ಮಡಿಕೇರಿ, ಜ. ೪ : ಭಾರತದ ಪ್ರಾಚೀನ ಪರಂಪರೆಯ ಧರ್ಮದಂಡ ಸೆಂಗೋಲ್ ಅನ್ನು ದೆಹಲಿಯಲ್ಲಿ ನೂತನ ಸಂಸತ್ ಭವನ ಉದ್ಘಾಟನೆ ಸಂದರ್ಭ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಮರ್ಪಣೆ ಮಾಡಿದ ಸಂತ ಜ್ಞಾನಸಂಬAಧರ್ ತಲಕಾವೇರಿ ಸನ್ನಿಧಿಯಲ್ಲಿ ತಂಗಿದ್ದಾರೆ. ತಮಿಳುನಾಡಿನ ಕಾವೇರಿ ತಟ ಕುಂಭಕೋಣA ನಾಗರಕೋವಿ ಪೀಠಾಧಿಪತಿ ಆಗಿರುವ ಇವರು ತಮಿಳುನಾಡಿನ ಸುಮಾರು ೨೭ ಭವ್ಯ ಶಿವ ದೇವಾಲಯಗಳ ಧರ್ಮಪುರಂ ಅಧೀನ ಮಠಾಧಿಪತಿಗಳು.
ವಾರದಿಂದ ಪೂಜ್ಯಶ್ರೀಗಳು ತಲಕಾವೇರಿಗೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಪೂಜೆ ಹಾಗೂ ಕೈಲಾಸ ಆಶ್ರಮದಲ್ಲಿ ಧ್ಯಾನದೊಂದಿಗೆ ಹೋಮ ಹವನ ಸಹಿತ ಗೋಪೂಜೆ ಕೈಗೊಂಡಿದ್ದಾರೆ. ನಿತ್ಯ ಮುಂಜಾನೆ ತೀರ್ಥಸ್ನಾನ, ಭಗಂಡೇಶ್ವರನ ದರ್ಶನ, ಪೂಜೆ ಧ್ಯಾನಗಳೊಂದಿಗೆ ಹೆಚ್ಚಿನ ಸಮಯವನ್ನು ಮೌನದಲ್ಲಿ ಕಳೆಯುತ್ತಿದ್ದಾರೆ. ಇಂದು "ಶಕ್ತಿ" ಸಂದರ್ಶನದಲ್ಲಿ ಅವರು ದೇಶದ ನೂತನ ಸಂಸತ್ ಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾಚೀನ ಕಾಲದ ಧರ್ಮದಂಡ ಸೆಂಗೋಲ್ ಅನ್ನು ಲೋಕಸಭಾ ಅಧ್ಯಕ್ಷರ ಪೀಠದ ಬಳಿ ಸ್ಥಾಪಿಸಿದ ಕ್ಷಣವನ್ನು ನೆನಪು ಮಾಡಿಕೊಂಡರು. ಚಿನ್ನ ಹಾಗೂ ಬೆಳ್ಳಿಯಿಂದ ತಯಾರಿಸಲ್ಪಟ್ಟಿರುವ ಧರ್ಮದಂಡ ಸೆಂಗೋಲ್ ವಿಜಯದ ಸಂಕೇತ. ಇದು ಚೋಳರ ಆಳ್ವಿಕೆಯಲ್ಲಿ
