಿದರೆ ಶತಮಾನೋತ್ಸವ ಭವನವನ್ನು ಪೂರ್ಣಗೊಳಿಸ ಲಾಗುವದು ಎಂದು ಈಗ ಮಾಜಿ ಶಾಸಕ ಅಪ್ಪಚ್ಚು ರಂಜನ್ ಹೇಳಿದ್ದರು.

೨೦೨೨ರಲ್ಲಿ ಭೇಟಿ: ಭವನ ಕಾಮಗಾರಿ ಆರಂಭಗೊAಡು ೧೫ ವರ್ಷಗಳ ಬಳಿಕ ಅಂದಿನ ಶಾಸಕರಾಗಿದ್ದ ಅಪ್ಪಚ್ಚು ರಂಜನ್ ಅವರು ಭವನಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭ ‘ಶಕ್ತಿ’ಯೊಂದಿಗೆ ಮಾತನಾಡಿದ್ದ ಅವರು, ಶತಮಾನೋತ್ಸವ ಭವನವನ್ನು ಮಾಜೀ ಸಚಿವ ಜೀವಿಜಯ ಅವರ ನೇತೃತ್ವದಲ್ಲಿ ಪ್ರಾರಂಭಿಸಲಾಗಿತ್ತು. ಆದರೆ ನಂತರದ ದಿನಗಳಲ್ಲಿ ಪೂರ್ಣ ಗೊಳ್ಳಲಿಲ್ಲ. ಸಮಿತಿಯ ಪ್ರಮುಖರು ಭವನ ಪೂರ್ಣ ಗೊಳಿಸುವ ಬಗ್ಗೆ ಮನವಿ ಸಲ್ಲಿಸಿದ್ದು, ಶೀಘ್ರದಲ್ಲೇ ಜೀವಿಜಯ ಅವರೊಂದಿಗೆ ಸಭೆ ನಡೆಸಿ, ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಭರವಸೆ ನೀಡಿದ್ದರು. ನಂತರ ಈ ಬಗ್ಗೆ ಗಮನಹರಿಸಲೇ ಇಲ್ಲ.

ಸೋಲಿಗೂ ಒಂದು ಕಾರಣ: ಸೋಮವಾರಪೇಟೆ ಭಾಗದಲ್ಲಿ ಅಪ್ಪಚ್ಚು ರಂಜನ್ ನಿರೀಕ್ಷಿತ ಅಭಿವೃದ್ಧಿ ಮಾಡಿಲ್ಲ ಎಂಬ ಕೂಗು ಸಾರ್ವಜನಿಕವಾಗಿ ಕೇಳುತ್ತಲೇ ಬಂದಿತ್ತು. ಪ್ರಮುಖವಾಗಿ ಶತಮಾನೋತ್ಸವ ಭವನ, ಸಿಂಥೆಟಿಕ್ ಟರ್ಫ್ ಮೈದಾನವನ್ನೇ ಎಲ್ಲರೂ ಬೊಟ್ಟು ಮಾಡುತ್ತಿದ್ದರು. ಚುನಾವಣೆ ಯ ಪ್ರಚಾರ ಸಭೆಯಲ್ಲಿಯೂ ಟರ್ಫ್ ಮತ್ತು ಭವನ ಎದುರಾಳಿ ಪಕ್ಷಗಳಿಗೆ ಬಹುಮುಖ್ಯ ಅಸ್ತçವಾಗಿತ್ತು. ಈ ಆರೋಪಕ್ಕೆ ಜೀವಂತ ಸಾಕ್ಷಿಯಾಗಿ ಎರಡೂ ಯೋಜನೆಗಳೂ ಕಣ್ಣ ಮುಂದೆ ಇದ್ದವು. ಇವುಗಳೂ ಸಹ ಪಟ್ಟಣ ಸೇರಿದಂತೆ ಸುತ್ತಮುತ್ತಲ ಭಾಗದಲ್ಲಿ ಮತಗಳಿಕೆ ಕಡಿಮೆಯಾಗಿ ರಂಜನ್ ಅವರ ಸೋಲಿಗೆ ಕಾರಣ ವಾಯಿತು ಎಂದು ಅವರದೇ ಪಕ್ಷದ ಹಲವರು ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ.

ಇದೀಗ ಶಾಸಕರು ಬದಲಾಗಿದ್ದಾರೆ. ಬದಲಾವಣೆಗೆ ಅಪೂರ್ಣ ಭವನವೂ ಸಹ ಹತ್ತರಲ್ಲಿ ಹನ್ನೊಂದನೇ ಕಾರಣ ಎಂಬAತಿದೆ. ರಾಜ್ಯದಲ್ಲಿ ಸರ್ಕಾರವೂ ಬದಲಾಗಿದೆ. ಚುನಾವಣೆ ಸಮಯದಲ್ಲಿ ಭವನದ ಬಗ್ಗೆ ಮಾತನಾಡಿದ್ದ ಡಾ. ಮಂಥರ್ ಗೌಡ ಅವರು ಶಾಸಕರಾಗಿ ಅಧಿಕಾರ ಹಿಡಿದಿದ್ದಾರೆ. ಇನ್ನಾದರೂ ಶತಮಾನೋತ್ಸವ ಭವನಕ್ಕೆ ಹಿಡಿದ ಗ್ರಹಣ ಬಿಡುತ್ತದೆಯೇ? ಎಂಬುದನ್ನು ಕಾದುನೋಡಬೇಕಿದೆ. - ವಿಜಯ್ ಹಾನಗಲ್