ಸೋಮವಾರಪೇಟೆ, ಜ. ೭: ಸಂಘಟನಾತ್ಮಕ ಆಟದೊಂದಿಗೆ ಸಿಕ್ಕ ಅವಕಾಶಗಳನ್ನು ಯಶಸ್ವಿಯಾಗಿ ಬಳಸಿಕೊಂಡ ಚಂಡೀಘಡ ಮತ್ತು ಜಾರ್ಖಂಡ್ ತಂಡಗಳು ರಾಷ್ಟಿçÃಯ ಮಟ್ಟದ ೧೭ರ ವಯೋಮಾನದ ಶಾಲಾ ಬಾಲಕಿಯರ ಹಾಕಿ ಪಂದ್ಯಾಟದ ಫೈನಲ್ ಪ್ರವೇಶಿಸಿವೆ.
ಅಂತಿಮ ಕ್ಷಣದವರೆಗೂ ಸಮಬಲದ ಹೋರಾಟ ನೀಡುವಲ್ಲಿ ಸಫಲತೆ ಕಾಣದ ಮಧ್ಯಪ್ರದೇಶ ಮತ್ತು ಮಣಿಪುರ ತಂಡಗಳು ಸೆಮಿಫೈನಲ್ನಲ್ಲಿ ಸೋಲನುಭವಿಸಿ ಮೂರನೇ ಸ್ಥಾನಕ್ಕೆ ಸೆಣೆಸಾಟ ನಡೆಸಲಿವೆ.
ಪ್ರೇಕ್ಷಕರಿಂದ ಕಿಕ್ಕಿರಿದು ತುಂಬಿದ್ದ ಗ್ಯಾಲರಿ, ಮೈದಾನದ ಸುತ್ತಲೂ ತುಂಬಿದ್ದ ಕ್ರೀಡಾಪ್ರೇಮಿಗಳ ಚಪ್ಪಾಳೆಯ ಪ್ರೋತ್ಸಾಹದೊಂದಿಗೆ ಅಮೋಘ ಆಟದ ಪ್ರದರ್ಶನ ನೀಡಿದ ಚಂಡೀಘಡ ಮತ್ತು ಜಾರ್ಖಂಡ್ ತಂಡಗಳು ಫೈನಲ್ ಪ್ರವೇಶಿಸಿದ್ದು, ತಾ. ೮ ರಂದು (ಇಂದು) ಪೊನ್ನಂಪೇಟೆ ಯಲ್ಲಿ ಮುಖಾಮುಖಿಯಾಗಲಿವೆ.
ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಶಿಕ್ಷಣ ಮತ್ತು ಸಾರಕ್ಷತಾ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ ೧೭ರ ವಯೋಮಾನದ ಶಾಲಾ ಬಾಲಕಿಯರ ರಾಷ್ಟçಮಟ್ಟದ ಹಾಕಿ ಪಂದ್ಯಾವಳಿಯ ಸೆಮಿಫೈನಲ್ ಪಂದ್ಯಗಳು ಇಂದು ಇಲ್ಲಿನ ಟರ್ಫ್ ಮೈದಾನದಲ್ಲಿ ನಡೆಯಿತು.
ಸೆಮಿಫೈನಲ್ ಪಂದ್ಯಾಟಕ್ಕೆ ಶಾಸಕ ಡಾ. ಮಂಥರ್ ಗೌಡ ಅವರು ಚಾಲನೆ ನೀಡಿದರು. ನಂತರ ಮಾತನಾಡಿ, ಶಾಲಾ ಹಂತದಲ್ಲಿಯೇ ಶಿಕ್ಷಣ ದೊಂದಿಗೆ ಕ್ರೀಡೆಗೂ ಒತ್ತು ನೀಡಬೇಕು ಎಂದರು.
ಮೊದಲ ಸೆಮಿಫೈನಲ್ನಲ್ಲಿ ಜಾರ್ಖಂಡ್ ತಂಡವು ಮಧ್ಯಪ್ರದೇಶ ತಂಡದ ವಿರುದ್ಧ ೭-೦ ಗೋಲುಗಳ ಅಂತರದಿAದ ಭರ್ಜರಿ ಜಯ ದಾಖಲಿಸಿತು. ಆರಂಭದಿAದಲೂ ಚುರುಕಿನ ಆಟಕ್ಕೆ ಒತ್ತು ನೀಡಿದ ಜಾರ್ಖಂಡ್ ತಂಡದ ಬಾಲಕಿಯರು, ಎದುರಾಳಿ ತಂಡಕ್ಕೆ ಅವಕಾಶವನ್ನೇ ನೀಡದೇ ೭ ಗೋಲುಗಳನ್ನು ದಾಖಲಿಸಿದರು.
