ಕುಶಾಲನಗರ, ಜ. ೫: ಕಿಡಿಗೇಡಿಗಳಿಂದ ಕೋಳಿಗಳ ಮಾರಣ ಹೋಮ ನಡೆದಿರುವ ಘಟನೆ ಸುಂಟಿಕೊಪ್ಪ ಹೋಬಳಿ ಕಾನ್‌ಬೈಲ್ ಪಂಚಾಯಿತಿ ವ್ಯಾಪ್ತಿಯ ಮಂಜಿಕೆರೆ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ನಿವಾಸಿ ಲೋಕನಾಥ್ ಮತ್ತು ರುಕ್ಮಿಣಿ ದಂಪತಿಗೆ ಸೇರಿದ ಸುಮಾರು ೫ ಸಾವಿರ ಬೆಲೆಯ ಆರು ಹುಂಜ ಕೋಳಿಗಳನ್ನು ಮನೆಯವರು ಹೊರಗೆ ತೆರಳಿದ್ದ ಸಂದರ್ಭ ಗೂಡಿನಿಂದ ಹೊರ ತೆಗೆದು ಕಲ್ಲಿನಿಂದ ಜಜ್ಜಿ ಕೊಲ್ಲಲಾಗಿದೆ.

ಈ ಬಗ್ಗೆ ಪೊಲೀಸರಿಗೆ ದೂರು ನೀಡುವುದಾಗಿ ಲೋಕನಾಥ್ ದಂಪತಿ ‘ಶಕ್ತಿ’ಗೆ ತಿಳಿಸಿದ್ದಾರೆ.

-ಸಿಂಚು