ಮಡಿಕೇರಿ, ಜ. ೬: ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ಶುಂಠಿ ಬೆಳೆಗಾಗಿ ಅರಣ್ಯ ಇಲಾಖೆಯ ಅನುಮತಿ ಪಡೆಯದೆ ಮರಗಳನ್ನು ಹನನ ಮಾಡಲಾಗುತ್ತಿದ್ದು, ಇಂತಹ ಕೃತ್ಯಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳುವುದಾಗಿ ಮಡಿಕೇರಿ ಉಪವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ಎಚ್ಚರಿಸಿದ್ದಾರೆ.
ಶಕ್ತಿ ದಿನಪತ್ರಿಕೆಯಲ್ಲಿ ಈ ಕುರಿತು ವರದಿ ಪ್ರಕಟಗೊಂಡ ಬೆನ್ನಲ್ಲೆ ಪ್ರಕಟಣೆ ಬಿಡುಗಡೆಗೊಳಿಸಿರುವ ಅವರು, ಮರಹನನ ವಿಚಾರ ಇಲಾಖೆಯ ಗಮನಕ್ಕೆ ಬಂದಿದ್ದು, ಕೃತ್ಯ ಎಸಗುತ್ತಿರುವವರ ಮೇಲೆ ಅರಣ್ಯ ಮೊಕದ್ದಮೆ ದಾಖಲಾಗುತ್ತಿರುತ್ತದೆ. ಯಾವುದೇ ಉದ್ದೇಶಕ್ಕಾದರು ಮರಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆ ಅನುಮತಿ ಕಡ್ಡಾಯವಾಗಿರುತ್ತದೆ.
(ಮೊದಲ ಪುಟದಿಂದ) ಕಾನೂನಾತ್ಮಕವಾಗಿ ಅನುಮತಿ ಪಡೆ ಯದೆ ಮರಗಳನ್ನು ತೆರವುಗೊಳಿಸಿದ್ದಲ್ಲಿ ಕರ್ನಾಟಕ ಅರಣ್ಯ ಕಾಯಿದೆ ೧೯೬೩ ಹಾಗೂ ಕರ್ನಾಟಕ ವೃಕ್ಷ ಸಂರಕ್ಷಣಾ ಕಾಯಿದೆ ೧೯೫೭ರ ಉಲ್ಲಂಘನೆ ಆಗುವುದರಿಂದ ಜಾಗದ ಮಾಲೀಕರು ಮತ್ತು ಜಾಗವನ್ನು ಗುತ್ತಿಗೆ ಪಡೆದವರು ಹಾಗೂ ಕೃತ್ಯವನ್ನು ಎಸಗಿದವರ ಮೇಲೆ ಪ್ರಕರಣ ದಾಖಲಾಗಿ ಆರೋಪಿತರು ನ್ಯಾಯಾಂಗ ಬಂಧನಕ್ಕೆ ಒಳಪಡಬೇಕಾ ಗಿರುತ್ತದೆ.
ಕೃತ್ಯಕ್ಕೆ ಬಳಸಿದ ವಾಹನ ಮತ್ತು ಯಂತ್ರೋಪಕರಣಗಳನ್ನು ಅಮಾನತ್ತುಪಡಿಸಿಕೊಳ್ಳಲಾಗುತ್ತದೆ ಮತ್ತು ಆರೋಪಿತರು ಮರಗಳ ಮೌಲ್ಯ ಹಾಗೂ ಪರಿಸರ ನಾಶಮಾಡಿದಕ್ಕೆ ದಂಡ ತೆರಬೇಕಾಗಿರುತ್ತದೆ. ತಪ್ಪಿದ್ದಲ್ಲಿ ಆರೋಪಿತರ ಮೇಲೆ ದೋಷರೋ ಪಣಾ ಪಟ್ಟಿಯನ್ನು ತಯಾರಿಸಿ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ಎಚ್ಚರಿಸಿದ್ದು, ಸಾರ್ವಜನಿಕರು ಯಾವುದೇ ಉದ್ದೇಶಕ್ಕೆ ಮರ ತೆರವುಗೊಳಿಸಲು ಅರಣ್ಯ ಇಲಾಖೆಯ ಪೂರ್ವಾನುಮತಿ ಪಡೆದು ಪರಿಸರ ಸಂರಕ್ಷಣೆ ಮಾಡುವಲ್ಲಿ ಇಲಾಖೆ ಯೊಂದಿಗೆ ಕೈ ಜೋಡಿಸಬೇಕಾಗಿ ಕೋರಿದ್ದಾರೆ.