ಮುಳ್ಳೂರು, ಜ. ೭: ಕೊಡವ ಲ್ಯಾಂಡ್ ಹೋರಾಟವನ್ನು ವಿರೋಧಿ ಸುವ ಕುರಿತಾಗಿ ಶನಿವಾರಸಂತೆಯಲ್ಲಿ ಭಾನುವಾರ ವಿವಿಧ ಸಮುದಾಯದ ಮುಖಂಡರು ಪೂರ್ವಭಾವಿ ಸಭೆ ನಡೆಸಿದರು.

ಸಭೆಯಲ್ಲಿ ಮಾತನಾಡಿದ ಎಸ್.ಎಂ. ಚಂಗಪ್ಪ, ಇದರಿಂದ ಕೊಡಗಿನಲ್ಲಿರುವ ಇತರೆ ಸಮುದಾಯ ದವರಿಗೆ ಮಾನ್ಯತೆ ದೊರೆಯುವುದಿಲ್ಲ. ಈ ಎಲ್ಲಾ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯಲ್ಲಿರುವ ಇತರೆ ಜನಾಂಗ ದವರು ಎಚ್ಚೆತ್ತುಕೊಂಡು ಕೊಡವ ಲ್ಯಾಂಡ್ ಹೋರಾಟವನ್ನು ವಿರೋಧಿಸಬೇಕು. ಈ ನಿಟ್ಟಿನಲ್ಲಿ ಮುಂದಿನ ದಿನದಲ್ಲಿ ನಡೆಯುವ ಹೋರಾಟಕ್ಕೆ ಎಲ್ಲಾ ಸಮುದಾಯದ ವರು ಸಂಘಟನೆಯೊAದಿಗೆ ಕೈ ಜೋಡಿಸುವಂತೆ ಮನವಿ ಮಾಡಿದರು.

ಮುಂದಿನ ದಿನಗಳಲ್ಲಿ ಎಲ್ಲಾ ಜನಾಂಗದವರು ಒಟ್ಟಾಗಿ ಸೇರಿಕೊಂಡು ಕೊಡವ ಲ್ಯಾಂಡ್ ಹೋರಾಟ ವಿರೋಧಿಸಿ ಪ್ರತಿಭಟನೆ ಮಾಡುವುದು ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಕೊಡುವುದು, ಆಯಾಯಾ ಸಮುದಾಯದವರ ನೇತೃತ್ವದಲ್ಲಿ ಪ್ರಕರಣ ದಾಖಲಿಸುವುದು ಮುಂತಾದವುಗಳ ಬಗ್ಗೆ ಚರ್ಚಿಸಿ ಸಭೆಯಲ್ಲಿ ನಿರ್ಣಯಿಸಲಾಯಿತು.

ಸಭೆಯಲ್ಲಿ ಶುಂಠಿ ಭರತ್ ಕುಮಾರ್, ಡಿ.ಬಿ. ಧರ್ಮಪ್ಪ, ಎನ್.ಕೆ. ಅಪ್ಪಸ್ವಾಮಿ ಗೌಡ, ಎಸ್.ಎನ್.ರಘು, ಜಿ.ಎಂ.ಕಾAತರಾಜ್, ಬಿ.ಕೆ.ಚಂದ್ರು,

(ಮೊದಲ ಪುಟದಿಂದ)

ಟಿ.ಆರ್. ಪುರುಷೋತ್ತಮ್, ರಂಗಸ್ವಾಮಿ, ಎನ್.ಬಿ.ನಾಗಪ್ಪ, ಸಿ.ಜೆ.ಗಿರೀಶ್, ಆನಂದ್, ಶಿವಾನಂದ್, ಬಿ.ಎಸ್. ಮಂಜುನಾಥ್ ವಿವಿಧ ಜನಾಂಗದ ಪ್ರಮುಖರು ಪಾಲ್ಗೊಂಡಿದ್ದರು.

ಸಭೆಯಲ್ಲಿ ಹೋರಾಟ ಸಂಘಟನೆಯ ಸಂಚಾಲಕರಾಗಿ ಚಂದ್ರಕಾAತ್ ಅವರನ್ನು ಆಯ್ಕೆ ಮಾಡಲಾಯಿತು. ಸಹ ಸಂಚಾಲಕರಾಗಿ ವಿವಿಧ ಜನಾಂಗದಿAದ ೨೦ ಮಂದಿಯನ್ನು ನೇಮಿಸಲಾಯಿತು.