ಮಡಿಕೇರಿ, ಜ. ೪: ಸೂಕ್ಷö್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಮಂತ್ರಾಲಯ, ಮಂಗಳೂರು ಭಾರತ ಸರ್ಕಾರದ ಅಧೀನದಲ್ಲಿ, ಒಂದು ದಿನದ ಪಿ.ಎಂ.ವಿಶ್ವಕರ್ಮ ಯೋಜನೆಯ ಅರಿವು ಕಾರ್ಯಕ್ರಮವು ಬುಧವಾರ ನಡೆಯಿತು.

ಕೇಂದ್ರ ಸರ್ಕಾರದ ಪ್ರಮುಖ ಯೋಜನೆಯಾದ ಪಿ.ಎಂ.ವಿಶ್ವಕರ್ಮ ಯೋಜನೆಯು ನಗರ/ ಗ್ರಾಮೀಣ ಪ್ರದೇಶದ ಸಾಂಪ್ರ‍್ರದಾಯಿಕ ಕುಶಲಕರ್ಮಿಗಳು ಮತ್ತು ಕರಕುಶಲ ಜನರನ್ನು ಬೆಂಬಲಿಸುತ್ತದೆ. ಈ ಯೋಜನೆಯು ಮೊದಲ ಹಂತದ ೧೮ ಸಾಂಪ್ರದಾಯಿಕ ವೃತ್ತಿಗಳು ಬಡಗಿ, ದೋಣಿ ತಯಾರಕರು, ಆರ್ಮರ್, ಕಮ್ಮಾರ ಮತ್ತು ಟೂಲ್ ಕಿಟ್ ಮೇಕರ್, ಸುತ್ತಿಗೆ ಮತ್ತು ಟೂಲ್ ಕಿಟ್ ಮೇಕರ್, ಬೀಗ ತಯಾರಕರು, ಚಿನ್ನ ಬೆಳ್ಳಿ ತಯಾರಕರು, ಮಡಿಕೆ ತಯಾರಕರು, ಶಿಲ್ಪಿಗಳು, ಚಮ್ಮಾರರು, ರಾಜ ಮೇಸ್ತಿçÃ, ಬುಟ್ಟಿ, ಚಾಪೆ, ಪೊರಕೆ ಮತ್ತು ತೆಂಗಿನ ನಾರಿನ ನೇಕಾರರು, ಗೊಂಬೆ ತಯಾರಕರು, ಕ್ಷೌರಿಕರು, ಹೂ ಮಾಲೆ ಮಾಡುವವರು, ದೋಭಿ, ಟೈಲರ್, ಮೀನು ಬಲೆ ಹೆಣೆಯುವವರು ಹೀಗೆ ಹಲವರಿಗೆ ಸೌಲಭ್ಯ ಕಲ್ಪಿಸಲಾಗುತ್ತದೆ.

ಕುಶಲಕರ್ಮಿಗಳಿಗೆ: ಕರಕುಶಲ ಕರ್ಮಿಗಳಿಗೆ ಪ್ರಧಾನಮಂತ್ರಿ ವಿಶ್ವಕರ್ಮ ಪ್ರಮಾಣ ಪತ್ರ ಮತ್ತು ಗುರತಿನ ಚೀಟಿಯೊಂದಿಗೆ ಮಾನ್ಯತೆ ನೀಡಲಾಗುತ್ತದೆ. ಕೌಶಲ್ಯ, ಉನ್ನತೀಕರಣ, ಟೂಲ್ ಕಿಟ್ ಪ್ರೋತ್ಸಾಹ, ಡಿಜಿಟಲ್ ವಹಿವಾಟು ಮತ್ತು ಮಾರ್ಕೆಟಿಂಗ್ ಬೆಂಬಲವನ್ನು ಒದಗಿಸುತ್ತದೆ. ಕ್ರೇಡಿಟ್ ಬೆಂಬಲವನ್ನು ೫% ರಿಯಾಯಿತಿ ಬಡ್ಡಿಯ ದರದಲ್ಲಿ ೧ ಲಕ್ಷ (ಒಂದನೇ ಕಂತು) ಮತ್ತು ೨ ಲಕ್ಷ (೨ನೇ ಕಂತು) ಪ್ರೋತ್ಸಾಹವನ್ನು ಒದಗಿಸುತ್ತದೆ.

