ಮಡಿಕೇರಿ, ಜ. ೪: ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಮಲ ಹೊರುವ ಅನಿಷ್ಠ ಪದ್ಧತಿಯನ್ನು ಘನ ನ್ಯಾಯಾಲಯ ಮತ್ತು ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ “ಖಿhe Pಡಿohibiಣioಟಿ oಜಿ ಇmಠಿಟoಥಿmeಟಿಣ ಚಿs mಚಿಟಿuಚಿಟ Sಛಿಚಿveಟಿgeಡಿs & ಖಿheiಡಿs ಖehಚಿbiಣಚಿಣioಟಿ ಂಛಿಣ ೨೦೧೩” ರೀತ್ಯಾ ಮ್ಯಾನ್ಯುವೆಲ್ ಸ್ಕಾö್ಯವೆಂಜಿAಗ್ ಮತ್ತು ಈ ಪದ್ಧತಿ ಆಚರಣೆಗೆ ಕಾರಣರಾದವರು ಅಪರಾಧಿಗಳಾಗಿರುತ್ತಾರೆ.

ಈ ನಿಯಮದನ್ವಯ ಒಣ ಶೌಚಾಲಯಗಳನ್ನು ಹೊಂದಿರುವುದಾಗಲಿ ತಲೆ ಮೇಲೆ ಮಲ ಹೊರುವುದಾಗಲಿ ಹಾಗೂ ಮಲ ಹೊರುವ ಪದ್ಧತಿಗೆ ಪ್ರಚೋದನೆ ನೀಡುವುದನ್ನು ನಿಷೇದಿಸಿದೆ. ಇನ್ನು ಮುಂದೆ ಶೌಚಾಲಯ ಗುಂಡಿಗಳನ್ನು ಯಾವುದೇ ವ್ಯಕ್ತಿಗಳು ಸ್ವಚ್ಛ ಮಾಡದೆ ಸಕ್ಕಿಂಗ್ ಯಂತ್ರದ ಮೂಲಕವೇ ಸ್ವಚ್ಛಗೊಳಿಸುವಂತೆ ತಿಳಿಸಿದೆ. ಇಲ್ಲವಾದಲ್ಲಿ ಈ ಬಗ್ಗೆ “ಖಿhe Pಡಿohibiಣioಟಿ oಜಿ ಇmಠಿಟoಥಿmeಟಿಣ ಚಿs mಚಿಟಿuಚಿಟ Sಛಿಚಿveಟಿgeಡಿs & ಖಿheiಡಿs ಖehಚಿbiಣಚಿಣioಟಿ ಂಛಿಣ ೨೦೧೩” ರನ್ವಯ ದಂಡ ವಿಧಿಸಲಾಗುವುದು ಹಾಗೂ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡು ಜೈಲು ಶಿಕ್ಷೆಗೆ ಗುರಿಪಡಿಸಲಾಗುತ್ತದೆ.

ಈ ನಿಟ್ಟಿನಲ್ಲಿ ಯಾವುದೇ ಅನಾಹುತಕ್ಕೆ ಆಸ್ಪದ ನೀಡದಂತೆ ಎಚ್ಚರಿಕೆ ವಹಿಸುವಂತೆಯೂ ಸಹ ತಿಳಿಯಪಡಿಸಲಾಗಿದೆ. ಸೆಪ್ಟಿಕ್ ಟ್ಯಾಂಕ್, ಶೌಚಾಲಯದ ಗುಂಡಿಗಳನ್ನು ಸ್ವಚ್ಛಗೊಳಿಸಲು ಪಟ್ಟಣ ಪಂಚಾಯಿತಿಯಲ್ಲಿ ಲಭ್ಯವಿರುವ ಸಕ್ಕಿಂಗ್ ಯಂತ್ರವನ್ನು ಬಳಕೆ ಮಾಡಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಸಾರ್ವಜನಿಕರು ಪಟ್ಟಣ ಪಂಚಾಯಿತಿ ಕಚೇರಿ ದೂರವಾಣಿ ಸಂಖ್ಯೆ ೦೮೨೭೬-೨೮೨೦೩೭ ಗೆ ಸಂಪರ್ಕಿಸಬಹುದು ಎಂದು ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಚಪ್ಪ ಅವರು ತಿಳಿಸಿದ್ದಾರೆ.