ಪಂದ್ಯದ ಪ್ರಥಮಾರ್ಧದಲ್ಲಿ ೪-೦ ಗೋಲುಗಳಿಂದ ಮುಂದಿದ್ದ ಜಾರ್ಖಂಡ್ ತಂಡವು, ದ್ವಿತೀಯಾರ್ಧ ದಲ್ಲಿ ಹೆಚ್ಚುವರಿಯಾಗಿ ೩ ಗೋಲು ಗಳನ್ನು ದಾಖಲಿಸುವ ಮೂಲಕ ೭-೦ ಗೋಲುಗಳ ಅಂತರದಿAದ ವಿಜಯದ ನಗೆ ಬೀರಿತು.
ಜಾರ್ಖಂಡ್ ತಂಡದ ಪರ ರೋಶ್ನಿ ಹಾಗೂ ಸುಶ್ಮಿತ ಲಾಕ್ರ ತಲಾ ೨, ಅನುಪ್ರಿಯ, ಜಮುನ, ಲೆಯೊನಿ ಹೆಮ್ರಂ ತಲಾ ಒಂದೊAದು ಗೋಲು ದಾಖಲಿಸಿದರು. ಸಿಕ್ಕ ಒಂದು ಪೆನಾಲ್ಟಿ ಕಾರ್ನರ್ನ್ನು ಗೋಲಾಗಿ ಪರಿವರ್ತಿಸು ವಲ್ಲಿಯೂ ತಂಡ ಯಶಕಂಡಿತು. ಉಳಿದಂತೆ ೬ ಫೀಲ್ಡ್ ಗೋಲುಗಳು ದಾಖಲಾದವು.
ಮಣಿಪುರ ಮತ್ತು ಚಂಡೀಘಡ ತಂಡಗಳ ನಡುವೆ ನಡೆದ ೨ನೇ ಸೆಮಿಫೈನಲ್ನ ಆರಂಭದಲ್ಲಿಯೇ ಚುರುಕಿನ ಆಟಕ್ಕೆ ಒತ್ತು ನೀಡಿದ ಮಣಿಪುರ ತಂಡ, ನಂತರ ತನ್ನ ತಪ್ಪುಗಳ ಮೂಲಕವೇ ಸೋಲನುಭವಿಸಿತು.
ಸಿಕ್ಕಿದ ೮ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಕೈಚೆಲ್ಲಿದ ತಂಡ, ೨ ಫೀಲ್ಡ್ ಗೋಲುಗಳನ್ನು ಗಳಿಸಲಷ್ಟೇ ಶಕ್ತವಾಯಿತು. ಆದರೆ ಸಿಕ್ಕಿದ ಎಲ್ಲಾ ಅವಕಾಶಗಳನ್ನು ಬಳಸಿಕೊಂಡ ಚಂಡೀಘಡ ತಂಡ ೪ ಗೋಲುಗಳನ್ನು ಬಾರಿಸಿತು. ತಂಡದ ತಮನ್ನಾ ಭರ್ಜರಿ ಆಟ ಪ್ರದರ್ಶಿಸುವ ಮೂಲಕ ಹ್ಯಾಟ್ರಿಕ್ ಸಾಧನೆಯೊಂದಿಗೆ ೪ ಗೋಲುಗಳನ್ನು ದಾಖಲಿಸಿದಳು. ಆ ಮೂಲಕ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರ್ತಿಯೆಂಬ ಹೆಗ್ಗಳಿಕೆಗೂ ಪಾತ್ರಳಾದಳು.
ಮಣಿಪುರ ತಂಡದ ಪರವಾಗಿ ಲೈಶ್ರಮ್ ಕರುವಾ ಹಾಗೂ ಹೈದ್ರೋನ್ ತಲಾ ಒಂದು ಗೋಲು ದಾಖಲಿಸಿದರೆ, ಚಂಡೀಘಡದ ಫಾರ್ವರ್ಡ್ ಆಟಗಾರ್ತಿ ತಮನ್ನಾ ೪ ಗೋಲುಗಳನ್ನು ಬಾರಿಸುವ ಮೂಲಕ ತಂಡಕ್ಕೆ ಜಯ ತಂದುಕೊಟ್ಟಳು. ಆ ಮೂಲಕ ತಂಡವನ್ನು ಫೈನಲ್ ಹಂತಕ್ಕೆ ಕೊಂಡೊಯ್ಯುವಲ್ಲಿ ಮಹತ್ವದ ಪಾತ್ರ ವಹಿಸಿದಳು.