ಸುಂಟಿಕೊಪ್ಪ: ಮನೆಮನೆಗೆ ಪವಿತ್ರ ಮಂತ್ರಾಕ್ಷತೆ ವಿತರಣಾ ಅಭಿಯಾನದ ಅಂಗವಾಗಿ ಅಯೋಧ್ಯೆಯ ಶ್ರೀ ರಾಮ ಮಂದಿರದಿAದ ಬಂದಿರುವ ಪವಿತ್ರ ಮಂತ್ರಾಕ್ಷತೆಯನ್ನು ಪಟ್ಟಣದ ಹಿಂದೂ ಮನೆಗಳಿಗೆ ವಿತರಿಸಲಾಯಿತು.

ಗ್ರಾಮದ ಮನೆಗಳಿಗೆ ತೆರಳಿ ಕುಟುಂಬ ಸದಸ್ಯರಿಗೆ ಪವಿತ್ರ ಮಂತ್ರಾಕ್ಷತೆಯನ್ನು ವಿತರಿಸಲಾಯಿತು. ಇದೇ ವೇಳೆ ಆರ್.ಎಸ್.ಎಸ್.ನ ರಾಕೇಶ್, ವೇಲು ಮುರುಗನ್, ಸಂಘ ಪರಿವಾರದ ಪೃಥ್ವಿರಾಜ್, ಮನು ಅಚ್ಚಮಯ್ಯ, ವಿಜಯ್, ದರ್ಶನ್, ತ್ರಿಜಲ್, ಸಂತೋಷ್, ಬಿಜೆಪಿ ಮುಖಂಡರಾದ ಸುದೀಶ್, ಬಿ.ಕೆ. ಪ್ರಶಾಂತ್, ಮನು ಅಚ್ಚಮಯ್ಯ, ಲೀಲಾವತಿ, ಸಂದೀಪ್, ಪಿ.ಆರ್. ಸುನಿಲ್ ಕುಮಾರ್ ಇತರರು ಅಭಿಯಾನದಲ್ಲಿ ಪಾಲ್ಗೊಂಡಿದ್ದರು.ವೀರಾಜಪೇಟೆ: ಅಯೋಧ್ಯೆ ಮಂತ್ರಾಕ್ಷತೆ, ಶ್ರೀ ರಾಮನ ಭಾವಚಿತ್ರ ಹಾಗೂ ಕರಪತ್ರಿಕೆಯನ್ನು ವೀರಾಜಪೇಟೆ ಐಮಂಗಲ ಗ್ರಾಮದ ಭಾ.ಜ.ಪ. ಬೂತ್ ಸಮಿತಿಯ ಸದಸ್ಯರು ನಿನ್ನೆ ವಿತರಿಸಿದರು.

ಗ್ರಾಮದ ಶ್ರೀ ಭದ್ರಕಾಳಿ ದೇಗುಲದಲ್ಲಿ ೧೫ ದಿನಗಳ ಕಾಲ ಪೂಜೆ ಸಲ್ಲಿಕೆಯಾದ ನಂತರದಲ್ಲಿ ಗ್ರಾಮದ ಮನೆಮನೆಗೆ ಮಂತಾಕ್ಷತೆಯನ್ನು ನೀಡಲಾಯಿತು.

ಈ ಸಂದರ್ಭ ರಾಷ್ಟಿçÃಯ ಸ್ವಯಂ ಸೇವಕ ಸಂಘದ ಪ್ರಮುಖರಾದ ಮೇದಪ್ಪ, ಭಾ.ಜ.ಪ. ಬೂತ್ ಸಮಿತಿಯ ಅಧ್ಯಕ್ಷ ಮೇಕತಂಡ ರಮೇಶ್, ಸದಸ್ಯರಾದ ಬೊಳ್ಳಚಂಡ ಪ್ರಕಾಶ್, ಸುರೇಶ್, ಪ್ರಜ್ವಲ್, ಕುಂಡ್ರAಡ ಪಾಪು ಮತ್ತು ಮುದ್ದಯ್ಯ ಹಾಜರಿದ್ದರು.ಮುಳ್ಳೂರು: ಅಯೋಧ್ಯೆಯಲ್ಲಿ ತಾ. ೨೨ ರಂದು ಶ್ರೀ ರಾಮದೇವರ ಪ್ರಾಣ ಪ್ರತಿಷ್ಠಾಪನೆಯು ನೆರವೇರಲಿರುವ ಹಿನ್ನೆಲೆ ಅಯೋಧ್ಯೆಯಿಂದ ಪೂಜಿಸಲ್ಪಟ್ಟ ಪವಿತ್ರ ರಾಮ ಮಂತ್ರಾಕ್ಷತೆಯನ್ನು ಶನಿವಾರಸಂತೆ ವ್ಯಾಪ್ತಿಯಲ್ಲಿ ಮನೆಮನೆಗೆ ವಿತರಣೆ ಮಾಡಲಾಗುತ್ತಿದೆ.

