ವೀರಾಜಪೇಟೆ, ಜ. ೮: ಮಹಿಳೆಯರ ಆರೋಗ್ಯದ ದೃಷ್ಠಿಯಿಂದ ಕೇಂದ್ರ ಸರ್ಕಾರ ಉಜ್ವಲ ಯೋಜನೆ ಅಡಿಯಲ್ಲಿ ಉಚಿತ ಅನಿಲ ಸಂಪರ್ಕ ಕಲ್ಪಿಸಿದ್ದು ಫಲಾನುಭವಿಗಳು ಉಚಿತ ಅಡುಗೆ ಅನಿಲ ಸಂಪರ್ಕ ಪಡೆದುಕೊಂಡು ಸಿಲಿಂಡರ್ ಮುಗಿದ ಬಳಿಕ ಸೌದೆಗೆ ಮೊರೆ ಹೋಗುತ್ತಿದ್ದಾರೆ. ಕನಿಷ್ಟ ದರಕ್ಕೆ ಮತ್ತೆ ಸಿಲಿಂಡರ್ ಪಡೆದುಕೊಂಡು ನಿಮ್ಮ ಆರೋಗ್ಯದ ಜೊತೆಗೆ ಯೋಜನೆಯನ್ನು ಯಶಸ್ವಿಗೊಳಿಸಿ ಎಂದು ಕೊಡಗು-ಮೈಸೂರು ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಕರೆ ನೀಡಿದರು.

ವೀರಾಜಪೇಟೆ ಪುರಭವನದಲ್ಲಿ ಉಜ್ವಲ ಯೋಜನೆಯ ಎರಡನೇ ಹಂತದ ಫಲಾನುಭವಿಗಳಿಗೆ ಅಡುಗೆ ಅನಿಲ ವಿತರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರು ಮಹಿಳೆಯರಿಗಾಗಿ ಉಜ್ವಲ ಯೋಜನೆಯನ್ನು ಪ್ರಾರಂಭಿಸಿ ಇಲ್ಲಿಯವರೆಗೆ ೯ ಕೋಟಿ ೬೦ ಲಕ್ಷ ಜನರಿಗೆ ಉಚಿತ ಗ್ಯಾಸ್ ವಿತರಣೆ ಮಾಡಿದ್ದಾರೆ. ಎರಡನೇ ಹಂತದಲ್ಲಿ ೭೫ ಲಕ್ಷ ಫಲಾನುಭವಿಗಳ ಗುರಿಯನ್ನು ದಾಟಿ ಮುನ್ನಡೆಯುತ್ತಿದ್ದೇವೆ. ಶೌಚಾಲಯಗಳನ್ನು ನಿರ್ಮಿಸುವ ಭರವಸೆಯನ್ನು ನೀಡಿದ ಫಲವಾಗಿ ಗ್ರಾಮಾಂತರ ಪ್ರದೇಶದಲ್ಲಿ ಸುಮಾರು ೧೧ ಕೋಟಿ ೭೨ ಲಕ್ಷದಷ್ಟು ಶೌಚಾಲಯ ನಿರ್ಮಿಸಲಾಗಿದೆ. ಜಲಜೀವನ್ ಮಿಷನ್, ಜನ್‌ಧನ್, ಆವಾಜ್ ಯೋಜನೆ ಸೇರಿದಂತೆ ಅನೇಕ ಯೋಜನೆಯನ್ನು ಜಾರಿಗೆ ತಂದು ಫಲಾನುಭವಿಗಳಿಗೆ ನೇರವಾಗಿ ಹಣ ಅವರ ಖಾತೆಗೆ ಜಮೆ ಆಗುವಂತೆ ಮಾಡಲಾಗಿದೆ. ಬಡವರ ಉದ್ದಾರ ಹಾಗೂ ದೇಶದ ಏಳಿಗೆಗಾಗಿ ಯಾವುದೇ ಫಲಾಪೇಕ್ಷೆ ಇಲ್ಲದೆ ಕೇಂದ್ರ ಯೋಜನೆಗಳು ಜಾರಿಯಾಗುತ್ತಿದೆ ಎಂದು ಹೇಳಿದರು.