ಸೆಮಿನಾರ್ ಕಂ ಅವೆರ್‌ನೆಸ್ ಪ್ರೋಗ್ರಾಂನಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್. ವೀಣಾ ಅವರು ಮಾತನಾಡಿ, ಈ ಯೋಜನೆಯ ಪ್ರಯೋಜನವನ್ನು ಪ್ರತಿಯೊಬ್ಬ ಕುಶಲಕರ್ಮಿಗಳು ಸದುಪಯೋಗಪಡಿಸಿಕೊಳ್ಳುವಂತಾಗಬೇಕು ಎಂದರು.

ಮಂಗಳೂರು, ಎಂಎಸ್‌ಎAಇ. ಡಿ.ಎಫ್.ಓ, ಜಂಟಿ ನಿರ್ದೇಶಕರಾದ ಕೆ. ದೇವರಾಜ್ ಯೋಜನೆಯ ಬಗ್ಗೆ ಸವಿವರವಾಗಿ ಮಾತನಾಡಿ, ಯೋಜನೆಯ ಲಾಭ ಪಡೆದುಕೊಳ್ಳುವ ಬಗ್ಗೆ ಮಾಹಿತಿ ನೀಡಿದರು.

ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಟಿ.ದಿನೇಶ್ ಅವರು ಈ ಯೋಜನೆಯ ಅನುಷ್ಠಾನದ ಸ್ಥಿತಿಗತಿಗಳ ಬಗ್ಗೆ ಮಾತನಾಡಿದರು.

ಅಧಿವೇಶನದ ಸಮಯದಲ್ಲಿ ಲೀಡ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕರಾದ ಗಂಗಾಧರ್ ನಾಯಕ್, ಲೀಡ್ ಬ್ಯಾಂಕ್‌ನ ದಯಾವತಿ ಅವರು ಹಣಕಾಸಿನ ಶಿಸ್ತಿನ ಬಗ್ಗೆ, ಯೋಜನೆಗೆ ಸಂಬAಧಿಸಿದAತೆ ಸಾಲ ಬಿಡುಗಡೆಗಾಗಿ ದಾಖಲಾತಿ ಗಳನ್ನು ಹೇಗೆ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಮಾಹಿತಿಯಿತ್ತರು. ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆಯ ಜಿಲ್ಲಾ ಸಂಯೋಜಕರಾದ ರವಿಕುಮಾರ್ ಯೋಜನೆಗೆ ಸಂಬAಧಿಸಿದAತೆ ತರಬೇತಿ ಕೇಂದ್ರದ ಗುರುತಿಸುವಿಕೆಯ ಬಗ್ಗೆ ಮಾತನಾಡಿದರು.

ಸಾಮಾನ್ಯ ಸೇವಾ ಕೇಂದ್ರದ ಮನೋಜ್ ಯೋಜನೆಗೆ ಸಂಬAಧಿಸಿ ದಂತೆ ಸಂಬAಧಿಸಿದ ದಾಖಲಾತಿಗಳ ಅಗತ್ಯತೆಯ ಬಗ್ಗೆ ತಿಳಿಸಿದರು.

ಜೆಮ್ ಪೋರ್ಟಲ್‌ನ ಸಂಯೋಜಕರಾದ ಅನುಪಮಾ ಜೆಮ್ ಪೋರ್ಟಲ್‌ನಲ್ಲಿ ಹೇಗೆ ನೋಂದಾವಣೆ ಮಾಡಿಕೊಂಡು ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿಕೊಳ್ಳ ಬೇಕೆಂದು ತಿಳಿಸಿದರು.

ಮಂಗಳೂರು ಸಹಾಯಕ ನಿರ್ದೇಶಕರು, ಎಂ.ಎಸ್.ಎA.ಇ. ಡಿ.ಎಫ್.ಓ. ಸುಮನ್ ಎಸ್. ರಾಜು ಅವರು ಕರ್ನಾಟಕ ರಾಜ್ಯ ಟೈರ‍್ಸ್ ಅಶೋಸಿಯೇಷನ್‌ಗಾಗಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು.