ಶನಿವಾರಸAತೆ, ಜ. ೮: ಸಮೀಪದ ಹಂಡ್ಲಿ ಗ್ರಾಮ ಪಂಚಾ ಯಿತಿ ವ್ಯಾಪ್ತಿಯ ಹಿಪ್ಪಲಿ ಗೇಟ್ನಿಂದ ಅಂಕನಹಳ್ಳಿ ಗ್ರಾಮದ ಕಡೆಗೆ ಹೋಗುವ ರಸ್ತೆಯಲ್ಲಿ ಸಂಪಿಗೆದಾಳು ಗ್ರಾಮದ ಬಳಿ ಪಿಕ್ಅಪ್ ವಾಹನದಲ್ಲಿ ೩ ಹಸುಗಳು ಹಾಗೂ ಒಂದು ಹೋರಿ ಕರುವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದುದನ್ನು ಶನಿವಾರಸಂತೆ ಪೊಲೀಸರು ಪತ್ತೆ ಹಚ್ಚಿ ಆರೋಪಿ ಗಳನ್ನು ಬಂಧಿಸಿ, ಗೋವುಗಳನ್ನು ರಕ್ಷಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಹೋಬಳಿಯ ಕೊಂಬೂರು ಗ್ರಾಮದ ಎ.ಮಹೇಶ್, ಸುಧಾಕರ್, ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಚಾಲಕ ದಯಾನಂದ್ ಕುಮಾರ್ ಹಾಗೂ ಮೈಸೂರು, ಕೆ.ಆರ್.ನಗರ ತಾಲೂಕಿನ ಸಾಲಿಗ್ರಾಮ ಹೋಬಳಿಯ ಕಾರ್ತಳು ಗ್ರಾಮದ ಕೆ.ಕೆ. ರವಿ ಅವರುಗಳು ರೂ. ೨೫ ಸಾವಿರ ಮೌಲ್ಯದ ಗೋವುಗಳನ್ನು ಯಾವುದೇ ಪರವಾನಗಿ ಇಲ್ಲದೇ ಪಿಕ್ಅಪ್ ವಾಹನದಲ್ಲಿ ಹಿಂಸಾತ್ಮಕವಾಗಿ ತುಂಬಿಸಿಕೊAಡು ಮಾಂಸಕ್ಕಾಗಿ ಕಸಾಯಿಖಾನೆಗೆ ಮಾರಾಟ ಮಾಡುವ ಉದ್ದೇಶದಿಂದ ಸಾಗಿಸುತ್ತಿರುವುದಾಗಿ ತಿಳಿದುಬಂದ ಮೇರೆಗೆ ಗುಪ್ತ ಕರ್ತವ್ಯದ ಪೊಲೀಸ್ ಸಿಬ್ಬಂದಿ ಧನಂಜಯ್ ಆಚಾರ್ ಶನಿವಾರಸಂತೆಗೆ ವರದಿ ಸಲ್ಲಿಸಿದರು.
ಶನಿವಾರಸಂತೆ ಪೊಲೀಸ್ ಠಾಣೆಯ ಪ್ರಭಾರ ವೃತ್ತ ನಿರೀಕ್ಷಕ ಚಂದ್ರಶೇಖರ್, ಎಎಸ್ಐ ಚಂದ್ರು, ಹೆಡ್ ಕಾನ್ಸಟೇಬಲ್ ಹನೀಫ್, ಪೊಲೀಸ್ ಸಿಬ್ಬಂದಿ ಧನಂಜಯ್ ಹಾಗೂ ಮೋಹನ್ ಸ್ಥಳಕ್ಕೆ ಧಾವಿಸಿ ಆರೋಪಿಗಳನ್ನು ಬಂಧಿಸಿ, ಗೋವುಗಳನ್ನು ವಶಪಡಿಸಿಕೊಂಡರು. ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಮಂಗಳವಾರ ರಕ್ಷಿಸಿದ ಗೋವುಗಳು ಮೈಸೂರಿನ ಪಿಂಜರ ಪೋಲ್ಗೆ ಕಳುಹಿಸುವುದಾಗಿ ಪ್ರಬಾರ ವೃತ್ತ ನಿರೀಕ್ಷಕ ಚಂದ್ರಶೇಖರ್ ತಿಳಿಸಿದ್ದಾರೆ.