ರಾಜ್ಯದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಶಾಸಕ ಪೊನ್ನಣ್ಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ರೂಪಿಸಬೇಕಾದರೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಜನತೆಯ ಹಿತದೃಷ್ಠಿಯನ್ನು ಮುಂದಿಟ್ಟುಕೊAಡು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಕೇಂದ್ರ ಸರ್ಕಾರದ ಉಜ್ವಲ ಯೋಜನೆ ಶ್ಲಾಘನೀಯ. ಇಂದು ಸರಿಸುಮಾರು ೯ ಕೋಟಿ ಜನರು ಯೋಜನೆಯ ಉಪಯೋಗ ವನ್ನು ಪಡೆದುಕೊಳ್ಳುತ್ತಿದ್ದಾರೆ. ಸೌದೆ ಬಳಸುವುದರಿಂದ ಆರೋಗ್ಯದ ಮೇಲಿನ ಪರಿಣಾಮ ವೈಜ್ಞಾನಿಕವಾ ಗಿಯೂ ನಿರೂಪಿಸಲ್ಪ ಟ್ಟಿದೆ. ಸರ್ಕಾರ ಅನ್ನಭಾಗ್ಯದ ಹೆಸರಿನಲ್ಲಿ ಹತ್ತು ಕೆ.ಜಿ. ಅಕ್ಕಿ ನೀಡುವ ಯೋಜನೆ ರೂಪಿಸಿದೆ. ಇದರಿಂದ ಜನರು ಕೆಲಸ ಕಾರ್ಯ ಗಳನ್ನು ಮಾಡದೆ ಸೋಮಾರಿಗಳಾ ಗುತ್ತಿದ್ದಾರೆ ಎಂಬ ಮಾತು ಸರಿಯಲ್ಲ. ಉಚಿತ ಯೋಜನೆಯಲ್ಲಿ ಸರ್ಕಾರ ನೀಡುವ ಸವಲತ್ತುಗಳು ಅವರ ದೈನಂದಿನ ಬದುಕಿನಲ್ಲಿ ಒಂದಿಷ್ಟು ಸಹಾಯವಾಗಲಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ ಮಾತನಾಡಿ, ದೇಶದ ಪ್ರಧಾನಿಗಳ ಕಲ್ಪನೆಯಂತೆ ಕುಡಿಯುವ ನೀರು, ನೈರ್ಮಲ್ಯ ನಿವಾರಣೆ, ಶೌಚಾಲಯ ನಿರ್ಮಾಣ, ಮುದ್ರಾ ಯೋಜನೆ ಸೇರಿದಂತೆ ಹಲವಾರು ಜನಪರ ಅಭಿವೃದ್ಧಿ ಯೋಜನೆಗಳು ಜಾರಿಗೆ ಬಂದಿದೆ. ಸರ್ಕಾರ ನೀಡುವ ಹಣ ಅಕ್ಕಿ ನೀಡುವ ಯೋಜನೆ ರೂಪಿಸಿದೆ. ಇದರಿಂದ ಜನರು ಕೆಲಸ ಕಾರ್ಯ ಗಳನ್ನು ಮಾಡದೆ ಸೋಮಾರಿಗಳಾ ಗುತ್ತಿದ್ದಾರೆ ಎಂಬ ಮಾತು ಸರಿಯಲ್ಲ. ಉಚಿತ ಯೋಜನೆಯಲ್ಲಿ ಸರ್ಕಾರ ನೀಡುವ ಸವಲತ್ತುಗಳು ಅವರ ದೈನಂದಿನ ಬದುಕಿನಲ್ಲಿ ಒಂದಿಷ್ಟು ಸಹಾಯವಾಗಲಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ ಮಾತನಾಡಿ, ದೇಶದ ಪ್ರಧಾನಿಗಳ ಕಲ್ಪನೆಯಂತೆ ಕುಡಿಯುವ ನೀರು, ನೈರ್ಮಲ್ಯ ನಿವಾರಣೆ, ಶೌಚಾಲಯ ನಿರ್ಮಾಣ, ಮುದ್ರಾ ಯೋಜನೆ ಸೇರಿದಂತೆ ಹಲವಾರು ಜನಪರ ಅಭಿವೃದ್ಧಿ ಯೋಜನೆಗಳು ಜಾರಿಗೆ ಬಂದಿದೆ. ಸರ್ಕಾರ ನೀಡುವ ಹಣ ದುರುಪಯೋಗ ಆಗದಂತೆ ನೇರವಾಗಿ ಫಲಾನುಭವಿಗಳ ಖಾತೆಗೆ ಜಮೆ ಯಾಗುತ್ತದೆ. ಬಡವರಿಗೆ ಅನುಕೂಲ ವಾಗುವಂತೆ ಜನೌಷಧಿ ಕೆಂದ್ರಗಳನ್ನು ಪ್ರಾರಂಭಿಸಿ ಕಡಿಮೆ ದರದಲ್ಲಿ ಔಷಧಿ ಗಳು ಸಿಗುವಂತೆ ಮಾಡಿದ್ದಾರೆ. ಇವೆಲ್ಲ ದರ ಉಪಯೋಗ ಪಡೆದುಕೊಂಡು ಸುಖಿ ಜೀವನ ನಡೆಸುವಂತೆ ಹೇಳಿ ದರು. ವೇದಿಕೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ಚಂದ್ರಕುಮಾರ್, ಆಹಾರ ನಿರೀಕ್ಷಕಿ ಸೀನಾಕುಮಾರಿ, ಉದ್ಯಮಿ ವಿಷ್ಣು, ಪುರಸಭಾ ಸದಸ್ಯರು ಉಪಸ್ಥಿತರಿದ್ದರು. ನಗರ ಕಾಂಗ್ರೆಸ್ ಕಾರ್ಯದರ್ಶಿ ಶಶಿ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.