ವೀರಾಜಪೇಟೆ, ಜ. ೪: ಕೇರಳದ ಬೈತೂರು ದೇವಾಲಯದ ಆವರಣದಲ್ಲಿ ಭಕ್ತರಿಗೆ ಕುಳಿತುಕೊಳ್ಳಲು ಗ್ಯಾಲರಿ ಹಾಗೂ ಹೊಳೆಗೆ ತೆರಳುವ ರಸ್ತೆಯನ್ನು ತಾ.೯ ರಂದು ಸಂಜೆ ೫ ಗಂಟೆಗೆ ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಉದ್ಘಾಟಿಸಲಿದ್ದಾರೆ ಎಂದು ದೇವಾಲಯದ ತಕ್ಕರಾದ ಪುಗ್ಗೇರ ಪೊನ್ನಪ್ಪ ತಿಳಿಸಿದ್ದಾರೆ.
ಪ್ರೆಸ್ಕ್ಲಬ್ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ನವೆಂಬರ್ ೨೦ ರಂದು ವೀರಾಜಪೇಟೆ ಕೊಡವ ಸಮಾಜದಲ್ಲಿ ಬೈತೂರು ದೇವಾಲಯ ಅಭಿವೃದ್ಧಿ ಬಗ್ಗೆ ನಡೆದ ಸಭೆಯಲ್ಲಿ ಬಾಳೆಯಡ ಕುಟುಂಬದವರು ದೇವಾಲಯದಲ್ಲಿ ಅಂದಾಜು ೨.೩೧ ಲಕ್ಷ ರೂ. ವೆಚ್ಚದಲ್ಲಿ ಭಕ್ತರಿಗೆ ಗ್ಯಾಲರಿಯನ್ನು ನಿರ್ಮಿಸಿಕೊಡುವುದಾಗಿ ನೀಡಿದ್ದ ಭರವಸೆಯಂತೆ ಗ್ಯಾಲರಿ ನಿರ್ಮಿಸಲಾಗಿದೆ. ಅದೇ ರೀತಿ ಭಕ್ತರ ಸಹಾಯದಿಂದ ಹೊಳೆಗೆ ತೆರಳುವ ರಸ್ತೆ ನಿರ್ಮಾಣವಾಗಿದೆ. ಉದ್ಘಾಟನೆ ಸಂದರ್ಭ ಕೇರಳ ದೇವಸಂ ಬೋರ್ಡ್ ಆಡಳಿತ ಮಂಡಳಿಯವರು ಮತ್ತು ಸ್ಥಳೀಯ ಪ್ರಮುಖರು ಭಾಗವಹಿಸಲಿದ್ದಾರೆ ಎಂದು ಪೊನ್ನಪ್ಪ ತಿಳಿಸಿದರು.
ಬೈತೂರು ದೇವಾಲಯದಲ್ಲಿ ವರ್ಷಂಪ್ರತಿ ನಡೆಯುವ ಬೈತೂರು ದೇವರ ವಾರ್ಷಿಕೋತ್ಸವ ತಾ.೧೩ ರಿಂದ ೨೬ ರವರೆಗೆ ನಡೆಯಲಿದೆ. ಪ್ರಮುಖವಾಗಿ ತಾ. ೨೨ ರಂದು ೮ನೇ ಊಟ್ ಉತ್ಸವ ನಡೆಯಲಿದೆ. ತಾ.೨೩ ರಂದು ೯ನೇ ಊಟ್ ಉತ್ಸವ ನಡೆಯಲಿದೆ. ತಾ.೨೪ ರಂದು ಪ್ರಮುಖವಾದ ಪತ್ತ್ಊಟ್ (ಹತ್ತುಊಟ) ಉತ್ಸವ ನಡೆಯಲಿದ್ದು, ಅಂದು ವಿವಿಧ ಪೂಜಾ ಕೈಂಕರ್ಯಗಳು ಜರುಗಲಿದೆ. ಅಪರಾಹ್ನ ಆನೆ ಅಂಬಾರಿಯೊAದಿಗೆ ದೇವರ ಉತ್ಸವ ಮೂರ್ತಿಯ ದೇವಾಲಯ ಪ್ರದಕ್ಷಿಣೆ ನಡೆಯಲಿದೆ. ತಾ.೨೫ ರಂದು ಕೊಡಗಿನ ದೇವರುಗಳ ಸಮಾಗಮ ದೇವರ ದರ್ಶನ ಕಾರ್ಯ ನಡೆಯಲಿದೆ.
ಹೆಚ್ಚಿನ ವಿವರಗಳಿಗೆ ತಕ್ಕರಾದ ಪುಗ್ಗೇರ ಪೊನ್ನಪ್ಪ ೯೬೬೩೯೭೭೩೦೪, ಟ್ರಸ್ಟಿ ಮಾಳೇಟಿರ ರತ್ನ ಸುಬ್ಬಯ್ಯ ೯೯೦೧೨೦೯೫೩೦ ಅವರುಗಳನ್ನು ಸಂಪರ್ಕಿಸಬಹುದಾಗಿದೆ.
ಗೋಷ್ಠಿಯಲ್ಲಿ ಟ್ರಸ್ಟಿ ಮಾಳೇಟಿರ ರತ್ನ ಸುಬ್ಬಯ್ಯ, ಚೇಂದAಡ ಶಿವಕುಮಾರ್, ಮಾಳೇಟಿರ ಅಜಿತ್ ಪೂವಣ್ಣ ಮತ್ತು ಪುಗ್ಗೇರ ನಂದ ಉಪಸ್ಥಿತರಿದ್ದರು.