ಕಾರ್ಯಕರ್ತರು ಮನೆಮನೆಗೆ ವಿತರಿಸಿದ ರಾಮ ಮಂತ್ರಾಕ್ಷತೆಯನ್ನು ಅಯೋಧ್ಯೆಯಲ್ಲಿ ನಡೆಯುವ ಶ್ರೀರಾಮ ದೇವರ ಪ್ರಾಣ ಪ್ರತಿಷ್ಠಾಪನೆಯ ದಿನದಂದು ಪಾಯಸ ಮಾಡಿ ಕುಟುಂಬದ ಸದಸ್ಯರು ಸ್ವೀಕರಿಸಬೇಕು ಮತ್ತು ಅಂದು ಮನೆಯಲ್ಲಿ ಕನಿಷ್ಟ ಐದು ದೀಪಗಳನ್ನು ಉತ್ತರ ದಿಕ್ಕಿಗೆ ಮುಖ ಮಾಡಿ ಹಚ್ಚಬೇಕು. ಭಕ್ತಾದಿಗಳು ಗ್ರಾಮ ಮತ್ತು ಅಕ್ಕಪಕ್ಕದಲ್ಲಿರುವ ದೇವಸ್ಥಾನಗಳಲ್ಲಿ ವಿಶೇಷ ಪೂಜೆಯಲ್ಲಿ ಭಾಗಿಯಾಗುವಂತೆ ಮಂತ್ರಾಕ್ಷತೆಯನ್ನು ವಿತರಣೆ ಮಾಡಿದ ಕಾರ್ಯಕರ್ತರು ವಿವರಿಸಿದರು.

ಮಂತ್ರಾಕ್ಷತೆಯನ್ನು ಮನೆಮನೆಗೆ ವಿತರಣೆ ಮಾಡುವ ಕಾರ್ಯದಲ್ಲಿ ಸಮಿತಿ ಕಾರ್ಯಕರ್ತರಾದ ಹೆಚ್.ಜಿ. ಆನಂದ್, ಕೆ.ಕೆ. ಕುಮಾರ್, ಪ್ರಶಾಂತ್, ಪುಷ್ಪ ಸುನಿಲ್, ಪ್ರಸಾದ್ ಕಳಲೆ, ಪ್ರಕಾಶ್, ಸತೀಶ್ ಮುಂತಾದವರು ಪಾಲ್ಗೊಂಡಿದ್ದಾರೆ.ವೀರಾಜಪೇಟೆ: ವೀರಾಜಪೇಟೆ ಮಗ್ಗುಲ ಗ್ರಾಮದ ಶಕ್ತಿ ಕೇಂದ್ರದ ಪದಾಧಿಕಾರಿಗಳು ಮನೆಮನೆಗೆ ತೆರಳಿ ಅಯೋಧ್ಯೆ ಮಂತ್ರಾಕ್ಷತೆಯನ್ನು ನಿನ್ನೆ ವಿತರಣೆ ಮಾಡಿದರು.

ಈ ಸಂದರ್ಭ ಶಕ್ತಿ ಕೇಂದ್ರದ ಪುಲಿಯಂಡ ಪೊನ್ನಣ್ಣ, ಟಿ.ಡಿ. ವಾಸು, ಚೋಕಂಡ ಕಿರಣ್, ಪುಲಿಯಂಡ ದೀನು ಮತ್ತಿತರರು ಹಾಜರಿದ್ದರು.