(ಮೊದಲ ಪುಟದಿಂದ) ಬಳಸುತ್ತಿದ್ದ ದಂq Àವಾಗಿದ್ದು, ಬ್ರಿಟೀಷರು ಇದನ್ನು ಧರ್ಮಪುರಂ ಮಠಕ್ಕೆ ನೀಡಿದ್ದರು. ೧೯೪೭, ಆಗಸ್ಟ್ ೧೪ರಂದು ಭಾರತಕ್ಕೆ ಸ್ವಾತಂತ್ರö್ಯ ದೊರೆಯುವ ಸಂದರ್ಭ ದಲ್ಲಿ, ಬ್ರಿಟೀಷರು ಈ ದಂಡವನ್ನು, ಇದೇ ಮಠಾಧೀಶರ ಮೂಲಕ ಪ್ರಥಮ ಪ್ರಧಾನಿ ಪಂಡಿತ್ ಜವಾಹರ್ಲಾಲ್
ನೆಹರು ಅವರಿಗೆ ಹಸ್ತಾಂತರಿಸಿದರು. ೭೫ ವರುಷ ತೆರೆಮರೆಯಲ್ಲಿ ಉಳಿದಿದ್ದ ಸೆಂಗೋಲನ್ನು ಬಿ.ಜೆ.ಪಿ. ಸರಕಾರ ಇದೀಗ ಸಂಸತ್ ಭವನದಲ್ಲಿ ಸಭಾಧ್ಯಕ್ಷರ ಪೋಡಿಯಂ ಬದಿಯಲ್ಲಿ ಸ್ಥಾಪಿಸಿದೆ. ಧರ್ಮಪುರಂ ಅಧೀನ ಇಪ್ಪತ್ತು ಮಠಾಧೀಶರ ಸಮ್ಮುಖದಲ್ಲಿ ಸೆಂಗೋಲ್ ಅನ್ನು ಪ್ರಧಾನಿ ಮೋದಿ ಅವರಿಗೆ ಹಸ್ತಾಂತರಿಸಲಾಗಿತ್ತು.
ಪ್ರಸ್ತುತ ತಾವು ತಮಿಳುನಾಡು ಕುಂಭಕೋಣA ಆಶ್ರಯದ ಬಳಿಯೇ ಹರಿಯುವ ಕಾವೇರಿ ಮಾತೆಯ ಉಗಮಸ್ಥಾನ ತಲಕಾವೇರಿಯ ಮೂಲ ಸನ್ನಿಧಿಯಲ್ಲಿ ದರ್ಶನ ಪಡೆಯಲು ಬಂದಿರುವದಾಗಿ ನುಡಿದರು.
ಅಗಸ್ತö್ಯರು ತಪಗೈದ ಪುಣ್ಯಭೂಮಿ ತಲಕಾವೇರಿಯಲ್ಲಿ ಜನವರಿ ೧೦ರವರೆಗೆ ಇರುವುದಾಗಿ ಹೇಳಿದರು. ಈ ವೇಳೆ ಶ್ರೀಗಳು ಆರು ದಶಕಗಳಿಗೂ ಸುದೀರ್ಘ ಮುನ್ನಲೆ ಕಂಡಿರುವ ಶಕ್ತಿ ಪತ್ರಿಕೆಯನ್ನು ಖುದ್ದು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಕೊಡಗಿನಲ್ಲಿ ಶ್ರೀಮಠದ ಚಟುವಟಿಕೆಯೊಂದಿಗೆ ಭವಿಷ್ಯದಲ್ಲಿ ವೇದ ಪಾಠಶಾಲೆ ಆರಂಭಿಸಲು
ಆಶಯ ಹೊಂದಿರುವ ಇಂಗಿತವನ್ನು ಸ್ವಾಮೀಜಿ ವ್ಯಕ್ತಪಡಿಸಿದರು. ಈ ಕುರಿತು ಇಲ್ಲಿನ ಭಕ್ತವೃಂದದ ಬೇಡಿಕೆ ಇದೆ ಎಂದರು.
ಮಠಾಧೀಶರು ಬಂದAದಿ ನಿಂದ, ಮಠದ ವತಿಯಿಂದ ತಲಕಾವೇರಿಯ ದೇವಾಲಯ ಸಿಬ್ಬಂದಿ, ರಕ್ಷಣಾ ಸಿಬ್ಬಂದಿ ಹಾಗೂ ಎಲ್ಲರಿಗೂ ಅನ್ನದಾನ ನಡೆಯುತ್ತಿದೆ.
ವರದಿ : ಶ್ರೀಸುತ