ಕೂಡಿಗೆ, ಡಿ. ೪: ಹಾರಂಗಿ ಮುಖ್ಯ ನಾಲೆ ಅಭಿವೃದ್ಧಿಗೆ ಪೂರಕವಾಗಿ ಈಗಾ ಗಲೇ ಕಾವೇರಿ ನೀರಾವರಿ ನಿಗಮದ ಮೂಲಕ ೪೯ ಕೋಟಿ ವೆಚ್ಚದಲ್ಲಿ ಹಾರಂ ಗಿಯ ಮುಖ್ಯ ನಾಲೆಯ ಒಂದನೇ ತೂಬಿನಿಂದ ೬ ನೆಯ ತೂಬಿನವರೆಗೆ ದುರಸ್ತಿ ಕಾಮಗಾರಿ ಆರಂಭಗೊAಡಿರುವ ಹಿನ್ನೆಲೆಯಲ್ಲಿ ನಾಲೆಗೆ ಹೊಂದಿಕೊAಡಿರುವ ಮತ್ತು ಮುಖ್ಯ ನಾಲೆಗೆ ಬೀಳುವ ಹಂತದಲ್ಲಿರುವ ಮರಗಳು ಸೇರಿದಂತೆ ನಾಲೆಯ ಎರಡೂ ಕಡೆಗಳಿಂದ ನಾಲೆ ಕಟ್ಟಡದ ಒಳಗೆ ಬೇರು ಬಿಟ್ಟಿರುವ ಕಾಡು ಜಾತಿಯ ಮರಗಳ ತೆರವಿಗೆ ಅರಣ್ಯ ಇಲಾಖೆ ಆದೇಶ ಹೊರಡಿಸಿದೆ. ಅದರಂತೆ ೫೦೭ ಮರಗಳನ್ನು ಅರಣ್ಯ ಇಲಾಖೆಯ ಮೂಲಕ ತೆರವುಗೊಳಿಸಿ ಅವುಗಳನ್ನು ಮರಗಳ ಸಂಗ್ರಹ ಕೇಂದ್ರಕ್ಕೆ ರವಾನಿಸುವ ಕಾರ್ಯ ಆರಂಭಗೊAಡಿದೆ.